ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಬೈಕ್ ಆಂಬುಲೆನ್ಸ್ ಸೇವೆ ಆರಂಭ

|
Google Oneindia Kannada News

ಮಂಗಳೂರು, ಮೇ. 5: ಬೆಂಗಳೂರಿನಲ್ಲಿ ಏಪ್ರಿಲ್ 15 ರಂದು ಆರಂಭವಾಗಿದ್ದ ಬೈಕ್ ಆಂಬುಲೆನ್ಸ್ ಸೇವೆ ಇದೀಗ ಮಂಗಳೂರಿನಲ್ಲಿ ಅಧಿಕೃತವಾಗಿ ಶುರುವಾಗಿದೆ. ಆರೋಗ್ಯ ಸಚಿವ ಯುಟಿ ಖಾದಿರ್ ಮಂಗಳೂರಿನಲ್ಲಿ ಮಂಗಳವಾರ ಯೋಜನೆಗೆ ಚಾಲನೆ ನೀಡಿದ್ದಾರೆ.

ಮಂಗಳೂರಿಗೆ ಸಂಬಂಧಿಸಿ ಎರಡು ಬೈಕ್ ಆಂಬುಲೆನ್ಸ್ ನೀಡಲಾಗಿದೆ. 108ರ ಜವಾಬ್ದಾರಿ ಹೊತ್ತಿರುವ ಸಂಸ್ಥೆ ಎಲ್ಲಿ ತಿಳಿಸುತ್ತೆದೆಯೋ ಅಲ್ಲಿಗೆ ಒಂದು ಬೈಕ್ ನೀಡಲಾಗುವುದು. ಇನ್ನೊಂದನ್ನು ಮಂಗಳೂರು-ಕಾಸರಗೋಡು ಹೆದ್ದಾರಿಗೆ ಸಂಬಂಧಿಸಿ ನೀಡಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದರು.[ಬೈಕ್ ಆಂಬುಲೆನ್ಸ್: ಏನಿದು, ಬಳಸುವುದು ಹೇಗೆ?]

ambulance

ಬೈಕ್ ಆಂಬುಲೆನ್ಸ್ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಪಘಾತ ಸಂಭವಿಸಿದ 3 ರಿಂದ 8 ನಿಮಿಷದ ಒಳಗೆ ಬೈಕ್ ಆಂಬುಲೆನ್ಸ್ ಧಾವಿಸುತ್ತಿದೆ ಎಂದು ಖಾದಿರ್ ತಿಳಿಸಿದರು.

ಒಟ್ಟು 32 ಬೈಕ್ ಗಳಲ್ಲಿ 20 ನ್ನು ಬೆಂಗಳೂರಿಗೆ ನೀಡಲಾಗಿದ್ದು ಉಳಿದವುಗಳನ್ನು ಮುನ್ಸಿಪಲ್ ಕಾರ್ಪೋರೇಶನ್ ಗಳಿಗೆ ನೀಡಲಾಗಿದೆ. ಎಲ್ಲ ಮುನ್ಸಿಪಲ್ ಗಳಿಗೂ ಎರಡು ಬೈಕ್ ನೀಡಲಾಗಿದೆ ಎಂದು ತಿಳಿಸಿದರು.

English summary
The Health and Family Welfare Minister, U.T. Khader on Tuesday launched the facility in Mangaluru. Initially, two motorcycles driven by trained paramedical staff will be available in Mangaluru and Ullal. Mr. Khader said that one of the bikes will be station at areas suggested by the agency which runs ‘108 Ambulances'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X