ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಜತೆಗಿನ ಅರ್ನಬ್ ಗೋಸ್ವಾಮಿ ಸಂದರ್ಶನ ಇಲ್ಲಿದೆ

By Srinath
|
Google Oneindia Kannada News

ಬೆಂಗಳೂರು‌, ಮೇ 9: ಸೆಪ್ಟೆಂಬರ್ ತಿಂಗಳಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ 16ನೇ ಲೋಕಸಭಾ ಚುನಾವಣೆಗೆ ಕಣಕ್ಕಿಳಿದ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ಮತ್ತು ರಾಜಕೀಯ ವಿಚಾರವಾಗಿ ತಮ್ಮ ದೃಷ್ಟಿಕೋನವನ್ನು ಅಲ್ಲಿಂದೀಚೆಗೆ ನಿರಂತರವಾಗಿ/ ನಿರರ್ಗಳವಾಗಿ ದೇಶದ ಜನತೆಯ ಮುಂದೆ ತೆರೆದಿಡುತ್ತಾ ಬಂದಿದ್ದಾರೆ.\

ನಿನ್ನೆ ರಾತ್ರಿಯೂ ಅಷ್ಟೇ, ಟೈಮ್ಸ್ ನೌ ಆಂಗ್ಲ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ವಿಶೇಷ ಸಂದರ್ಶನ ನೀಡಿದ್ದು, ಮತ್ತಷ್ಟು ನಿಖರವಾಗಿ ತಮ್ಮ ವಿಚಾರಲಹರಿಯನ್ನು ದೇಶದ ಜನತೆಯೆದುರು ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅಗತ್ಯವಾಗಿ, ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಬಹಿರಂಗವಾಗಿ ಗುರುತಿಸಿಕೊಂಡಿಲ್ಲವಾದರೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆ ಇದೇ ಅರ್ನಬ್ ಗೋಸ್ವಾಮಿ ನಡೆಸಿದ ಸಂದರ್ಶನ ಲೋಕ ವಿಖ್ಯಾತವಾಯಿತು. ನಿನ್ನೆ ಮೋದಿ ಜತೆಗಿನ ಸಂದರ್ಶನವೂ ಸರಿಸುಮಾರು ಹಾಗೆಯೇ ಬಹಳಷ್ಟು ಮಂದಿಯಿಂದ ವೀಕ್ಷಿಸಲ್ಪಟ್ಟಿದೆ.

ಗಮನಾರ್ಹವೆಂದರೆ ಅಲ್ಲಿ ರಾಹುಲ್ ಉತ್ತರಗಳಿಗಾಗಿ ತಿಣುಕಾಡುತ್ತಿದ್ದರೆ, ಅಥವಾ ಪೀಟರ್ ರಿಪೀಟರ್ ಅಗಿ ಅದದೇ ಉತ್ತರಗಳನ್ನು ನೀಡುತ್ತಾ ಪೇಲವವಾಗಿ ಕಂಡುಬಂದರೆ ಮೋದಿ ಸಂದರ್ಶನದಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ತಾವೆಷ್ಟು ಸಮರ್ಥರು ಎಂಬುದನ್ನು ಒಂದೊಂದು ಉತ್ತರದಲ್ಲೂ ಸಾಬೀತುಪಡಿಸಿದರು. ರಾಹುಲ್ ಅಭಿಮಾನಿಗಳೂ ಭಲೇ ಎನ್ನುವಂತಿತ್ತು ನಿನ್ನೆಯ ಇಂಟರ್ ವ್ಯೂ. ಮತ್ತು ಎರಡೂ ಸಂದರ್ಶನಗಳನ್ನು ಒಬ್ಬ ಪತ್ರಕರ್ತನಾಗಿ ಯಶಸ್ವಿಯಾಗಿ ನಡೆಸಿಕೊಟ್ಟ ಅರ್ನಬ್ ಗೋಸ್ವಾಮಿಗೆ ಫುಲ್ ಮಾರ್ಕ್ಸ್ ಸಲ್ಲುತ್ತದೆ. (ರಾಹುಲ್‌ ಸಂದರ್ಶಿಸಿದ ಅರ್ನಬ್ ಗೋಸ್ವಾಮಿ ಯಾರು)

