ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೃದಯವಂತಿಕೆ ಮೆರೆದ ಟ್ರಾಫಿಕ್ ಪೊಲೀಸ್ ಕುಮಾರ್

ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸ್ ಆಗಿರುವ ಕುಮಾರ್ ಅವರಂಥ ಹೃದಯವಂತ ವ್ಯಕ್ತಿಯನ್ನು ನೇಮಕ ಮಾಡಿದ್ದಕ್ಕೆ ಮತ್ತು ಅವರಿಗೆ ಅಧಿಕಾರ ಕೊಟ್ಟಿದ್ದನ್ನು ಪ್ರಶಂಸಿಸುವ ಉದ್ದೇಶದಿಂದ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.

By Prasad
|
Google Oneindia Kannada News

ಬೆಂಗಳೂರು, ನವೆಂಬರ್ 11 : ಸಮವಸ್ತ್ರ ಧರಿಸಿ ಕಟ್ಟುನಿಟ್ಟಾಗಿ ನಿಯಮ ಪಾಲಿಸುವ ಪೊಲೀಸರು ಕಟಕು ಹೃದಯದವರೇನಲ್ಲ, ಅವರಲ್ಲೂ ಹೃದಯವಂತಿಕೆ ಮನೆಮಾಡಿರುತ್ತದೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ.

ಈ ಘಟನೆಯನ್ನು ಕಣ್ಣಾರೆ ಕಂಡಿರುವ ವ್ಯಕ್ತಿಯೊಬ್ಬರು ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಶ್ಲಾಘಿಸಿ ಪತ್ರ ಬರೆದಿದ್ದು, ಇಂಥ ಪೊಲೀಸರನ್ನು ನೇಮಕ ಮಾಡಿದ್ದಕ್ಕಾಗಿ ಇಲಾಖೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಮನಃಪೂರ್ವಕ ಅಭಿನಂದನೆಗಳು ಕುಮಾರ್.

ನಮಸ್ಕಾರ ಸರ್,

ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸ್ ಆಗಿರುವ ಮಿ. ಕುಮಾರ್ ಅವರಂಥ ಹೃದಯವಂತ ವ್ಯಕ್ತಿಯನ್ನು ನೇಮಕ ಮಾಡಿದ್ದಕ್ಕೆ ಮತ್ತು ಅವರಿಗೆ ಅಧಿಕಾರ ಕೊಟ್ಟಿದ್ದನ್ನು ಪ್ರಶಂಸಿಸುವ ಉದ್ದೇಶದಿಂದ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. [ಸಮಯಪ್ರಜ್ಞೆ ಮೆರೆದ ಬೆಂಗಳೂರು ಟ್ರಾಫಿಕ್ ಪೊಲೀಸ್ ಗೆ ಸಲಾಂ!]

Brilliant humanitarian gesture by Kumar, Bengaluru traffic police

ನವೆಂಬರ್ 9ರ ಮುಂಜಾನೆ 7.30ರಿಂದ 7.45ರ ಸುಮಾರಿಗೆ, ಗೋಲ್ಫ್ ಕೋರ್ಸ್ ಹತ್ತಿರವಿರುವ ವಿಂಡ್ಸರ್ ಮ್ಯಾನರ್ ವೃತ್ತದ ಬಳಿ ಮಹಿಳೆಯೊಬ್ಬರು ನನ್ನನ್ನು ತಡೆದರು. ಆ ಮಹಿಳೆಯನ್ನು ಅವರ ಮಕ್ಕಳೊಂದಿಗೆ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಕಾರಿನ ಡ್ರೈವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಅದೇ ಸಮಯದಲ್ಲಿ, ಇನ್ನಿಬ್ಬರು ಸಂಚಾರಿ ಪೊಲೀಸರನ್ನು ಕೂಡ ಕರೆದು, ಅವರಲ್ಲಿ ಕುಮಾರ್ ಅವರ ಸಹಾಯವನ್ನು ಯಾಚಿಸಿದರು.

