ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: 7ನೇ ದಿನಕ್ಕೆ ಕಾಲಿಟ್ಟ ಓಲಾ, ಉಬರ್ ಚಾಲಕರ ಪ್ರತಿಭಟನೆ

ವಿವಿಧ ಬೇಡಿಕೆಗಳು ಮತ್ತು ಆ್ಯಪ್ ಆಧಾರಿತ ಸಂಸ್ಥೆಗಳಿಂದಾಗುತ್ತಿರುವ ದೌರ್ಜನ್ಯ ಖಂಡಿಸಿ ಓಲಾ ಮತ್ತು ಉಬರ್ ಚಾಲಕರು ನಡೆಸುತ್ತಿರುವ ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದ್ದು, ಬೆಂಗಳೂರಲ್ಲಿ ಯಾವುದೇ ಕ್ಯಾಬುಗಳು ಓಡುತ್ತಿಲ್ಲ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 27: ಬೆಂಗಳೂರಿನ ರಸ್ತೆಗಳಿಂದ ಓಲಾ ಮತ್ತು ಉಬರ್ ಕ್ಯಾಬ್ ಗಳು ಮಾಯವಾಗಿ ಇಂದಿಗೆ ಏಳನೇ ದಿನ.

ವಿವಿಧ ಬೇಡಿಕೆಗಳು ಮತ್ತು ಆ್ಯಪ್ ಆಧಾರಿತ ಸಂಸ್ಥೆಗಳಿಂದಾಗುತ್ತಿರುವ ದೌರ್ಜನ್ಯ ಖಂಡಿಸಿ ಓಲಾ ಮತ್ತು ಉಬರ್ ಚಾಲಕರು ನಡೆಸುತ್ತಿರುವ ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದ್ದು, ಬೆಂಗಳೂರಲ್ಲಿ ಯಾವುದೇ ಕ್ಯಾಬುಗಳು ಓಡುತ್ತಿಲ್ಲ.

ಬೆಂಗಳೂರಲ್ಲಿ ಓಲಾ ಮತ್ತು ಉಬರ್ ಸಂಸ್ಥೆಗಳ ಸುಮಾರು 50,000 ಕ್ಯಾಬುಗಳಿದ್ದು ನಗರ ಸಾರಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಇದೀಗ ಕ್ಯಾಬುಗಳಿಲ್ಲದೆ ಜನ ಪರಿದಾಡುತ್ತಿದ್ದಾರೆ. ಇನ್ನೊಂದೆಡೆ ಸಮಸ್ಯೆ ಪರಿಹಾರವಾಗದೆ ಕ್ಯಾಬು ಚಾಲಕರು ಮತ್ತು ಮಾಲಿಕರೂ ಕಂಗಾಲಾಗಿದ್ದಾರೆ.[ಶುಕ್ರವಾರದಿಂದ ಓಲಾ ಶೇರ್, ಉಬರ್ ಪೂಲ್ ರಸ್ತೆ ಮೇಲೆ ಓಡಲ್ಲ]

Bengaluru: Seven days into the strike and services in Ola and Uber are almost halted

ಪ್ರತಿಭಟನೆಗೆ ಅನುಮತಿ ನೀಡದ ಹಿನ್ನಲೆಯಲ್ಲಿ ಭಾನುವಾರ ಕ್ಯಾಬು ಚಾಲಕರು ವಿನೂತನ ಪ್ರತಿಭಟನೆಗೆ ಇಳಿದರು. ಯುಬಿ ಸಿಟಿ ಮುಂಭಾಗ ಸರಕಾರಕ್ಕೆ ಕೊಡಲು ಸಾರ್ವಜನಿಕರಿಂದ ಕಪ್ಪ ಸಂಗ್ರಹಿಸುವ ಪ್ರತಿಭಟನೆ ನಡೆಸಿದರು.

ಈ ಹಿಂದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಕ್ಯಾಬ್ ಚಾಲಕರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕೋರಿ ಸಂಘಟನೆಗಳು ಮುಖ್ಯಸ್ಥರು ಫೆಬ್ರವರಿ 25ರಿಂದ ಪೊಲೀಸರ ಅನುಮತಿಗಾಗಿ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ ಇನ್ನೂ ಅನುಮತಿ ನೀಡಿಲ್ಲ.[ಹುಬ್ಬಳ್ಳಿ: ಓಲಾ, ಊಬರ್ ವಿರುದ್ಧ ಬೀದಿಗಿಳಿದ ಟ್ಯಾಕ್ಸಿ ಚಾಲಕರು]

ಇನ್ನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ಕ್ಯಾಬ್ ಚಾಲಕರನ್ನು ಸಂಘಟನೆ ಚಾಲಕರು ಪ್ರತಿಭಟನೆಗೆ ಆಹ್ವಾನಿಸುತ್ತಿದ್ದಾರೆ. ಹಲವೆಡೆಗಳಲ್ಲಿ ಕ್ಯಾಬುಗಳನ್ನು ತಡೆಯುತ್ತಿದ್ದಾರೆ, ಕಾರಿಗೆ ಹಾನಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಬೆಂಗಳೂರಿನಲ್ಲಿ ಕ್ಯಾಬ್ ಸೇವೆಗಳು ಮಾತ್ರ ಸಂಪೂರ್ಣ ಸ್ತಬ್ಧವಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ.

English summary
The strike by Ola and Uber drivers against the app based cab aggregators impacted lakhs of commuters in the city as the protest continue to day seven in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X