ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿರುವ ಬಿಹಾರಿಗಳಿಗೆ ಗಾಳ ಹಾಕಿದ ಬಿಜೆಪಿ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 05 : ಬಿಹಾರದಲ್ಲಿ ಅಧಿಕಾರದ ಗದ್ದುಗೆ ಏರಲೇಬೇಕು ಎಂದು ಕಾರ್ಯತಂತ್ರ ರೂಪಿಸಿರುವ ಬಿಜೆಪಿ, ಬೆಂಗಳೂರು ನಗರದಲ್ಲಿರುವ ಬಿಹಾರಿಗಳ ಮನವೊಲಿಸಲು ಮುಂದಾಗಿದೆ. ಇದಕ್ಕಾಗಿ ಎರಡು ಸಹಾಯವಾಣಿಯನ್ನು ಆರಂಭಿಸಿದೆ. ಸುಮಾರು 1.25 ಲಕ್ಷ ಬಿಹಾರಿಗಳು ಬೆಂಗಳೂರಿನಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರತಿ ಸಹಾಯವಾಣಿ ಜೊತೆಗೆ 15 ಕಾರ್ಯಕರ್ತರಿದ್ದು ಇವರು ಬಿಹಾರದಿಂದ ವಲಸೆ ಬಂದವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ. ಮತದಾನ ಮಾಡಲು ಬಿಹಾರಕ್ಕೆ ತೆರಳಿ ಬಿಜೆಪಿಗೆ ಮತ ಹಾಕುವಂತೆ ಈ ಕಾರ್ಯಕರ್ತರು ಅವರ ಮನವೊಲಿಸಲಿದ್ದಾರೆ. [ಬಿಹಾರ ಚುನಾವಣಾ ವೇಳಾಪಟ್ಟಿ]

bjp

ಮೋದಿ ಬಿಹಾರದ ಅಭಿವೃದ್ಧಿ ಮಾಡುತ್ತಾರೆ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಹಾರವನ್ನು ಅಭಿವೃದ್ಧಿ ಮಾಡಲಿದ್ದಾರೆ ಎಂಬ ಭರವಸೆಯನ್ನು ಬಿಜೆಪಿ ನಗರದಲ್ಲಿ ಪ್ರಚಾರ ಮಾಡುವ ಸಂದರ್ಭದಲ್ಲಿ ನೀಡುತ್ತಿದೆ. ಬೆಂಗಳೂರಿನಲ್ಲಿ ಉತ್ತಮ ಅವಕಾಶವಿರುವುದಕ್ಕೆ ವಲಸೆ ಬಂದಿದ್ದೀರಿ. ಬಿಹಾರವನ್ನು ಹೀಗೆ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಬಿಜೆಪಿ ಭರವಸೆ ನೀಡುತ್ತಿದೆ. ['ನಾವು ಮತ ಮಾಡಲು ಬಿಹಾರಕ್ಕೆ ಹೋಗಲ್ಲ']

ಬಿಹಾರದಿಂದ ವಲಸೆ ಬಂದವರ ಜೊತೆ ಮಾತನಾಡಿರುವ ಬೆಂಗಳೂರು ದಕ್ಷಿಣದ ಸಂಸದ ಮತ್ತು ಬಿಹಾರದ ಚುನಾವಣಾ ಉಸ್ತುವಾರಿ ಅನಂತ್ ಕುಮಾರ್ ಅವರು ನರೇಂದ್ರ ಮೋದಿ ಅವರು ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಬಿಜೆಪಿಗೆ ಮತ ನೀಡಿದರೆ, ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದ್ದಾರೆ. [ಬಿಹಾರದಲ್ಲಿ ಮೋದಿ ಸೂಟ್-ಬೂಟ್ ಬಗ್ಗೆ ರಾಹುಲ್ ಮಾತು]

ಈ ಪ್ರಚಾರ ಸಭೆಯ ಹೊರತಾಗಿ ಬಿಜೆಪಿ ಎಸ್‌ಎಂಎಸ್ ಮೂಲಕವೂ ಪ್ರಚಾರ ನಡೆಸಲು ಉದ್ದೇಶಿಸಿದೆ. ಬಿಹಾರಿಗಳ ಮನವೊಲಿಸಲು ಕರೆಗಳನ್ನು ಮಾಡಲು ಪಕ್ಷ ನಿರ್ಧರಿಸಿದೆ. ಮೊದಲ ಹಂತದ ಚುನಾವಣೆ ವೇಳೆಗೆ ಸುಮಾರು 50 ಸಾವಿರ ಬಿಹಾರಿಗಳ ಮನವೊಲಿಸಲು ಪಕ್ಷ ಕಾರ್ಯತಂತ್ರ ಹಾಕಿಕೊಂಡಿದೆ.

ಅಂದಹಾಗೆ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಮುನ್ನ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಸೆ.15ರ ಮಂಗಳವಾರ ಚುನಾವಣಾ ಅಧಿಸೂಚನೆ ಪ್ರಕಟಗೊಂಡಿದ್ದು, ಒಟ್ಟು 5 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 8ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

English summary
In a bid to pocket the vote of the Biharis in Bengaluru who are 1.25 lakh in number, the BJP will open up two call centers. The two call centers will reach out to the Biharis in city and urge them to go back to their state and cast their vote for party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X