ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿನ ಬೆಲೆ ಏರಿದೆ, ವಿವರಗಳು ಇಲ್ಲಿದೆ

|
Google Oneindia Kannada News

ಬೆಂಗಳೂರು, ನ.3 : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಭಾನುವಾರ ನೀರಿನ ದರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಶಾಪಿಂಗ್ ಮಾಲ್‌ಗಳಿಗೆ ಮತ್ತು ಸೂಪರ್ ಬಜಾರ್‌ಗಳಿಗೆ ವಿಶೇಷ ಒಳಚರಂಡಿ ಶುಲ್ಕಗಳನ್ನು ವಿಧಿಸಲಾಗಿದೆ.

ಬೆಂಗಳೂರು ಜಲಮಂಡಳಿ ಕಳೆದ ಕೆಲವು ತಿಂಗಳ ಹಿಂದೆ ಸಲ್ಲಿಸಿದ್ದ ದರ ಏರಿಕೆ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಆದ್ದರಿಂದ ಗೃಹಪಯೋಗಿ ಮತ್ತು ವಾಣಿಜ್ಯ ಉದ್ದೇಶ ಬಳಸುವ ನೀರಿನ ದರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಏರಿಕೆ ಮಾಡಲಾಗಿದೆ. [ಕಾವೇರಿ ನೀರಿನ ದರ ಏರಿಕೆ ಶಾಕ್]

Water

ನೀರಿನ ದರದ ಜೊತೆಗೆ ಒಳಚರಂಡಿ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಮೊದಲ ಬಾರಿಗೆ ಶಾಪಿಂಗ್ ಮಾಲ್‌ಗಳು ಮತ್ತು ಸೂಪರ್‌ ಬಜಾರ್‌ಗಳಿಗೆ ವಿಶೇಷ ಒಳಚರಂಡಿ ದರಗಳನ್ನು ವಿಧಿಸಲಾಗಿದೆ. ಹೋಟೆಲ್‌ಗಳು ಪ್ರತಿ ತಿಂಗಳು 500 ರೂ. ಬದಲು 2000 ರೂ.ಗಳ ವಿಶೇಷ ಒಳಚರಂಡಿ ಶುಲ್ಕಗಳನ್ನು ಪಾವತಿ ಮಾಡಬೇಕಾಗಿದೆ.

ಕಳೆದ ಒಂಬತ್ತು ವರ್ಷಗಳ ಬಳಿಕ ದರ ಏರಿಕೆ ಮಾಡಿರುವ ತನ್ನ ನಿರ್ಧಾರವನ್ನು ಜಲಮಂಡಳಿ ಸಮರ್ಥಿಸಿಕೊಂಡಿದ್ದು, ವಿದ್ಯುತ್ ದರ ಏರಿಕೆ, ಕಾಮಗಾರಿಗಳಿಗೆ ಅನುದಾನದ ಅಗತ್ಯವಿರುವ ಹಿನ್ನಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಹೇಳಿದೆ.

ಗೃಹ ಬಳಕೆ ನೀರಿನ ದರ ಪಟ್ಟಿ
ಬಳಕೆ ಪ್ರಮಾಣ ಹಳೇ ದರ ಹೊಸ ದರ
0-8000 ಲೀಟರ್
6 ರೂ.
7 ರೂ.
8000-25000 9 ರೂ.
11 ರೂ.
25000-50000 15 ರೂ.
26 ರೂ.
50000-75000 30 ರೂ.
45 ರೂ.
ಗೃಹೇತರ ನೀರಿನ ಬಳಕೆ ದರ
0-10000 ಲೀ 36 ರೂ.
50 ರೂ.
10000-25000 ಲೀ 39 ರೂ. 57 ರೂ.
25000-50000 ಲೀ 44 ರೂ.
65 ರೂ.
50000-75000 ಲೀ 51 ರೂ.
76 ರೂ.
75000 ಲೀ ನಂತರ 57 ರೂ.
87 ರೂ.
ಒಳಚರಂಡಿ ದರ
ಬಳಕೆ ಪ್ರಮಾಣ ಹಳೇ ದರ ಹೊಸ ದರ
ಎಲ್ಲಾ ರೀತಿಯ ಹೋಟೆಲ್
500 ರೂ.
2000 ರೂ.
ದರ್ಶಿನಿ, ಕೆಫೆಟೇರಿಯಾ, ಕಾಫಿಬಾರ್ 500 ರೂ.
1000 ರೂ.
51ರಿಂದ 100 ಕೊಠಡಿಯ ಸ್ಟಾರ್ ಹೋಟೆಲ್ 10000 ರೂ.
15000 ರೂ.
50ಕ್ಕಿಂತ ಕಡಿಮೆ ಕೊಠಡಿಗಳ ಹೋಟೆಲ್‌ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ
100ಕ್ಕಿಂತ ಹೆಚ್ಚು ಕೊಠಡಿಗಳು
10000 ರೂ.
20000 ರೂ.
English summary
After 9 years The Bangalore Water Supply and Sewerage Board (BWSSB) increased water and sanitary charges. New tariff of both domestic and commercial connections come to effect form November 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X