ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಬ್ಬಬ್ಬ ! ಬೆಂಗಳೂರಿನಲ್ಲಿ 5 ಕೋಟಿ ರೂ ಹಳೇ ನೋಟು ವಶ

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 5 ಕೋಟಿ ರೂ. ಕಪ್ಪು ಹಣವನ್ನು ಪತ್ತೆ ಮಾಡುವಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 28: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 5 ಕೋಟಿ ರೂ. ಕಪ್ಪು ಹಣವನ್ನು ಪತ್ತೆ ಮಾಡುವಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಂದು ನಡೆದ ದಾಳಿಯಲ್ಲಿ ನಿ‌ಷೇಧಿತ ಹಳೇ ನೋಟುಗಳನ್ನು ಹೊಂದಿದ್ದ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ರಾಜಾಜೀನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಶಿವಾಲಿ ಎಂಬ ಲಾಡ್ಜಿನಲ್ಲಿ ಸಿಕ್ಕಿಬಿದ್ದ ಅಂಬ್ರೋಸ್, ಆರಿಫ್ ಮತ್ತು ಪಾಷಾ ಎಂಬ ಮೂವರು ಆರೋಪಿಗಳಿಂದ 1.98 ಕೋಟಿ ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ರಾಜಾಜೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಣದೊಂದಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಜಿಂಕೆ ಕೊಂಬುಗಳು, ಮೊಬೈಲ್ ಫೋನ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ.[ಬೆಂಗಳೂರು : 1.28 ಕೋಟಿ ಮೌಲ್ಯದ ಹಳೆ ನೋಟುಗಳು ವಶ]

Black money issue: 4 people arrested by CCB police

ಇನ್ನೊಂದು ಪ್ರಕರಣದಲ್ಲಿ 46 ವರ್ಷದ ನಂಜುಂಡ ಎಂಬುವವರಿಂದ 3 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣವನ್ನು ಶಂಕರಪುರಂ ಠಾಣೆಯಲ್ಲಿ ದಾಖಲಿಸಲಾಗಿದೆ. ಬಂಧಿತ ಆರೋಪಿಯಿಂದ ಕಾರು ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

Black money issue: 4 people arrested by CCB police

ಬುಲ್ ಟೆಂಪಲ್ ರಸ್ತೆಯ ಬಳಿ ಹಳೆಯ 500/1000 ರೂ. ನೋಟುಗಳನ್ನು ಕಮಿಷನ್ ಆಧಾರದ ಮೇಲೆ ಹೊಸ 2000 ರೂ. ಗೆ ಬದಲಾಯಿಸುವುದೇ ನಂಜುಂಡನ ಕೆಲಸವಾಗಿತ್ತು. ಇವರೊಂದಿಗಿದ್ದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. [ಕಪ್ಪು ಹಣ ಬದಲಿಸುವವರ ಜಾಲದಲ್ಲಿ ಸಿಲುಕೀರಿ ಜೋಕೆ!]

ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಆರ್ ಬಿ ಐ ನೀಡಿರುವ ಮಾರ್ಚ್ 31 ರ ಗಡುವಿಗೆ ಮೂರೇ ದಿನ ಬಾಕಿ ಇರುವುದರಿಂದ, ಆರೋಪಿಗಳು ಹಣ ಬದಲಾಯಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ.

English summary
In two different incidents CCB police has arrested 4 people in Bengaluru, who had stored more than 5 crore rupees black money in demonetized notes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X