ಜೂನ್ 4ರಿಂದ ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ಪಡೆಯಿರಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 04 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜೂನ್ 4ರ ಶನಿವಾರದಿಂದ ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ವಿತರಣೆ ಮಾಡಲಿದೆ. ನಗರದ 42 ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4 ಗಂಟೆಯ ತನಕ ಪಾಸುಗಳನ್ನು ಪಡೆಯಬಹುದಾಗಿದೆ.

2016-17ನೇ ಸಾಲಿನ ರಿಯಾಯಿತಿ ದರದ ಪಾಸುಗಳನ್ನು ಜೂನ್ 4ರಿಂದ ವಿತರಣೆ ಮಾಡಲಾಗುತ್ತದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ. ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಪಾಸ್‌ಗಳನ್ನು ವಿತರಿಸಲಾಗುತ್ತದೆ. [ಭಾಷೆ ಮರೆತ ಬಿಎಂಟಿಸಿ: ಸರ್ಕಾರಕ್ಕೆ ಹನುಮಂತಯ್ಯ ಪತ್ರ]

bmtc

ಪಾಸು ಪಡೆಯಲು ಬಯಸುವ ವಿದ್ಯಾರ್ಥಿಗಳು ಅರ್ಜಿಯ ಜೊತೆ ಪ್ರಸ್ತುತ ಸಾಲಿನ ಶಾಲೆ/ಕಾಲೇಜಿನ ಶುಲ್ಕ ಪಾವತಿ ರಸೀದಿ, ಗುರುತಿನ ಚೀಟಿ, ಆಧಾರ್ ಕಾರ್ಡ್ ನಕಲು ಪ್ರತಿ ಜೊತೆ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. [ಬಿಎಂಟಿಸಿ ಬಸ್ಸುಗಳ ಪ್ರಯಾಣ ದರ ಹೆಚ್ಚಳ]

ವಿದ್ಯಾರ್ಥಿ ಪಾಸು ದರಪಟ್ಟಿ

* ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು (1-7) 10 ತಿಂಗಳಿಗೆ 130 ರೂ.
* ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ ಹುಡುಗರಿಗೆ 730, ಹುಡುಗಿಯರಿಗೆ 530 ರೂ.
* ಪಿಯುಸಿ ವಿದ್ಯಾರ್ಥಿಗಳಿಗೆ 10 ತಿಂಗಳಿಗೆ 1,030 ರೂ.
* ಪದವಿ ವಿದ್ಯಾರ್ಥಿಗಳಿಗೆ 5 ತಿಂಗಳಿಗೆ 580, 10 ತಿಂಗಳಿಗೆ 1,030, 12 ತಿಂಗಳಿಗೆ 1,230 ರೂ.
* ವೃತ್ತಿಪರ ಕಾಲೇಜು ವಿದ್ಯಾರ್ಥಿಗಳಿಗೆ 6 ತಿಂಗಳಿಗೆ 705, 12 ತಿಂಗಳಿಗೆ 1,280 ರೂ.
* ತಾಂತ್ರಿಕ, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ 5 ತಿಂಗಳು 830, 10 ತಿಂಗಳು 1,530, 12 ತಿಂಗಳು 1,810
* ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ 5 ತಿಂಗಳಿಗೆ 730, 10 ತಿಂಗಳಿಗೆ 1,330, 12 ತಿಂಗಳಿಗೆ 1,610 ರೂ.

English summary
Bangalore Metropolitan Transport Corporation (BMTC) will distribute student bus pass from June 4th Saturday, 2016. Here are the fare list.
Please Wait while comments are loading...