ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವರ ಮೇಲೆ ಭಾರ ಹಾಕಿ ಬಿಎಂಟಿಸಿ ಹತ್ತಿ!

|
Google Oneindia Kannada News

ಬೆಂಗಳೂರು, ಜುಲೈ 26 : ಕೆಎಸ್ ಆರ್ ಟಿಸಿ ಸಿಬ್ಬಂದಿ ಮುಷ್ಕರ ಹತ್ತಿಕ್ಕಲು ನಾನಾ ಪ್ರಕಾರದಲ್ಲಿ ಯೋಚನೆ ಮಾಡಿರುವ ರಾಜ್ಯ ಸರ್ಕಾರ ಇದೀಗ ತರಬೇತಿ ಪಡೆಯುತ್ತಿರುವವರ ಕೈಗೆ ವಾಹನದ ಸ್ಟೈರಿಂಗ್ ನೀಡಿದೆ.

ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ಬಿಎಂಟಿಸಿ ಸಂಚಾರ ಆರಂಭವಾಗಿದ್ದು ಶಾಂತಿನಗರ, ಸಾಟಲೈಟ್, ಮೆಜೆಸ್ಟಿಕ್ ನಿಂದ ಬಸ್ ಸಂಚಾರ ಆರಂಭವಾಗಿದೆ. ಬಸ್ ಹಿಂದೆ ಪೊಲೀಸ್ ಬೆಂಗಾವಲು ಸಹ ಇದೆ.[ನೌಕರರ ಪ್ರತಿಭಟನೆಯ ಸಂಪೂರ್ಣ ಚಿತ್ರಣ]

BMTC Buses in the hands of untrained

ಆದರೆ ರಾಜ್ಯ ಸರ್ಕಾರ ವಾಹನದ ಜವಾಬ್ದಾರಿ ನೀಡಿರುವುದನ್ನು ಮಾತ್ರ ಪ್ರಶ್ನೆ ಮಾಡಲೇಬೇಕಿದೆ. ಮೆಕ್ಯಾನಿಕ್ ಗಳು ಮತ್ತು ತರಬೇತಿ ಪಡೆಯುತ್ತಿದ್ದ ಚಾಲಕರ ಕೈಗೆ ಬಸ್ ನೀಡಿದ್ದು ಬಸ್ ಏರಿದರೆ ನಿಮ್ಮ ಪ್ರಾಣಕ್ಕೆ ನೀವೇ ಜವಾಬ್ದಾರಿ ಎಂದು ಹೊಸದಾಗಿ ಹೇಳಬೇಕಾಗಿಲ್ಲ.[ಬೆಂಗಳೂರಿಗರ ದಿನಚರಿ ಬದಲಿಸಿದ ಬಿಎಂಟಿಸಿ ಮುಷ್ಕರ]

ಶಾಂತಿನಗರದಿಂದ ಬಸ್ ತೆಗೆದ ಚಾಲಕರ ಸೀಟಿನಲ್ಲಿ ಕುಳಿತ ವ್ಯಕ್ತಿಗಳು ಮುಖಕ್ಕೆ ಕರವಸ್ತ್ರ ಸುತ್ತಿಕೊಂಡಿದ್ದರು. ಮಾಧ್ಯಮದವರು ಪ್ರಶ್ನೆ ಮಾಡಿದರೂ ಸೂಕ್ತವಾಗಿ ಉತ್ತರಿಸಲು ಹಿಂಜರಿದರು. ಪೊಲೀಸ್ ಸಿಬ್ಬಂದಿಯೇ ಬಸ್ ಓಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ರಾಜ್ಯದ ಉಳಿದ ಕಡೆಯೂ ಇದೇ ಪರಿಸ್ಥಿತಿ ಮುಂದುವರಿದಿದ್ದು ಮುಂದೆ ಒಮದು ಪೊಲೀಸ್ ವಾಹನ ಮಧ್ಯ ಕೆಎಸ್ ಆರ್ ಟಿಸಿ ಬಸ್ ಮತ್ತೆ ಹಿಂದೊಂದು ಪೊಲೀಸ್ ವಾಹನ ಇದೇ ಮಾದರಿಯಲ್ಲಿ ಬಸ್ ಸಂಚಾರ ಆರಂಭ ಮಾಡಲಾಗಿದೆ.

English summary
Bengaluru: The State Government trying to overcome KSRTC Employees protest. Now BMTC buses starts in all over Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X