ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಜಾಹಿದೀನ್ ಸಂಘಟನೆಯ ನಾಲ್ವರು ಸದಸ್ಯರು ಪೊಲೀಸರ ವಶ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜುಲೈ, 08 : ಸ್ಫೋಟಕ ರವಾನೆ ಒಳಗೊಂಡಂತೆ ಹಲವು ದುಷ್ಕೃತ್ಯದಲ್ಲಿ ಸಂಬಂಧ ಹೊಂದಿದ್ದಾರೆ ಎಂದು ಭಟ್ಕಳ ಮೂಲದ ನಾಲ್ವರು ಉಗ್ರವಾದಿಗಳ ಮೇಲೆ ಬೆಂಗಳೂರು ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ.

ಸಯ್ಯದ್ ಇಸ್ಮಾಯಿಲ್ ಅಫೆಕ್, ಸಯ್ಯದ್ ಸುಬೂರ್, ಸದ್ದಂ ಹುಸೇನ್, ರಿಯಾಜ್ ಅಹ್ಮದ್ ಸಯ್ಯದೀ ಈ ನಾಲ್ವರು ಕರಾಚಿಯಲ್ಲಿರುವ ಉಗ್ರವಾದಿ ರಿಯಾಜ್ ಭಟ್ಕಳ್, ಇಕ್ಬಾಲ್ ಶಾಹ್ ಬಂದ್ರಿ ಹಾಗೂ ಅತೀಫ್ ಜೊತೆಗೆ ಸಂಪರ್ಕ ಹೊಂದಿದ್ದಾರೆಂಬ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ[ಬಿರಿಯಾನಿಗೆ ಹೆಸರಾಗಿದ್ದ ಭಟ್ಕಳದಲ್ಲಿ ಉಗ್ರರು ಹುಟ್ಟಿದ್ದು ಹೇಗೆ?]

Bhatkal explosives case- Four IM operatives charge sheeted

ನಾಲ್ವರ ಮೇಲೆ ಚಾರ್ಜ್ ಶೀಟ್ ದಾಖಲಿಸಿದ ಪೊಲೀಸರು ಇವರ ಬಳಿ ಇದ್ದಂತಹ ಎಲೆಕ್ಟ್ರಾನಿಕ್ ಆಸ್ಪೋಟಕಗಳು, ಗಿಲಾಟಿನ್ ಸ್ಟಿಕ್, ಅಮೋನಿಯಂ ನೈಟ್ರೇಟ್, ಜಿಹಾದಿ ಸಾಹಿತ್ಯ ಮತ್ತು ಪೋಸ್ಟರ್ಸ್, ಬಾಂಬ್ ಸ್ಫೋಟಕ ಸಂಬಂಧಿಸಿದ ಸರ್ಕ್ಯೂಟ್ ಬೋರ್ಡ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತನಾದ ಇಸ್ಮಾಯಿಲ್ ಅಫೆಕ್ ಬಾಂಬ್ ಸ್ಫೋಟದಲ್ಲಿ ತರಬೇತಿ ಹೊಂದಿದ್ದು, ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್ ಮತ್ತು ಅಫೀಫ್ ಅವರೊಂದಿಗೆ ಭಾರತದ ವಿವಿಧ ಭಾಗಗಳಲ್ಲಿ ನಡೆಸುವ ಬಾಂಬ್ ಸ್ಫೋಟಕ್ಕೆ ಬೇಕಾದ ಬೆಂಬಲ ನೀಡುವುದರ ಬಗ್ಗೆ ತಿಳಿಸಲು ತೆರಳಿದ್ದನು ಎಂದು ತಿಳಿದು ಬಂದಿದೆ. ಅಲ್ಲದೇ ಬಂಧನಕ್ಕೆ ಒಳಗಾದ ಈ ನಾಲ್ವರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಕರಾಚಿ ಪೊಲೀಸರಿಗೆ ತಿಳಿಸಿದ್ದಾರೆ.

English summary
Four members of the Indian Mujahideen have been chargesheeted by the Bengaluru police in connection with various cases which also includes supplying of explosives. The chargesheeted persons are Syed Ismail Afaaque, Syed Suboor, Saddam Hussain and Riyaz Ahmed Sayeedi. The chargesheet states that these persons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X