ಬನ್ನಿ ಸಂದರ್ಶನ ಹೇಗೆ ಪ್ರಾರಂಭವಾಯಿತು. ಮುಂದೆ ಯಾವ ದಿಕ್ಕಿನಲ್ಲಿ ಸಾಗಿತು. ನೋಡೋಣ...

bjp-pm-candidate-modi-interview-with-times-now-editor-arnab-goswami
ಪ್ರ. ಲೋಕಸಭಾ ಚುನಾವಣೆ ಪ್ರಚಾರ ಕಾರ್ಯ ಕಹಿಯಾಗಿತ್ತಾ?
ಮೋದಿ: ನೋಡಿ ನಾನು ಬೆಲೆ ಏರಿಕೆ, ನಿರುದ್ಯೋಗ ಮಹಿಳಾ ಸುರಕ್ಷತೆ ಬಗ್ಗೆಯೇ ಹೆಚ್ಚಾಗಿ ಮಾತನಾಡಿದ್ದು. ಆಡಳಿತಾರೂಢ ಪಕ್ಷದ ವತಿಯಿಂದ ಯಾರೊಬ್ಬರಾದರೂ ಈ ಬಗ್ಗೆ ಮಾತನಾಡಿದರಾ? ಮಾಧ್ಯಮಗಳಾದರೂ ಈ ಬಗ್ಗೆ ತನ್ನ ಗಮನ ಹರಿಸಿತಾ? ಎಲ್ಲಾ ಮೋದಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ತಟಸ್ಥ ಮೇಧಾವಿಗಳೂ ಸಹ ವಿಷಯಗಳನ್ನು ನಿಷ್ಪಕ್ಷಪಾತವಾಗಿ ನೋಡಲಿಲ್ಲ.

ಪ್ರ. ಚುನಾವಣಾ ಆಯೋಗದ ಬಗ್ಗೆ ನಿಮಗೇಕೆ ಕೋಪಾ?
ಮೋದಿ: ಚುನಾವಣಾ ಆಯೋಗದ ವಿರುದ್ಧ ನಾನೇದಾರೂ ಹೇಳಿದೆನಾ? ಆಯೋಗವನ್ನು ಗೌರವಿಸಬೇಕು. ಆದರೆ ನಮಗೆ ತೊಂದರೆ ಆಗುತ್ತಿರುವ ಬಗ್ಗೆಯೂ ಆಯೋಗ ಗಮನಹರಿಸಬೇಕು.

ಪ್ರ. ಪ್ರಿಯಾಂಕಾ ಗಾಂಧಿ ಜತೆಗಿನ ತಿಕ್ಕಾಟ, ಜಾತಿ ರಾಜಕೀಯದ ಬಗ್ಗೆ ಹೇಳಿ
ಮೋದಿ: ನಿರ್ದಿಷ್ಟವಾಗಿ ಒಂದು ಕುಟುಂಬವನ್ನು ರಕ್ಷಿಸಲು Times Now ಯತ್ನಿಸುತ್ತಿರುವುದು ನನಗೆ ನಿರಾಶೆಯನ್ನುಂಟುಮಾಡುತ್ತಿದೆ. ನಾಣು ರಾಜೀವ್ ಗಾಂಧಿ ಬಗ್ಗೆ ಏನು ಹೇಳಿದೆನೋ ಅದು ಅಕ್ಷರಶಃ ಸರಿಯಾಗಿದೆ. ಅದು ಯಾರನ್ನಾದರೂ ಅವಮಾನಪಡಿಸುತ್ತದಾ? ಅಪ್ಪನನ್ನು ಬೈದರೆ ಮಗಳಾಗಿ ಯಾರಿಗೇ ಆಗಲಿ ಕೋಪ ಬರುವುದು ಸಹಜ.

