ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಾವು ವೋಟ್‌ ಮಾಡಲು ಬಿಹಾರಕ್ಕೆ ಹೋಗಲ್ಲ'

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28 : ಬಿಹಾರ ವಿಧಾನಸಭೆ ಚುನಾವಣೆ ದೇಶಾದ್ಯಂತ ಕುತೂಹಲ ಹುಟ್ಟು ಹಾಕಿದೆ. ಆದರೆ, ಬಿಹಾರದಿಂದ ಕೆಲಸ ಹುಡುಕುಕೊಂಡು ಉದ್ಯಾನಗರಿಗೆ ಬಂದಿರುವ ಭರತ್ ಕುಮಾರ್ ಮತ್ತು ಶಿವಶಂಕರ್ ಅವರಿಗೆ ಈ ಚುನಾವಣೆ ಬಗ್ಗೆ ಆಸಕ್ತಿ ಇಲ್ಲ. ಬಿಹಾರದಿಂದ ಬೇರೆ-ಬೇರೆ ರಾಜ್ಯಗಳಿಗೆ ವಲಸೆ ಹೋಗಿರುವವರು ಮತ ಹಾಕಲು ತೆರಳುವುದಿಲ್ಲ ಎನ್ನುತ್ತಾರೆ ಇವರು.

ಭರತ್ ಕುಮಾರ್ ಮತ್ತು ಶಿವಶಂಕರ್ ಅವರು ಬೆಂಗಳೂರಿನಲ್ಲಿ ಚಾಟ್ ಶಾಪ್ ಇಟ್ಟುಕೊಂಡಿದ್ದಾರೆ. ಬಿಹಾರ ಜನರಿಗೆ ಉದ್ಯೋಗ ಬೇಕು. ಕೆಲಸ ಹುಡುಕಿಕೊಂಡು ಬೇರೆ ಕಡೆ ಹೋಗುವಂತಾಗಬಾರದು ಎಂದು ಇವರು ಹೇಳುತ್ತಾರೆ. ಚುನಾವಣೆ ದಿನ ಮತ ಹಾಕಲು ನಾವು ಬಿಹಾರಕ್ಕೆ ಹೋಗುವುದಿಲ್ಲ ಎಂದು ಇಬ್ಬರು ಹೇಳುತ್ತಾರೆ. [ಬಿಹಾರ ಚುನಾವಣಾ ವೇಳಾಪಟ್ಟಿ]

assembly election

ಬಿಹಾರದ ಸುಮಾರು 55 ಲಕ್ಷ ಜನರು ಉದ್ಯೋಗ ಅರಸಿಕೊಂಡು ಬೇರೆ ರಾಜ್ಯಗಳಿಗೆ ಹೋಗಿದ್ದಾರೆ. ಅವರು ಯಾರೂ ಮತಹಾಕಲು ಬಿಹಾರಕ್ಕೆ ಬರುವುದಿಲ್ಲ ಎಂದು ಶಿವಶಂಕರ್ ಹೇಳುತ್ತಾರೆ. ನಿತೀಶ್ ಕುಮಾರ್ ಕೇಂದ್ರದಿಂದ ವಿಶೇಷ ಪ್ಯಾಕೇಜ್ ಕೇಳುತ್ತಿದ್ದಾರೆ. ಆದರೆ, ಬಿಹಾರಕ್ಕೆ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳ ಅಗತ್ಯವಿದೆ ಎಂದು ಇಬ್ಬರು ವಿಶ್ಲೇಷಿಸುತ್ತಾರೆ. [ಬಿಹಾರ ಸೀಟು ಹಂಚಿಕೆ ಲೆಕ್ಕಾಚಾರ]

ಚುನಾವಣೆಯಲ್ಲಿ ಜಾತಿಯೇ ಮುಖ್ಯ : ಕರ್ನಾಟಕವನ್ನು ನನ್ನ ರಾಜ್ಯ ಎಂದು ನಾನು ಅಂದುಕೊಳ್ಳುತ್ತೇನೆ. ನಾನು ಕನ್ನಡ ಮಾತನಾಡಲು ಕಲಿತಿದ್ದೇನೆ ಎಂದು ಹೇಳುವ ಭರತ್ ಕುಮಾರ್, ಬಿಹಾರಕ್ಕೆ ನಾನು ವಾಪಸ್ ಹೋಗುವ ಬಗ್ಗೆ ಖಚಿತವಾದ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎನ್ನುತ್ತಾರೆ. [ಈ 'ವಿಶೇಷ ಅತಿಥಿ'ಗಳ ಮೇಲೆ ಕಣ್ಣು ಇಡುವವರು ಯಾರು?]

ಬಿಹಾರದ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತವೆ. ಆದರೆ, ಅಲ್ಲಿ ನಡೆಯುವುದು ಜಾತಿ ರಾಜಕೀಯ. ಚುನಾವಣೆ ಫಲಿತಾಂಶವನ್ನು ಜಾತಿಯೇ ನಿರ್ಧರಿಸಲಿದೆ ಎನ್ನುತ್ತಾರೆ. ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅಧಿಕಾರಕ್ಕಾಗಿ ಒಂದಾಗಿದ್ದಾರೆ ಎಂದು ವಿಶ್ಲೇಷಿಸುತ್ತಾರೆ.

ವಲಸೆ ಬಂದವರು ಮತ ಹಾಕೋಲ್ಲ : ಚುನಾವಣೆಗಳು ನಡೆದಾಗ ವಲಸೆ ಬಂದವರು ವಾಪಸ್ ಬಿಹಾರಕ್ಕೆ ಹೋಗಿ ಮತದಾನ ಮಾಡುವುದಿಲ್ಲ. 2001ರಲ್ಲಿ ನಡೆಸಿದ ಸಮೀಕ್ಷೆಯಂತೆ 55 ಲಕ್ಷ ಬಿಹಾರಿಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಇಂದಿಗೂ ಈ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಬಿಟ್ಟರೆ ಕಡಿಮೆಯಾಗುತ್ತಿಲ್ಲ.

2013ರ ಸಮೀಕ್ಷೆ ವರದಿಯಂತೆ ಬಿಹಾರದಲ್ಲಿ ಸುಮಾರು 3,345 ಕೈಗಾರಿಕೆಗಳಿವೆ. ಇವು ಅಲ್ಲಿನ ಜನರಿಗೆ ಉದ್ಯೋಗ ನೀಡಲು ವಿಫಲವಾಗುತ್ತಿವೆ. ಆದ್ದರಿಂದ ಜನರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಉದ್ಯೋಗದ ಹೊರತಾಗಿ ಆರೋಗ್ಯ, ಶಿಕ್ಷಣ, ಮೂಲ ಸೌಲಭ್ಯಗಳ ಕೊರತೆ ಮುಂತಾದ ಸಮಸ್ಯೆಗಳು ಬಿಹಾರವನ್ನು ಕಾಡುತ್ತಿದೆ.

English summary
For Bharath Kumar and Shivshankar, the Bihar elections basically mean nothing. Speaking to both of them gives the indication that the large migrant population of Bihar may not return to their home state to cast their vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X