ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿ ಗಮನ ಸೆಳೆದ ಬೆಂಗಳೂರಿನ ಬಾಲಕ

By Mahesh
|
Google Oneindia Kannada News

ಬೆಂಗಳೂರು, ಅ.15: ಬೆಂಗಳೂರಿನ ಕಸದ ಸಮಸ್ಯೆಯ ನಂತರ ಟ್ರಾಫಿಕ್ ಸಮಸ್ಯೆ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ನಗರದ ಎಂಟು ವರ್ಷದ ಬಾಲಕ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನವನ್ನು ಸೆಳೆದಿದ್ದಾನೆ. ಬಾಲಕನ ಪತ್ರಕ್ಕೆ ಓಗೊಟ್ಟಿರುವ ಪ್ರಧಾನಿ ಅವರು ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಶಾಲೆ, ಕಚೇರಿಗೆ ಸರಿಯಾದ ಸಮಯಕ್ಕೆ ಹೋಗಿ ಬರಲು ಆಗುತ್ತಿಲ್ಲ. ಈ ಬಗ್ಗೆ ಕೂಡಲೇ ಗಮನ ಹರಿಸಿ, ಪರಿಹಾರ ಸೂಚಿಸಿ ಎಂದು ಅಭಿನವ್ ಎಂಬ ಬಾಲಕ ಪ್ರಧಾನಿ ಸಚಿವಾಲಯಕ್ಕೆ ಪತ್ರ ಬರೆದಿದ್ದಾನೆ.

When an 8-year-old boy mailed PMO over delay in completion of flyover

ಯಶವಂತಪುರದ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಮೂರನೇ ತರಗತಿಯ ವಿದ್ಯಾರ್ಥಿ ಅಭಿನವ್‌ ಅವರು ಪ್ರಧಾನಿ ಕಾರ್ಯಾಲಯಕ್ಕೆ ಬರೆದ ಪತ್ರದಲ್ಲಿ ವಾಯವ್ಯಬೆಂಗಳೂರಿನ ಪ್ರಮುಖ ಜಂಕ್ಷನ್‌ವೊಂದರಲ್ಲಿ ಪದೇಪದೇ ಟ್ರಾಫಿಕ್‌ಜಾಮ್ ಸಂಭವಿಸುತ್ತಿದೆ ಎಂದು ವಿವರಿಸಿದ್ದಾನೆ. ನಾನು ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರದ ಬಳಿ ವಾಸವಾಗಿದ್ದೇನೆ ನನ್ನ ಮನೆಯಿಂದ ಶಾಲೆಗೆ 3 ಕಿ.ಮೀ ಮಾತ್ರ ದೂರವಿದೆ. ಅದರೆ, ಶಾಲೆ ತಲುಪಲು 45 ನಿಮಿಷ ಬೇಕಾಗುತ್ತದೆ.

ಟ್ರಾಫಿಕ್ ಜಾಮ್ ಪ್ರಯಾಣಿಕರ, ವಾಹನ ಸವಾರರ ತಾಳ್ಮೆ ಪರೀಕ್ಷಿಸುತ್ತಿದೆ ಎಂದು ದೂರಿದ್ದಾನೆ. ಟ್ರಾಫಿಕ್‌ಜಾಮ್‌, ಜನರ ಆರೋಗ್ಯ, ನನ್ನ ಕಲಿಕೆಗೆ ತೊಂದರೆಯಾಗುತ್ತಿದೆ.

ಗೋರಗುಂಟೆಪಾಳ್ಯಜಂಕ್ಷನ್‌ನ ಸಮೀಪದ ಹೊರ ರಿಂಗ್‌ರೋಡ್‌ನ್ನು ಹಾದು ಹೋಗುವ ರೈಲುಮಾರ್ಗದ ಮೇಲೆ ನಿರ್ಮಾಣವಾಗುತ್ತಿರುವ ಫ್ಲೈಓವರ್‌ನಿಂದಾಗಿ ಟ್ರಾಫಿಕ್‌ಜಾಮ್‌ ಉಂಟಾಗುತ್ತಿದೆ. ಎಂದು ಉಲ್ಲೇಖಿಸಿದ್ದಾನೆ.

ಬಾಲಕನ ಪತ್ರದ ಬಗ್ಗೆ ಪರಿಶೀಲನೆ ನಡೆಸುವಂತೆ ರೈಲ್ವೆ ಇಲಾಖೆಗೆ ಪ್ರಧಾನಿ ಸಚಿವಾಲಯ ಸೂಚನೆನೀಡಿದೆ. ರಕ್ಷಣಾ ಇಲಾಖೆಯಿಂದ ಅನುಮತಿ ಪಡೆಯಲು ವಿಳಂಬವಾದ ಹಿನ್ನೆಲೆಯಲ್ಲಿ ಫ್ಲೈಓವರ್‌ ನಿರ್ಮಾಣ ಪ್ರಗತಿ ಕಾಣದೆ ಕುಂಠಿತವಾಗುತ್ತಿದೆ.

English summary
Alert and educated citizens are like a blessing in the road to development, for any country or its cities and states. In Bengaluru, an eight-year-old-boy grabbed the eyeballs when he sent a mail to PMO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X