ಪ್ರ. 'ಒಂದು ದೇಶ; ಆದರ್ಶ ದೇಶ' ಮಂತ್ರ ಜಪಿಸುವ ನೀವು ಜಾತಿಕಾರಣ ತಂದಿದ್ದು ಸಮಂಜಸವಾ?
ಮೋದಿ: ಜಾತಿ ಬಗ್ಗೆ ನಾನೆಲ್ಲೂ ಏನೂ ಹೇಳಿಲ್ಲ. ಆದರೆ ನಾನು ಬಳಸಿದ ಪದಗಳು ಅಪದ್ಧವಾಗಿರಬಹುದು. ಹಾಗಂತ ಅವರು ಬಳಸಿದ ಭಾಷೆ ಉಚಿತವಾಗಿತ್ತಾ?

ಪ್ರ. ಧಾರ್ಮಿಕ ನೆಲೆಗಟ್ಟಿನಲ್ಲಿ ಮಾತನಾಡಿದ ಅಮಿತ್ ಶಾ, ಗಿರಿರಾಜ್ ಸಿಂಗ್ ಬಗ್ಗೆ ಏನು ಹೇಳುತ್ತೀರಿ?
ಮೋದಿ: ಆಯ್ತು, ಅದಾದ ನಂತರ ನಮ್ಮ ಕಡೆಯಿಂದ ಯಾರದಾರೂ ಹಾಗೆ ಮಾತನಾಡಿದ್ದಾರಾ? ಅಂದರೆ, ಪಕ್ಷದೊಳಗೆ ನಾನು ಆ ಬಗ್ಗೆ ಕಠಿಣವಾಗಿ ಮಾತನಾಡಿದ್ದೇನೆ ಎಂದೇ ಅರ್ಥ. ಅಲ್ವಾ? ಅಷ್ಟಕ್ಕೂ ಅವರೂ ಏನೂ ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ.

ಪ್ರ. ಬಾಂಗ್ಲಾ ನುಸುಳುಕೋರರ ಬಗ್ಗೆ ಏನನ್ನುತ್ತೀರಿ?
ಮೋದಿ: ಬಾಂಗ್ಲಾದಿಂದ ಹೊರಗಟ್ಟಿರುವ ಅಲ್ಪಸಂಖ್ಯಾತರ ಪರವಾಗಿ ನಾವು ಮಾತನಾಡುವುದು ಬೇಡವಾ? ನುಸುಳುಕೋರರ ಬಗ್ಗೆ ರಾಜಕೀಯ ಉದ್ದೇಶದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ. ಅವರನ್ನು ಕೈಬೀಸಿ ಆಹ್ವಾನಿಸಲಾಗುತ್ತದೆ. ಬಾಂಗ್ಲಾ ಲೇಖಕಿ ವಿಷಯ ತೆಗೆದುಕೊಂಡಾಗ ನಮ್ಮದು ದ್ವಿಮುಖ ನೀತಿ ಅಂತಾಗುವುದಿಲ್ಲವೇ?

ಪ್ರ. ದೇಶದಲ್ಲಿ ನೂರಾರು ಧರ್ಮಗಳಿವೆ. ಬಿಜೆಪಿ ಪ್ರಣಾಳಿಕೆಯಲ್ಲಿ ಹಿಂದೂ ಧರ್ಮ ಮಾತ್ರವೇ ಉಲ್ಲೇಖವಬಾಗಿದೆ?
ಮೋದಿ: ಹಿಂದೂ ಎಂಬುದು ಧರ್ಮ ಅಲ್ಲ. ಅದು ಜೀವನದ ಒಂದು ಕ್ರಮ. ದೇಶದ ಸರ್ವೋಚ್ಛ ನ್ಯಾಯಾಲಯವೂ ಅದನ್ನೇ ಹೇಳಿರುವುದು. ನಾವು ಎಂದಿಗೂ ಧರ್ಮಗಳ ಹೆಸರಿನಲ್ಲಿ ಹೋಗುವುದಿಲ್ಲ.

ಪ್ರ. ಧರ್ಮದ ನೆಲೆಯಲ್ಲಿ ಬಿಜೆಪಿ ಎಂಬುದು ಬಲ ಪಂಥೀಯ ಪಕ್ಷ, ಏನನ್ನುತ್ತೀರಿ?
ಮೋದಿ: ನಾವು ಚುನಾವಣಾ ಪ್ರಚಾರದ ವೇಳೆ ನಾನಾ ವಿಷಯಗಳನ್ನು ಮಂಡಿಸಿದ್ದೇವೆ. ನಮ್ಮದು ವಿಷಯಾಧಾರಿತ ದೃಷ್ಟಿಕೋನ.

