ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೂಪಾ ವರ್ಗಾವಣೆ ಖಂಡಿಸಿ ಇಂದು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ

ಕರ್ನಾಟಕ ಬಿಜೆಪಿ ವತಿಯಿಂದ ಡಿ. ರೂಪಾ ಅವರ ವರ್ಗಾವಣೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ. ಪರಪ್ಪನ ಅಗ್ರಹಾರದ ಕೇಂದ್ರೀಯ ಕಾರಾಗೃಹಕ್ಕೆ ಭೇಟಿ ನೀಡಲಿರುವ ಕಾರಾಗೃಹದ ನೂತನ ಎಜಿಡಿಪಿ ಮೇಘರಿಕ್.

|
Google Oneindia Kannada News

ಬೆಂಗಳೂರು, ಜುಲೈ 19: ಪರಪ್ಪನ ಅಗ್ರಹಾರದ ಕರ್ಮಕಾಂಡ ಬಯಲಿಗೆಳೆದಿದ್ದ, ಬಂಧೀಖಾನೆ ಡಿಐಜಿಯಾಗಿದ್ದ ಡಿ. ರೂಪಾ ಅವರನ್ನು ಆ ಸ್ಥಾನದಿಂದ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ರಾಜ್ಯ ಬಿಜೆಪಿಯು ಇಂದು ಕರ್ನಾಟಕದಾದ್ಯಂತ ಪ್ರತಿಭಟನೆ ನಡೆಸಲಿದೆ.

ಪರಪ್ಪನ ಕೈದಿಗಳಿಗೆ ಥಳಿತ: ಮಾನವ ಹಕ್ಕು ಆಯೋಗದಿಂದ ರಾಜ್ಯಕ್ಕೆ ನೋಟಿಸ್ಪರಪ್ಪನ ಕೈದಿಗಳಿಗೆ ಥಳಿತ: ಮಾನವ ಹಕ್ಕು ಆಯೋಗದಿಂದ ರಾಜ್ಯಕ್ಕೆ ನೋಟಿಸ್

ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ, ಮೆರವಣಿಗೆಗಳು ನಡೆಯಲಿದ್ದು, ಆಯಾ ಜಿಲ್ಲಾ ಮುಖಂಡರು ಬಿಜೆಪಿ ರಾಜ್ಯ ನಾಯಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

BJP state level protest against the transfer of Police Officer D. Roopa

ಮೇಘರಿಕ್ ಭೇಟಿ: ಎರಡು ದಿನಗಳ ಹಿಂದಷ್ಟೇ ಪರಪ್ಪನ ಅಗ್ರಹಾರದ ಕೇಂದ್ರೀಯ ಕಾರಾಗೃಹದ ನೂತನ ಎಜಿಡಿಪಿಯಾಗಿ ನೇಮಕಗೊಂಡಿರುವ ಮೇಘರಿಕ್ ಅವರು ಜೈಲಿಗೆ ಇಂದು ಭೇಟಿ ನೀಡಲಿದ್ದಾರೆ. ಜೈಲು ಎಜಿಡಿಪಿಯಾಗಿ ನೇಮಕಗೊಂಡ ನಂತರ ಜುಲೈ 18ರಂದು ಅವರು ಅಧಿಕಾರ ಸ್ವೀಕರಿಸಿದ್ದಾರೆ.

English summary
Karnataka BJP has called state-wide protest against the the tranfer of IPS Officer D. Roopa by state government after she exposes illegal activities inside the Parappana Agrahara Central Jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X