ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಲೆಮೇಲೆ ಇಟ್ಟಿಗೆ ಬಿದ್ದು ಯುವತಿ ಸಾವು, ಇಬ್ಬರ ಬಂಧನ

By Vanitha
|
Google Oneindia Kannada News

ಬೆಂಗಳೂರು,ಮಾರ್ಚ್,17: ಇನ್ಫೋಸಿಸ್ ಸಂದರ್ಶನಕ್ಕೆಂದು ಆಗಮಿಸಿದ್ದ ಯುವತಿಯ ತಲೆ ಮೇಲೆ ಇಟ್ಟಿಗೆ ಬಿದ್ದು ಮೃತಳಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರು ಸೇರಿದಂತೆ ಇಬ್ಬರನ್ನು ಜೆ.ಪಿ ನಗರದ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕಟ್ಟಡ ಮಾಲೀಕರಾದ ಮೋಹನ್ ರಾಜ್, ಉಪ ಗುತ್ತಿಗೆದಾರರಾದ ನಂಜುಂಡ ಅವರನ್ನು ಬುಧವಾರ ಬಂಧಿಸಲಾಗಿದ್ದು, ನ್ಯಾಯಾಂಗ ತನಿಖೆಗೆ ಒಳಪಡಿಸಿ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ. ಜೆಪಿ ನಗರದ ಪೊಲೀಸರು ಈಕೆಯ ಸಾವಿನ ಬಗ್ಗೆ ನಿಖರವಾದ ಮಾಹಿತಿ ಕಲೆಹಾಕುತ್ತಿದ್ದಾರೆ.[ಇನ್ಫೋಸಿಸ್ ಸಂದರ್ಶನ, ತಲೆಮೇಲೆ ಇಟ್ಟಿಗೆ ಬಿದ್ದು ಯುವತಿ ಸಾವು]

Bricks fell case, two people arrested in Bengaluru

ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ಪದವೀಧರೆಯಾದ ಆಂಧ್ರಪ್ರದೇಶದ ಚಿತ್ತೂರಿನ ಮೋನಿಕಾ ಎಂಬಾಕೆ ಇನ್ಫೋಸಿಸ್ ವಾಕ್ ಇನ್ ಸಂದರ್ಶನಕ್ಕೆ ತನ್ನ ಸಹೋದರ ಸಂಬಂಧಿ ಜೊತೆ ಆಗಮಿಸಿದ್ದಳು. ಸಂದರ್ಶನ ಎದುರಿಸಿ ಹೊರಬಂದ ಬಳಿಕ ಮನೆಯವರೊಂದಿಗೆ ಮೊಬೈಲಿನಲ್ಲಿ ಮಾತನಾಡುತ್ತಿದ್ದಳು.

ಆಗ ಪಕ್ಕದಲ್ಲಿ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಮೇಲಿನಿಂದ ಆಕೆಯ ತಲೆ ಮೇಲೆ ಇಟ್ಟಿಗೆ ಬಿದ್ದಿತ್ತು. ತಕ್ಷಣ ಆಕೆಯನ್ನು ಹತ್ತಿರದ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು.[ಕ್ರೀಡಾ ಉತ್ಪನ್ನ ಸಂಸ್ಥೆ Whoopನಲ್ಲಿ ಇನ್ಫೋಸಿಸ್ ಹೂಡಿಕೆ]

ಇನ್ಫೋಸಿಸ್ ಸಂಸ್ಥೆಯು ಮೋನಿಕಾಳ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲು ಮುಂದಾಗಿದ್ದು, ತಮ್ಮ ಕಂಪನಿ ವಿರುದ್ಧ ಕೇಳಿ ಬರುತ್ತಿರುವ ನಿರ್ಲಕ್ಷ್ದ ಮಾತುಗಳನ್ನು ತಳ್ಳಿ ಹಾಕಿದ್ದಾರೆ.

English summary
The J.P Nagar Police have arrested two people Mohan Raj (owner of the Building), Nanjunda (sub-contractor) in the connection with the death of 23 year old Monica Reddy. Monika, a B.Sc. graduate, had travelled from Chittoor, Andhra Pradesh, to attend an interview at Infosys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X