ಕೂಡಲೆ ಕಾರ್ಯತತ್ಪರರಾದ ಕುಮಾರ್, ಡ್ರೈವರನ್ನು ಪಕ್ಕದ ಸೀಟಿನಲ್ಲಿ ಕುಳ್ಳಿರಿಸಿ ತಾವು ಡ್ರೈವರ್ ಸ್ಥಾನಕ್ಕೆ ಬಂದರು. ಸ್ವಲ್ಪವೂ ತಡಮಾಡದೆ ಹತ್ತಿರದಲ್ಲೇ ಇರುವ ಮಲ್ಲಿಗೆ ಆಸ್ಪತ್ರೆಗೆ ಕಾರನ್ನು ತೆಗೆದುಕೊಂಡು ಹೋದರು. ನಡೆದುದ್ದನ್ನು ಸಂಕ್ಷಿಪ್ತವಾಗಿ ಆಸ್ಪತ್ರೆ ಸಿಬ್ಬಂದಿಗೆ ವಿವರಿಸಿದರು. [ಚಿಕ್ಕಪೇಟೆ ಸಂಚಾರಿ ಪೊಲೀಸರ ಮಾನವೀಯತೆಗೆ ಸಲಾಂ]

ತುರ್ತುನಿಗಾ ಘಟಕದ ಸಿಬ್ಬಂದಿ ಡ್ರೈವರನ್ನು ಪರೀಕ್ಷಿಸಿ ಹೃದಯ ನಿಗಾ ಘಟಕಕ್ಕೆ ಕರೆದುಕೊಂಡು ಹೋದರು. ಇಷ್ಟಕ್ಕೆ ಸುಮ್ಮನಾಗದೆ ಕುಮಾರ್ ಅವರು ಹೃದಯ ನಿಗಾ ಘಟಕಕ್ಕೆ ತೆರಳಿ ಕೂಡಲೆ ಚಿಕಿತ್ಸೆ ಆರಂಭಿಸುವಂತೆ ಸೂಚಿಸಿದರು.

ಹಣ ಕಟ್ಟಲು ಡ್ರೈವರ್ ಕುಟುಂಬಸ್ಥರು ಅಲ್ಲಿಲ್ಲದಿದ್ದರಿಂದ ಚಿಕಿತ್ಸೆ ನಿಲ್ಲಬಾರದು. ಆಗತ್ಯಬಿದ್ದರೆ ತಾವೇ ಖರ್ಚನ್ನು ಭರಿಸುವುದಾಗಿ ಆಸ್ಪತ್ರೆ ಸಿಬ್ಬಂದಿಗೆ ಕುಮಾರ್ ತಿಳಿಸಿದರು. ಡ್ರೈವರ್ ಮನೆಯವರಿಗೆ ಫೋನ್ ಮಾಡಿ ಶಾಂತವಾಗಿ ಮತ್ತು ಸಂಕ್ಷಿಪ್ತವಾಗಿ ನಡೆದುದ್ದನ್ನು ವಿವರಿಸಿದರು ಮತ್ತು ಗಾಬರಿಯಾಗಬಾರದೆಂದು ತಿಳಿಸಿದರು. [ನೀವು ಸಿಗರೇಟು ಯಾಕೆ ಬಿಡಬೇಕು, ಇಲ್ಲಿವೆ 10 ಕಾರಣಗಳು]

ಈ ಅನುಭವ ನೋಡಿ ನಿಜಕ್ಕೂ ನನಗೆ ಹೃದಯತುಂಬಿ ಬಂದಿತು.

ವಂದನೆಗಳು,

ಶಂಕರ್ ವಿಶ್ವನಾಥನ್

ಜಗ್ಗೇಶ್ ಟ್ವೀಟ್ : ಈ ಸುದ್ದಿಯನ್ನು ಬೆಂಗಳೂರು ಟ್ರಾಫಿಕ್ ಪೊಲೀಸ್ ಟ್ವಿಟ್ಟರಿನಲ್ಲಿ ಪ್ರಕಟಿಸಿದ್ದಾರೆ. ಆದಕ್ಕೆ ಪ್ರತಿಯಾಗಿ ನಟ ಜಗ್ಗೇಶ್ ಮಾಡಿರುವ ಟ್ವೀಟ್ ಹೀಗಿದೆ : "ಇದೆ ಮಾನವಿತೆಯ ಮೌಲ್ಯ. ಹೃದಯದಿಂದ ನಿಮಗೆ ನನ್ನಿಂದ ನಿಮ್ಮ ಬಂಗಾರದ ಪಾದಕ್ಕೆ ನಮಸ್ಕಾರ. ನೂರ್ಕಾಲ ಬಾಳಿ ಮಹನೀಯರೆ :)"

English summary
Brilliant humanitarian gesture by Kumar, Bengaluru traffic police. High Grounds traffic police Mr Kumar acted in time by taking car driver, who had suffered chest pain, to Mallige hospital for treatment. Kumar also assured staff that he would pay the expenses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X