ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ 6 ನಿಮಿಷಕ್ಕೊಂದು ರೈಲು

|
Google Oneindia Kannada News

ಬೆಂಗಳೂರು, ಜುಲೈ 20 : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ. ಬೈಯಪ್ಪನಹಳ್ಳಿ-ಮೈಸೂರು ರಸ್ತೆ (ನಾಯಂಡಹಳ್ಳಿ) ನೇರಳೆ ಮಾರ್ಗದಲ್ಲಿ ಬುಧವಾರದಿಂದ 6 ನಿಮಿಷಕ್ಕೊಂದು ನಮ್ಮ ಮೆಟ್ರೋ ರೈಲು ಸಂಚಾರ ನಡೆಸಲಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮವು ಪೀಕ್‌ ಅವರ್‌ನಲ್ಲಿ ಪ್ರಯಾಣಿಕರು ರೈಲಿಗೆ ಕಾಯುವ ಸಮಯವನ್ನು ತಪ್ಪಿಸಲು ಈ ನಿರ್ಧಾರ ಕೈಗೊಂಡಿದೆ. ಪೀರ್ ಅವರ್‌ನಲ್ಲಿ (ಬೆಳಗ್ಗೆ ಮತ್ತು ಸಂಜೆ) 6 ನಿಮಿಷಕ್ಕೊಂದು ರೈಲು ಸಂಚಾರ ನಡೆಸುತ್ತದೆ.

namma metro

ಈ ಮೊದಲು ಪೀಕ್ ಅವರ್‌ನಲ್ಲಿ 8 ನಿಮಿಷಕ್ಕೊಂದು ರೈಲು ಮತ್ತು ಇತರ ಅವಧಿಯಲ್ಲಿ 15 ನಿಮಿಷಕ್ಕೊಂದು ರೈಲು ಸಂಚಾರ ನಡೆಸುತ್ತಿತ್ತು. ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವಿನ ಪೂರ್ವ-ಪಶ್ಚಿಮ ಕಾರಿಡಾರ್‌ನ 18 ಕಿ.ಮೀ ಮಾರ್ಗದಲ್ಲಿ ಸದ್ಯ, 15 ರೈಲುಗಳು ಸಂಚಾರ ನಡೆಸುತ್ತಿವೆ.

Read Also : ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ

ಪೂರ್ವ-ಪಶ್ಚಿಮ ಕಾರಿಡಾರ್‌ ನೇರಳೆ ಮಾರ್ಗದಲ್ಲಿನ ಸಂಚಾರಕ್ಕೆ 40 ರೂ. ಗರಿಷ್ಠ ಪ್ರಯಾಣದರ ನಿಗದಿಪಡಿಸಲಾಗಿದೆ. ಪೀಕ್ ಅವರ್‌ನಲ್ಲಿ ರೈಲು ಸಂಪೂರ್ಣವಾಗಿ ತುಂಬಿರುತ್ತದೆ. ಈ ಮಾರ್ಗದಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ತನಕ ರೈಲು ಸಂಚಾರ ನಡೆಸುತ್ತಿದ್ದು, ಸಮಯ ವಿಸ್ತರಣೆ ಮಾಡಿ ಎಂಬ ಬೇಡಿಕೆಯೂ ಇದೆ.

Read Also : ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ ದರ ಪಟ್ಟಿ

2016ರ ಏಪ್ರಿಲ್ 29ರಂದು ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ. ಈ ಮಾರ್ಗದಲ್ಲಿ ಹೆಚ್ಚು ಜನರು ಪ್ರಯಾಣಿಸುವುದರಿಂದ ಹೊಸದಾಗಿ ಮೂರು ಕೋಚ್‌ಗಳನ್ನು ಜೋಡಿಸುವ ಪ್ರಸ್ತಾವನೆಯೂ ಬಿಎಂಆರ್‌ಸಿಎಲ್ ಮುಂದಿದೆ.

Read Also : ನಮ್ಮ ಮೆಟ್ರೋ ಸುರಂಗ ಮಾರ್ಗದ ವಿಶೇಷತೆಗಳು

English summary
Starting Wednesday, July 20, 2016 a Metro train will run every 6 minutes between Baiyappanahalli-Mysuru Road during morning and evening peak hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X