ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂನ್ 17ರಿಂದ ಬಿಎಂಟಿಸಿ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್‌

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಜೂನ್ 17ರಿಂದ ತನ್ನ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್‌ ಗಳನ್ನು ವಿತರಿಸಲಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 12: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಜೂನ್ 17ರಿಂದ ತನ್ನ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್‌ ಗಳನ್ನು ವಿತರಿಸಲಿದೆ.

ಮೊದಲ ಹಂತದಲ್ಲಿ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚರಿಸುವ ವಾಯುವಜ್ರ ಹಾಗೂ ವಜ್ರ ಬಸ್‌ಗಳ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್‌ ನೀಡಲಾಗುತ್ತದೆ. ಮುಂದೆ ಎಲ್ಲಾ ಬಸ್ ಗಳಿಗೆ ಈ ಸ್ಮಾರ್ಟ್ ಕಾರ್ಡ್ ಸೌಲಭ್ಯ ವಿಸ್ತರಿಸಲಾಗುತ್ತದೆ.

BMTC set to launch smart cards on June 17

ಹಲವು ಉಪಯೋಗ

ಸ್ಮಾರ್ಟ್ ಕಾರ್ಡ್‌ ಬಸ್ ಪ್ರಯಾಣಕ್ಕೆ ಮಾತ್ರವಲ್ಲದೆ ಮೆಟ್ರೊ ಪ್ರಯಾಣಕ್ಕೆ, ಪಾರ್ಕಿಂಗ್ ಶುಲ್ಕ ಪಾವತಿಗೆ ಹಾಗೂ ವ್ಯಾಪಾರಿ ಮಳಿಗೆಗಳಲ್ಲಿ ಹಣ ಪಾವತಿಗೂ ಬಳಸಬಹುದಾಗಿದೆ. ಕಳೆದು ಹೋದರೆ ಗ್ರಾಹಕರಿಗೆ ಬ್ಲಾಕ್ ಮಾಡುವ ಅವಕಾಶವೂ ಇದರಲ್ಲಿದೆ. ಹಾಗಾಗಿ ನಿರ್ಭೀತಿಯಿಂದ ಇವುಗಳನ್ನು ಬಳಸಬಹುದು.

ಇನ್ನು ಸಾಮಾನ್ಯ ಎಟಿಎಂ ಗಾತ್ರದಲ್ಲಿರುವ ಇದರ ಬಳಕೆಯೂ ಸುಲಭ. ಎಲೆಕ್ಟ್ರಾನಿಕ್ ಟಿಕೆಟ್‌ ಯಂತ್ರಕ್ಕೆ ಕಾರ್ಡ್ ನೀಡಿದರೆ ನಿಗದಿತ ಮೊತ್ತ ಪಡೆದುಕೊಳ್ಳುತ್ತದೆ. ನಿರ್ವಾಹಕರಿಗೂ ಇದರಿಂದ ಹಣ ಸ್ವೀಕರಿಸುವುದು, ಚಿಲ್ಲರೆ ಕೊಡುವ ತಾಪತ್ರಯ ಇರುವುದಿಲ್ಲ.

ಪ್ರಯಾಣಿಕರಿಗೆ ನಗದು ರಹಿತ ಸೇವೆ ನೀಡಲು ಸ್ಮಾರ್ಟ್ ಕಾರ್ಡ್ ಜಾರಿಗೆ ತರಲು ಬಿಎಂಟಿಸಿ 2015ರಲ್ಲೇ ಸಿದ್ಧತೆ ನಡೆಸಿತ್ತು. ಹಲವು ಅಡೆತಡೆಗಳ ನಂತರ ಇದೀಗ ಸ್ಮಾರ್ಟ್ ಕಾರ್ಟ್ ಜಾರಿಗೆ ಬರುತ್ತಿದೆ.

English summary
Bengaluru Metropolitan Transport Corporation (BMTC) is planning to introduce smart cards for passengers making their commute cashless.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X