ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂರು ನೂತನ ಮಾರ್ಗಗಳನ್ನು ಪರಿಚಯಿಸಿದ ಬಿಎಂಟಿಸಿ

|
Google Oneindia Kannada News

ಬೆಂಗಳೂರು, ಮೇ 4 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಜಯನಗರದಲ್ಲಿ ನೂತನವಾಗಿ ಚಕ್ರ ಸಾರಿಗೆ ಬಸ್ ಸೇವೆಯನ್ನು ಆರಂಭಿಸಿದೆ. ಸೆಂಟ್ರಲ್ ಸಿಲ್ಕ್‌ ಬೋರ್ಡ್ ಮತ್ತು ಟಿನ್‌ಫ್ಯಾಕ್ಟರಿ ನಡುವಿನ ಮಾರ್ಗದಲ್ಲಿಯೂ ನೂತನ ಬಸ್ ಸೇವೆ ಪರಿಚಯಿಸಿದೆ.

ವಿಜಯನಗರ ಟಿಟಿಎಂಸಿ ನಿಲ್ದಾಣದಿಂದ ಸುತ್ತ-ಮುತ್ತಲಿನ ಪ್ರದೇಶಗಳಿಗೆ ನೂತನ ಚಕ್ರಸೇವೆಯನ್ನು ಆರಂಭಿಸಲಾಗಿದೆ. 5 ಮತ್ತು 5ಎ ಬಸ್ಸುಗಳು ಎರಡು ಮಾರ್ಗಗಳಲ್ಲಿ ಸಂಚಾರ ನಡೆಸಲಿವೆ. ಹೊಸ ಮಾರ್ಗ ಸಂಖ್ಯೆ ವಿವರ ಹೀಗಿದೆ. [ಅಂದ ಹಾಗೆ ಈ ಕಂಡಕ್ಟರ್ ಹೆಸರು ತಾಂಡಚಂದ್!]

bmtc

* ಚಕ್ರ- 5 : ವಿಜಯನಗರ-ಕೆಎಚ್‌ಬಿ ಕಾಲೋನಿ, ಕಾಮಾಕ್ಷಿ ಪಾಳ್ಯ, ಕೊಟ್ಟಿಗೆ ಪಾಳ್ಯ, ಸುಂಕದಕಟ್ಟೆ, ಡಿ ಗ್ರೂಪ್ ಬಡಾವಣೆ, ಮುದ್ದಯ್ಯನಪಾಳ್ಯ, ಬಾಲಾಜಿ ಬಡಾವಣೆ, ನಾಗರಬಾವಿ ವೃತ್ತ-ವಿಜಯನಗರ [ಬಿಎಂಟಿಸಿ APP ನೋಡಿದ್ದೀರಾ?]

* ಚಕ್ರ - 5ಎ : ವಿಜಯನಗರ-ನಾಗರಬಾವಿ ವೃತ್ತ-ಬಾಲಾಜಿ ಬಡಾವಣೆ-ಮುದ್ದಯ್ಯನಪಾಳ್ಯ, ಡಿ ಗ್ರೂಪ್ ಬಡಾವಣೆ- ಕೆಎಚ್‌ಬಿ ಕಾಲೋನಿ-ವಿಜಯನಗರ

* 500-ಸಿಟಿ : ಸೆಂಟ್ರಲ್ ಸಿಲ್ಕ್‌ ಬೋರ್ಡ್-ಅಗರ-ಮಾರತ್ ಹಳ್ಳಿ ಬ್ರಿಡ್ಜ್-ಟಿನ್‌ಫ್ಯಾಕ್ಟರಿ

ಇಂದು ಬಸ್ ದಿನ : ಬಿಎಂಟಿಸಿ ಐಟಿಪಿಎಲ್, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ ಮಾರ್ಗಗಳಲ್ಲಿ ಇಂದು ಬಸ್ ದಿನ ಆಚರಿಸಲಿದೆ. ಇದರಿಂದ ಹೆಚ್ಚುವರಿ ಬಸ್ ಸೌಲಭ್ಯ ಲಭ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

English summary
Bangalore Metropolitan Transport Corporation (BMTC) introduced 2 new chakra services from Vijayanagar TTMC and new bus service form Central Silk Board to Tin Factory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X