ಪ್ರ. 2002ರ ಗಲಭೆಗಳಲ್ಲಿ ಸಂಘ ಪರಿವಾರದ ಯಾರಾದರೂ ಭಾಗಿಯಾಗಿದ್ದರಾ?
ಮೋದಿ: 2002ರ ಗಲಭೆಗಳ ಬಗ್ಗೆ ನಾನಾ ಪಕ್ಷಗಳು ವ್ಯಾಪಕ/ ವಿಭಿನ್ನ ದೃಷ್ಟಿಕೋನ ಹೊಂದಿವೆ. ಕಾನೂನು ಸಹ ಇದರ ಮೇಲೆ ಬೆಳಕು ಚೆಲ್ಲಿದೆ. ಹಾಗಿರುವಾಗ ಮೋದಿಯಿಂದ ಸರ್ಟಿಫಿಕೇಟ್ ಪಡೆಯುವುದು ಅಗತ್ಯವಿಲ್ಲ.

ಪ್ರ. ಮಾಯಾ ಕೊಂಡಾನಿ ಅವರು ಕೇಶುಭಾಯಿ ಪಟೇಲ್ ಅವರಿಗೆ ಹತ್ತಿರ ಎಂಬ ಮಾತಿದೆಯಲ್ಲಾ?
ಮೋದಿ: ನಾನು ಆಕೆಯನ್ನು ಮಂತ್ರಿ ಮಾಡಿದಾಗ ಆಕೆಯ ವಿರುದ್ಧ ಯಾವುದೇ ಆರೋಪಗಳು ಇರಲಿಲ್ಲ. SIT ತನಿಖೆಯ ನಂತರವಷ್ಟೇ ಅದು ಬೆಳಕಿಗೆ ಬಂದಿದೆ. ಅದರಲ್ಲಿ ಸತ್ಯ ಏನೆಂಬುದನ್ನು ತಿಳಿದುಕೊಳ್ಳಲು ನಿಮ್ಮಂತಹವರಿಗೆ ಇನ್ನೂ 25 ವರ್ಷ ಹಿಡಿಸುತ್ತದೆ.

ಪ್ರ. 272 ಸ್ಥಾನಗಳನ್ನು ಗಳಿಸುತ್ತೀರಾ?
ಮೋದಿ: ದೇಶವು ಅಂಕಗಣಿತದ ಆಧಾರದಲ್ಲಿ ನಡೆಯುವುದಿಲ್ಲ. ನಾವು ಇನ್ನೂ ಹೆಚ್ಚಿಗೆ 350 ಸೀಟುಗಳನ್ನೇ ಗೆದ್ದರೂ ನಮಗೆ ಎಲ್ಲ ಪಕ್ಷಗಳ ಎಲ್ಲ ವಿರೋಧ ಪಕ್ಷಗಳ ಸಹಕಾರ ಅಗತ್ಯವಿರುತ್ತದೆ.

ಪ್ರ. ಚುನಾವಣೆ ನಂತರ ಅಗತ್ಯ ಸಹಕಾರ ಸಿಗುತ್ತದಾ?
ಮೋದಿ: ಚುನಾವಣೆಯೇ ಬೇರೆ, ರಾಜಕೀಯವೇ ಬೇರೆ... ಎರಡನ್ನೂ ಬೆರೆಸಿ, ಗೊಂದಲ ಎಬ್ಬಿಸಬೇಡ ಸೋದರನೇ!
(ಸಂದರ್ಶನದ ಸಂಪೂರ್ಣ ಭಾಗ ಇಂಗ್ಲೀಷಿನಲ್ಲಿ ಇಲ್ಲಿದೆ)

English summary
Lok Sabha polls 2014 - BJP's prime ministerial candidate Narendra Modi spoke to Times Now Editor-in-Chief Arnab Goswami on May 8. Here is brief details of the Interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X