ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ ರತ್ನ ಸಿಎನ್ಆರ್ ರಾವ್ ವ್ಯಕ್ತಿ ಚಿತ್ರ

|
Google Oneindia Kannada News

ಬೆಂಗಳೂರು, ನ. 16 : ಹಿರಿಯ ವಿಜ್ಞಾನಿ ಪ್ರೊ ಸಿ.ಎನ್.ಆರ್. ರಾವ್ ಅವರಿಗೆ ಕೇಂದ್ರ ಸರ್ಕಾರ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನ ನೀಡಿದೆ. ಪ್ರೊ ರಾವ್ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯವರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಸದ್ಯ ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆ ಪರಿಷತ್ ಅಧ್ಯಕ್ಷರಾಗಿ ಸೇವೆ ಅವರು ಸಲ್ಲಿಸುತ್ತಿದ್ದಾರೆ.

ಜೂನ್ 30, 1934ರಲ್ಲಿ ಜನಿಸಿದ ಪ್ರೊ.ಸಿ.ಎನ್.ಆರ್. ರಾವ್ ಅವರ ಪೂರ್ಣ ಹೆಸರು ಚಿಂತಾಮಣಿ ನಾಗೇಶ ರಾಮಚಂದ್ರರಾವ್. ರಸಾಯನ ಶಾಸ್ತ್ರ ವಿಷಯದಲ್ಲಿ ಸಾಕಷ್ಟು ಸಂಶೋಧನೆ ಮಾಡಿರುವ ರಾವ್ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಸೇವಾ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಗಿದೆ.

C.N.R. Rao

ಸಿ.ಎನ್.ಆರ್. ರಾವ್ ಅವರ ತಂದೆ ಹನುಮಂತ ನಾಗೇಶ್ ರಾವ್, ತಾಯಿ ಹನುಂತಮ್ಮ ನಾಗಮ್ಮ ರಾವ್. ಮೈಸೂರು ವಿಶ್ವವಿದ್ಯಾಲಯದಲ್ಲಿ 1951ರಲ್ಲಿ ರಾವ್ ತಮ್ಮ ಪದವಿ ಅಧ್ಯಯನವನ್ನು ಮುಗಿಸಿದರು. ಎರಡು ವರ್ಷಗಳ ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಪಕರಾಗಿ ರಾವ್ 1963ರಲ್ಲಿ ವೃತ್ತಿ ಜೀವನ ಆರಂಭಿಸಿದರು.

ರಸಾಯನ ಶಾಸ್ತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಪ್ರೊ.ಸಿ.ಎನ್.ಆರ್. ರಾವ್ ಅವರು 1, 4000 ರಿಸರ್ಚ್ ಪೇಪರ್ ಮತ್ತು 45 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ರಾವ್ ಬೆಂಗಳೂರಿನಲ್ಲಿರುವ ಜವಾಹರ್ ಲಾಲ್ ನೆಹರು ತಾರಾಲಯದ ಸಂಸ್ಥಾಪಕ ಅಧ್ಯಕ್ಷರು ಹೌದು.

ಪ್ರಾಧ್ಯಪಕರಾಗಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಆಕ್ಸಫರ್ಡ್, ಕೇಂಬ್ರಿಡ್ಜ್ ಗಳಲ್ಲಿ ರಾವ್ ಉಪನ್ಯಾಸ ನೀಡಿದ್ದಾರೆ. ರಸಾಯನಶಾಸ್ತ್ರ ವಿಷಯಕ್ಕೆ ಸಿ.ಎನ್.ಆರ್.ರಾವ್ ಬಹಳಷ್ಟು ಕೊಡುಗೆ ನೀಡಿದ್ದಾರೆ. ಯು.ಎಸ್.ನ್ಯಾಷನಲ್ ಅಕಾಡಮೆ ಪ್ರಶಸ್ತಿ, ಅಮೆರಿಕಾ ಅಕಾಡಮಿಯ ವಿಜ್ಞಾನಿ ಪ್ರಶಸ್ತಿಯನ್ನು ರಾವ್ ಮುಡಿಗೇರಿಸಿಕೊಂಡಿದ್ದಾರೆ.

English summary
Indian chemist C.N.R. Rao awarded as Bharat Ratna. Chintamani Nagesa Ramachandra Rao (C.N.R.Rao) is belongs to Karnataka, Chintamani taluk Chikballapur district. He has worked mainly in solid-state and structural chemistry. Currently he serves as the Head of the Scientific Advisory Council to the Prime Minister of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X