ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವೆನ್ಯೂ ರಸ್ತೆಗಿಳಿದ ಬಿಎಂಟಿಸಿ ಬಸ್ಸುಗಳು!

|
Google Oneindia Kannada News

ಬೆಂಗಳೂರು, ಮೇ 28 : ಉದ್ಯಾನ ನಗರಿ ಬೆಂಗಳೂರಿನ ಜನ ದಟ್ಟಣೆಯ ಅವೆನ್ಯೂ ರಸ್ತೆಯಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಗುರುವಾರದಿಂದ ವಿಧಾನಸೌಧಕ್ಕೆ ತೆರಳುವ ಬಸ್ಸುಗಳು ಕೆ.ಆರ್.ಮಾರ್ಕೆಟ್‌ನಿಂದ ಅವೆನ್ಯೂ ರಸ್ತೆ ಮೂಲಕ ಸಂಚಾರ ನಡೆಸುತ್ತಿವೆ.

ಪ್ರತಿದಿನ ಬೆಳಗ್ಗೆ ಟೌನ್‌ಹಾಲ್‌, ಕಾರ್ಪೊರೇಷನ್ ಸರ್ಕಲ್‌ನಲ್ಲಿ ಉಂಟಾಗುವ ಸಂಚಾರ ದಟ್ಟಣೆ ತಪ್ಪಿಸಲು ಸಂಚಾರಿ ಪೊಲೀಸರು ಬಿಎಂಟಿಸಿಯೊಂದಿಗೆ ಚರ್ಚಿಸಿ ಈ ಕ್ರಮ ಕೈಗೊಂಡಿದ್ದಾರೆ. ಬೆಳಗ್ಗೆ 8.30ರಿಂದ 10 ಗಂಟೆಯ ತನಕ ಮಾತ್ರ ಅವೆನ್ಯೂ ರಸ್ತೆಯಲ್ಲಿ ಬಸ್‌ಗಳು ಸಂಚಾರ ನಡೆಸಲಿವೆ. [1,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬಿಎಂಟಿಸಿ]

bmtc

ಮಾರ್ಗ ಹೀಗಿತ್ತು : ಬೆಂಗಳೂರು ದಕ್ಷಿಣ ಭಾಗದಿಂದ ವಿಧಾನಸೌಧಕ್ಕೆ ಹೋಗುತ್ತಿದ್ದ ಬಸ್ಸುಗಳು ಇಷ್ಟುದಿನ ಕೆ.ಆರ್.ಮಾರ್ಕೆಟ್, ಟೌನ್‌ ಹಾಲ್ ಹಾಗೂ ಕಾವೇರಿ ಭವನದ ಮೂಲಕ ವಿಧಾನಸೌಧ ತಲುಪುತ್ತಿದ್ದವು. ಆದರೆ, ಸಂಚಾರ ದಟ್ಟಣೆಯಿಂದ ಸರಿಯಾದ ಸಮಯಕ್ಕೆ ನೌಕರರು ಹೋಗಲು ಸಾಧ್ಯವಾಗುತ್ತಿರಲಿಲ್ಲ. [ಅಂದ ಹಾಗೆ ಈ ಕಂಡಕ್ಟರ್ ಹೆಸರು ತಾಂಡಚಂದ್!]

ಈಗ ಸಂಚಾರಿ ಪೊಲೀಸರು ಮಾಡಿರುವ ಬದಲಾವಣೆ ಅನ್ವಯ ಕೆ.ಆರ್.ಮಾರ್ಕೆಟ್‌ ನಂತರ ಕೆಲವು ಬಸ್ಸುಗಳು ಅವೆನ್ಯೂ ರಸ್ತೆ ಹಾಗೂ ಮೈಸೂರು ಬ್ಯಾಂಕ್ ವೃತ್ತದ ಮಾರ್ಗವಾಗಿ ವಿಧಾನಸೌಧಕ್ಕೆ ತಲುಪಲಿವೆ. ಬೆಳಗ್ಗೆ 8.30ರಿಂದ 10 ಗಂಟೆಯ ತನಕ ಅವೆನ್ಯೂ ರಸ್ತೆಯಲ್ಲಿ ಇತರ ವಾಹನ ಸಂಚಾರ ಕಡಿಮೆ ಇರುವ ಕಾರಣ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಯಾವ ಬಸ್ಸುಗಳು ಹೋಗಲಿವೆ : ಎನ್.ಆರ್.ಕಾಲೋನಿ, ತ್ಯಾಗರಾಜ ನಗರ, ಎ.ಜಿ.ಎಸ್.ಬಡಾವಣೆ ಮತ್ತು ವಿದ್ಯಾಪೀಠ ವೃತ್ತದ ಕಡೆಯಿಂದ ವಿಧಾನಸೌಧಕ್ಕೆ ಹೋಗುವ ಬಸ್ಸುಗಳು ಮಾತ್ರ ಅವೆನ್ಯೂ ರಸ್ತೆಯ ಮೂಲಕ ಸಂಚಾರ ನಡೆಸಲಿವೆ.

English summary
Bangalore Metropolitan Transport Corporation (BMTC) introduces bus service to Vidhana Soudha via Avenue Road from Thursday, May 28, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X