ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಬ್ಲೂ ಫಿಲಂ ಮುಗಿದ ಸರಕು: ಮಾಳವಿಕಾ

By Srinath
|
Google Oneindia Kannada News

ಬೆಂಗಳೂರು, ಏಪ್ರಿಲ್ 10: ಬಿಜೆಪಿ ಶಾಸಕರ ಬ್ಲೂ ಫಿಲಂ ಪುರಾಣಗಳು ಮುಗಿದ ಸರಕು/ ಅಧ್ಯಾಯಗಳಾಗಿವೆ ಎಂದು ಬಿಜೆಪಿ ವಕ್ತಾರರಾದ ಕಿರುತೆರೆ ನಟಿ ಮಾಳವಿಕಾ ಅವಿನಾಶ್ ಅವರು ತಿಳಿಸಿದ್ದಾರೆ. ಆದರೆ ಜನ ಅದರಲ್ಲೂ ಮತದಾರ ಸ್ಮೃತಿಪಟಲದಿಂದ ಅದು ಅಳಸಿಹೋಗಿದೆಯಾ? ಎಂಬುದಕ್ಕೆ ಉತ್ತರ ಮೇ 16ರಂದು ದೊರೆಯಲಿದೆ.

ಪ್ರಜಾಪ್ರಭುತ್ವದ ಪವಿತ್ರ ದೇಗುಲ ವಿಧಾನಸಭೆಯಲ್ಲಿ ಈ ಹಿಂದೆ ಬಿಜೆಪಿಯ ಮೂವರು ಶಾಸಕರು ಮೊಬೈಲ್ ಫೋನಿನಲ್ಲಿ ಬ್ಲೂ ಫಿಲಂ ವಿಡಿಯೋ ವೀಕ್ಷಣೆ ಮಾಡಿದ್ದರು. ಜತೆಗೆ, ಕೆಲ ಶಾಸಕ/ಸಚಿವರಿಂದ ಮಹಿಳೆಯರ ಮೇಲೆ ದೌರ್ಜನ್ಯ/ ಹಿಂಸಾಚಾರಗಳೂ ನಡೆದಿದ್ದವು. ಆದರೆ ಅದೆಲ್ಲಾ ಈಗ ಗತಿಸಿಹೋದ ಸಂಗತಿಗಳಾಗಿವೆ. ಅಂತಹ ಕಳಂಕಿತರ ವಿರುದ್ಧ ಪಕ್ಷವು ಕಾಲಕಾಲಕ್ಕೆ ಖಡಕ್ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಮಾಳವಿಕಾ ಅವಿನಾಶ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

bjp-mla-s-blue-film-episode-a-thing-of-past-malavika-avinash
ಅದನ್ನೆಲ್ಲಾ ಮರೆತು ನಾವು ಭವಿಷ್ಯದತ್ತ ನೋಡಬೇಕಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದರಿಂದ ಮಹಿಳೆ ಸುರಕ್ಷತೆಗೆ ಪ್ರಾಧಾನ್ಯತೆ ದೊರೆಯಲಿದೆ. ಮತ್ತು ಮೋದಿ ಆಡಳಿತದಲ್ಲಿ ಮಹಿಳೆ ಹೆಚ್ಚು ಸುರಕ್ಷಿತವಾಗಿರುತ್ತಾರೆ ಎಂದು ಮಾಳವಿಕಾ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗಾಗಿ ಅನೇಕ ಕಾರ್ಯಕ್ರಮ/ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ಭರವಸೆಗಳನ್ನಾಧರಿಸಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತ ಹಾಕಬೇಕು. ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡುವಂತೆ ಕೋರುವುದಾಗಿ ಅವರು ಹೇಳಿದರು.

ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮನಗಳಿವೆ. ಎಲ್ಲ ಸಮುದಾಯದ ಜನರಿಗೂ ಕಲ್ಯಾಣ ಯೀಜನೆಗಳಿವೆ. ಮೋದಿ ಆಡಳಿತದಲ್ಲಿ ದೇಶ ಪ್ರಗತಿ ಕಾಣಲಿದೆ; ಸುಭಿಕ್ಷವಾಗಲಿದೆ ಎಂದು ಮಾಳವಿಕಾ ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟು 7 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುವಂತೆ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಘಟಕ ವರಿಷ್ಠರಲ್ಲಿ ಮನವಿ ಮಾಡಿತ್ತು. ಆದರೆ ಒಬ್ಬರಿಗೆ ಮಾತ್ರ (ಶೋಭಾ ಕರಂದ್ಲಾಜೆ) ಟಿಕೆಟ್ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಮಾಳವಿಕಾ ಸ್ಪಷ್ಟಪಡಿಸಿದರು.

English summary
Lok Sabha Election 2014: BJP MLAs blue film episode a thing of past- Bharatiya Janata Party’s State co-spokesperson Malavika Avinash. Bharatiya Janata Party’s State co-spokesperson Malavika Avinash has termed the episode of three Ministers watching a porn clip in the Legislative Assembly and the alleged involvement of Ministers in atrocities on women during the BJP government as “things of the past”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X