ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ ಕೊಲೆ ಆರೋಪಿ ಬಂಧನ

ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ(42) ಹತ್ಯೆಗೆ ಸುಪಾರಿ ನೀಡಿದ್ದ ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ಗೋವಿಂದೇಗೌಡ ಹಾಗೂ ಅವರ ಪತ್ನಿ ವರಮಹಾಲಕ್ಷ್ಮೀ ಅವರನ್ನು ಪೊಲೀಸರು ಬಂಧಿಸಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 18: ಬಿಜೆಪಿ ಕಾರ್ಯಕರ್ತ ಚಿಕ್ಕತಿಮ್ಮೇಗೌಡ(42) ಹತ್ಯೆಗೆ ಸುಪಾರಿ ನೀಡಿದ್ದ ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ಗೋವಿಂದೇಗೌಡ ಹಾಗೂ ಅವರ ಪತ್ನಿ ವರಮಹಾಲಕ್ಷ್ಮೀ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕತಿಮ್ಮೇಗೌಡ ಎಂಬುವವರು ನಾಗಣ್ಣ ಎಂಬುವರ ಜೊತೆ ದ್ವಿಚಕ್ರ ವಾಹನದಲ್ಲಿ ನವೆಂಬರ್ 8ರಂದು ಸುಂಕದಕಟ್ಟೆ, ಗಜಾನನಗರ, 2ನೇ ಮುಖ್ಯರಸ್ತೆಯ ಬಳಿ ಹೋಗುತ್ತಿದ್ದಾಗ, ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿ ಕೊಂದು ಹಾಕಿದ್ದರು.[ಬೀದರಿನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಬಲಿ]

ಈ ಬಗ್ಗೆ ಚಿಕ್ಕತಿಮ್ಮೇಗೌಡ ಅವರ ಭಾಮೈದ ರಾಜಶೇಖರ್ ಅವರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿ ಮಾಜಿ ಕಾರ್ಪೊರೇಟರ್ ಗೊವಿಂದೇಗೌಡ ಅವರ ಮೇಲೆ ಆರೋಪ ಹೊರೆಸಿದ್ದರು."

ಈ ಪ್ರಕರಣದ ಆರೋಪಿಗಳನ್ನು ಪತ್ತೆಮಾಡಲು ಬೆಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರು ಮತ್ತು ಮಾನ್ಯ ಅಪರ ಪೊಲೀಸ್ ಆಯುಕ್ತರು, ಪಶ್ಚಿಮ ರವರ ನಿರ್ದೇಶನದಂತೆ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್,ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಎಂ.ವೇಣುಗೋಪಾಲರವರ ನೇತೃತ್ವದಲ್ಲಿ ಪಶ್ಚಿಮ ವಿಭಾಗದ ಆರು ಪೊಲೀಸ್ ಇನ್ಸಪೆಕ್ಟರ್‌ಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡವನ್ನು ನೇಮಕ ಮಾಡಿದ್ದರು.[ರುದ್ರೇಶ್ ಹತ್ಯೆ : ಶೋಭಾ ವಿರುದ್ಧ ಮಾನನಷ್ಟ ಮೊಕದ್ದಮೆ]

BJP activist Chikkatimmegowda murder case: Sunkadatte police arrest accused

ಬಂಧಿತರು:
* ವರಮಹಾಲಕ್ಷ್ಮೀ (47) C/o ಗೋವಿಂದೇಗೌಡ
* ಗೋವಿಂದೇಗೌಡ(58) ಬಿನ್ ಲೇಟ್.ಎಂ.ವಿ.ಬಚ್ಚಣ್ಣ
* ಮಣಿಕಂಠ ಕಚ್ಚಿನ್ಸ್ ಬಿನ್ ಸಿದ್ದರಾಜು
* ಹರೀಶ್.ಬಿ ಬಿನ್ ಬಾಬು.ಎಸ್
* ಮಣಿಕಂಠ ಯೋಗೇಶ್ ಬಿನ್ ಜಯರಾಂ
* ಸುರೇಶ ಆರ್‌ಎಕ್ಸ್ ಸೂರಿ ಬಿನ್ ತಿಮ್ಮಪ್ಪ,
* ಮ್ಯಾಥೂ.ಎ ಅಜೇಯ ಬಿನ್ ಅಲೆಕ್ಷಾಂಡರ್
* ಸನಾವುಲ್ಲಾ ಸನಾ ಬಿನ್ ಬಷೀರ್‌ಖಾನ್
* ಯುವರಾಜು ಯುವ ಬಿನ್ ಗಂಗಪ್ಪ,

ಘಟನೆ ಹಿನ್ನಲೆ: ಗೋವಿಂದೆಗೌಡ ಮತ್ತು ವರಮಹಾಲಕ್ಷ್ಮೀರವರು ಜೆ.ಡಿ.ಎಸ್. ಕಾರ್ಯಕರ್ತರಾಗಿದ್ದು, ಮೃತ. ಚಿಕ್ಕತಿಮ್ಮೇಗೌಡನು ಇವರಿಬ್ಬರ ಪರ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದ.2015ರಲ್ಲಿ ನಡೆದ ಬಿ.ಬಿ.ಎಂ.ಪಿ. ಚುನಾವಣೆಯಲ್ಲಿ ಚಿಕ್ಕತಿಮ್ಮೇಗೌಡನು ಬಿ.ಜೆ.ಪಿ.ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದರಿಂದ ಆರೋಪಿ ವರಮಹಾಲಕ್ಷ್ಮೀರವರು ಚುನಾವಣೆಯಲ್ಲಿ ಪರಾಭವಗೊಂಡಿದ್ದರು.

ವರಮಹಾಲಕ್ಷ್ಮೀರವರ ಅಕ್ಕನ ಮಗ (ಸಾಕುಮಗ) ಸುರೇಶಕುಮಾರನು ಇವರಿಗೆ ಹಣಕಾಸಿನ ವ್ಯವಹಾರದಲ್ಲಿ ಸುಮಾರು ಕೋಟಿಯಷ್ಟು ಮೋಸಮಾಡಿ, ತಮ್ಮ ವಿರೋಧಿ ಚಿಕ್ಕತಿಮ್ಮೇಗೌಡನ ಜೊತೆ ಸೇರಿಕೊಂಡಿದ್ದರಿಂದ ಇವರಿಬ್ಬರು ಒಂದಾದರೆ ಮುಂದೆ ನಮ್ಮನ್ನು ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಮುಗಿಸಿಬಿಡುತ್ತಾರೆ ಎಂಬ ಜಿದ್ದಿನಿಂದ ಸುರೇಶ ಅಲಿಯಾಸ್ ಆರ್.ಎಕ್ಸ್ ಸೂರಿ ಹಾಗೂ ಇತರೆ ಆರೋಪಿಗಳಿಗೆ 30 ಲಕ್ಷ ರೂಪಾಯಿ ಸುಪಾರಿ ನೀಡಿ, ಕೊಲೆಗೆ ಮೊದಲು 5 ಲಕ್ಷ ಅಡ್ವಾನ್ಸ್ ನೀಡಿ ಕೊಲೆಯಾದ ನಂತರ 10 ಲಕ್ಷ ರೂಪಾಯಿಗಳನ್ನು ಕೊಟ್ಟಿರುವುದಾಗಿ ತಿಳಿದುಬಂದಿರುತ್ತದೆ.

English summary
Sunkadatte police have arrested Supari killers in BJP activist Chikkatimmegowda murder case: A 42-year-old BJP activist was stabbed to death by three unidentified men who were on a motorcycle, in Kamakshipalya on November 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X