ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಬೀಫ್ ಫೆಸ್ಟಿವಲ್ ವಿರುದ್ಧ ಗೋರಕ್ಷಕರ ಪ್ರತಿಭಟನೆ

ಕೇರಳದಲ್ಲಿ ನಡೆಸಲಾದ ಗೋಹತ್ಯೆ ಕಮ್ ಬೀಫ್ ಫೆಸ್ಟಿವಲ್ ಈಗ ಬೆಂಗಳೂರಿಗೆ ಕಾಲಿಡುತ್ತಿದೆ. ಸೋಮವಾರ(ಮೇ 29) ಟೌನ್ ಹಾಲ್ ನಲ್ಲಿ ನಿಗದಿಯಾಗಿರುವ ಕಾರ್ಯಕ್ರಮಕ್ಕೆ ಗೋ ಪರಿವಾರದವರು ವಿರೋಧ ವ್ಯಕ್ತಪಡಿಸಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಮೇ 29: ಕೇರಳದಲ್ಲಿ ನಡೆಸಲಾದ ಗೋಹತ್ಯೆ ಕಮ್ ಬೀಫ್ ಫೆಸ್ಟಿವಲ್ ಈಗ ಬೆಂಗಳೂರಿಗೆ ಕಾಲಿಡುತ್ತಿದೆ. ಸೋಮವಾರ(ಮೇ 29) ಟೌನ್ ಹಾಲ್ ನಲ್ಲಿ ನಿಗದಿಯಾಗಿರುವ ಕಾರ್ಯಕ್ರಮಕ್ಕೆ ಗೋ ಪರಿವಾರದವರು ವಿರೋಧ ವ್ಯಕ್ತಪಡಿಸಿ, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬೀಫ್ ಫೆಸ್ಟಿವಲ್ ನಿಲ್ಲಿಸಿ ಎಂದು ಅಭಿಯಾನ ಆರಂಭಿಸಿದ್ದಾರೆ.

ಅಕ್ರಮವಾಗಿ ಪಶುಗಳ(ಹಸು,ಎಮ್ಮೆ, ಒಂಟೆ, ಎತ್ತು, ಇತ್ಯಾದಿ)ಮಾರಾಟವನ್ನು ತಪ್ಪಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿದ ನಿಯಮಾವಳಿಗಳ ವಿರುದ್ಧ ಕೇರಳದಲ್ಲಿ ಭಾರಿ ವಿರೋಧ, ಪ್ರತಿಭಟನೆ ವ್ಯಕ್ತವಾಗಿತ್ತು.[ಗೋಹತ್ಯೆ ನಿಷೇಧದ ವಿರುದ್ಧ ಗೋಮಾಂಸ ಭಕ್ಷಣೆ ಉತ್ಸವ]

Bharatiya Gou Parivara oppose Beef Fest in Bengaluru

ಕೇರಳದಲ್ಲಿ ಬಿಜೆಪಿ ಹೊರತುಪಡಿಸಿ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್(ಯುಡಿಎಫ್), ಎಲ್ ಡಿ ಎಫ್ ಇನ್ನಿತರ ಪಕ್ಷಗಳು ಸೇರಿದಂತೆ ದನದ ಮಾಂಸ ಭಕ್ಷಕರು ನಡುರಸ್ತೆಯಲ್ಲಿ ಗೋ ಹತ್ಯೆ ಮಾಡಿ, ಮಾಂಸ ಹಂಚಿಕೊಂಡು ಪ್ರತಿಭಟನೆ ಮಾಡಿದ್ದರು. ನಂತರ ಮಾಂಸದ ಪಾರ್ಸೆಲ್ ವೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕಳಿಸುವ ಯೋಜನೆ ಹಾಕಿದ್ದರು.[ಕಸಾಯಿಖಾನೆ ಮುಚ್ಚಿ, ಆಹಾರ ಹಕ್ಕು ಕಸಿದುಕೊಂಡಿದ್ದೇಕೆ? : ಯೋಗಿಗೆ ಪ್ರಶ್ನೆ]

ಈಗ ಬೀಫ್ ಫೆಸ್ಟಿವಲ್ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಇದರ ವಿರುದ್ಧ ಗೋ ರಕ್ಷಕರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಭಾರತದ ಅನೇಕ ರಾಜ್ಯಗಳಲ್ಲಿ ಅಕ್ರಮ ಗೋವುಗಳ ಸಾಗಾಟ, ಮಾರಾಟ, ಹತ್ಯೆ ನಡೆಯುತ್ತಲೇ ಇದೆ. ಈ ಬಗ್ಗೆ ರಾಜ್ಯ ಸರ್ಕಾರಗಳು ಯಾವುದೇ ಸಮರ್ಥ ಕಾನೂನು ರೂಪಿಸಿಲ್ಲ. ಗೋ ಹತ್ಯೆ ನಿಷೇಧ ಹೇರಿಕೆಗೆ ಕಾನೂನು ರೂಪಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸುವಂತೆ ಕೋರಿ ಸುಪ್ರೀಂಕೋರ್ಟಿಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಆದರೆ, ಇತ್ತೀಚೆಗೆ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ವಿರೋಧಾಭಾಸದಿಂದ ಕೂಡಿದ್ದು, ಕೇರಳದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗಿದೆ.

English summary
Bharatiya Gou Parivara to oppose Beef Fest evet to be held at Town hall, Beengaluru on May 29, 2017. The right wing groups decided to trend #StopBeefFest on Twitter against beef fest organized by a group which is influenced by the cow slaughter in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X