ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಪ್ಪು ಹಲಗೆಯ ಬಿಎಂಟಿಸಿ ಮಾಸಿಕ ಪಾಸು ರದ್ದು?

By ರವೀಂದ್ರ ಭಟ್
|
Google Oneindia Kannada News

ಬೆಂಗಳೂರು, ಡಿಸೆಂಬರ್ 02 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕಪ್ಪು ಹಲಗೆ ಮಾಸಿಕ ಬಸ್ ಪಾಸುಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ. ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಮುಂದಿನ 2016ರ ಜನವರಿಯಿಂದಲೇ ಕಪ್ಪು ಹಲಗೆ ಪಾಸ್ ರದ್ದುಗೊಳ್ಳುವ ಸಾಧ್ಯತೆ.

ಬಿಎಂಟಿಸಿ ಕಪ್ಪು ಹಲಗೆ, ಕೆಂಪು ಹಲಗೆ, ವಜ್ರ ಸೇರಿದಂತೆ ವಿವಿಧ ರೀತಿಯ ಮಾಸಿಕ ಪಾಸುಗಳನ್ನು ಹೊಂದಿದೆ. ಕಪ್ಪು ಹಲಗೆ (ಬ್ಲಾಕ್ ಬೋರ್ಡ್) ಬಸ್ ಪಾಸಿನ ಬೆಲೆ 825 ರೂ.ಗಳು. ಕಪ್ಪು ಹಲಗೆ ಪಾಸು ಪಡೆದರೆ ನಗರದ ವ್ಯಾಪ್ತಿಯಲ್ಲಿ 10 ರಿಂದ 12 ಕಿ.ಮೀ ವ್ಯಾಪ್ತಿಯೊಳಗೆ ಸಾಮಾನ್ಯ ಬಸ್ಸುಗಳಲ್ಲಿ ಸಂಚಾರ ನಡೆಸಬಹುದಾಗಿದೆ. [ಬಿಎಂಟಿಸಿ ಮಾಸಿಕ ಪಾಸು ಪಡೆಯುವುದು ಹೇಗೆ?]

bmtc

ಕಡಿಮೆ ಬೆಲೆಗೆ ದೊರೆಯುವ ಈ ಪಾಸುಗಳನ್ನು ಹೆಚ್ಚಿನ ಜನರು ತೆಗೆದುಕೊಳ್ಳುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಸಂಚಾರ ನಡೆಸುತ್ತಿದ್ದರು. ಆದರೆ, ಬಿಎಂಟಿಸಿ ಈ ಪಾಸುಗಳನ್ನು ರದ್ದುಗೊಳಿಸಲು ಮುಂದಾಗಿದೆ. ಬಿಎಂಟಿಸಿ ಆಡಳಿತ ಮಂಡಳಿ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಅಧಿಕಾರಿಗಳ ಮಾಹಿತಿ ಪ್ರಕಾರ ಪಾಸು ರದ್ದತಿಗೂ ಅನುಮತಿ ಸಿಕ್ಕಿದೆ. [ksrtc ಪಾಸು ದರ ಹೆಚ್ಚಳ]

ಪಾಸು ರದ್ದುಗೊಳಿಸುವುದೇಕೆ? : ಬ್ಲಾಕ್ ಬೋರ್ಡ್‌ ಬಸ್ಸುಗಳು ಸಂಚಾರ ನಡೆಸುವ ವ್ಯಾಪ್ತಿಯಲ್ಲಿ ರೆಡ್ ಬೋರ್ಡ್ ಬಸ್ಸುಗಳು ಸಂಚಾರ ನಡೆಸುತ್ತವೆ. ಒಂದೇ ಮಾರ್ಗದಲ್ಲಿ ಸಂಚರಿಸುವ ಎರಡು ಬಸ್ಸುಗಳಿಗೆ ಬೇರೆ-ಬೇರೆ ಪಾಸುಗಳೇಕೆ? ಎಂದು ಚಿಂತನೆ ನಡೆಸಿರುವ ಬಿಎಂಟಿಸಿ ಬ್ಲಾಕ್ ಬೋರ್ಡ್ ಪಾಸು ರದ್ದತಿಗೆ ಮುಂದಾಗಿದೆ. [ನೇಮಕಾತಿ ಆದೇಶವಿಲ್ಲ. ಆದರೂ ದುಡಿಯುವುದು ತಪ್ಪಿಲ್ಲ]

825 ರೂ.ಗಳ ಕಪ್ಪು ಹಲಗೆ ಪಾಸುಗಳನ್ನು ರದ್ದುಗೊಳಿಸಿದರೆ ಜನರು 1050 ರೂ. ಬೆಲೆಯ ಕೆಂಪು ಹಲಗೆ ಪಾಸುಗಳನ್ನು ಪಡೆಯಬೇಕಾಗುತ್ತದೆ. ಕೆಂಪುಹಲಗೆ ಪಾಸುಗಳನ್ನು ಖರೀದಿ ಮಾಡಿದರೆ ಕಪ್ಪು ಹಲಗೆ ಬಸ್ಸುಗಳಲ್ಲಿಯೂ ಸಂಚಾರ ನಡೆಸಬಹುದು ಎಂಬುದು ಬಿಎಂಟಿಸಿ ಅಧಿಕಾರಿಗಳು ನೀಡುವ ವಿವರಣೆ. [ಬಿಎಂಟಿಸಿ ಪಾಸಿನ ವಿವರಗಳು]

bus

ಹಿಂದಿನ ಪಾಸುಗಳಿವು : ಬೆಂಗಳೂರು ನಗರದ ವ್ಯಾಪ್ತಿ ಚಿಕ್ಕದಿದ್ದಾಗ ಕಪ್ಪು ಹಲಗೆ ಪಾಸುಗಳನ್ನು ಪರಿಚಯಿಸಲಾಗಿತ್ತು. ಈಗ ಬೆಂಗಳೂರು ನಗರ ಬೃಹದಾಕಾರವಾಗಿ ಬೆಳೆದಿದ್ದು, ಕಪ್ಪು ಹಲಗೆ ಬಸ್ಸುಗಳು ಸಂಚಾರ ನಡೆಸುವ ಎಲ್ಲಾ ಮಾರ್ಗಗಳಲ್ಲಿ ಕೆಂಪು ಹಲಗೆ ಬಸ್ಸುಗಳು ಸಂಚರಿಸುತ್ತವೆ. ಆದ್ದರಿಂದ, ಅದೇ ಪಾಸನ್ನು ಜನರು ಬಳಸಬಹುದು ಎನ್ನುತ್ತಾರೆ ಅಧಿಕಾರಿಗಳು.

'ಕಪ್ಪು ಹಲಗೆ ಪಾಸುಗಳನ್ನು ರದ್ದುಗೊಳಿಸುವ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಪಾಸು ರದ್ದತಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ' ಎನ್ನುತ್ತಾರೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕರೂಪ್‌ಕೌರ್.

English summary
Bangalore Metropolitan Transport Corporation (BMTC) may withdraw 825 Rs black board monthly pass. Pass withdraw issue discussed in board meeting recently. BMTC may take decision soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X