ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಫ್ ನೀತಿ ಖಂಡನೆ, ಪ್ರತಿಭಟನೆ, ಹೊಸೂರು ರಸ್ತೆ ಟ್ರೆಂಡಿಂಗ್

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 19: ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲೂ ಪ್ರತಿಭಟನೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಕಾರ್ಮಿಕರ ಭವಿಷ್ಯ ನಿಧಿ ನೀತಿ ತಿದ್ದುಪಡಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೊಸೂರು ರಸ್ತೆ, ಜಾಲಹಳ್ಳಿ ಕ್ರಾಸ್, ಮೈಸೂರು ರಸ್ತೆ, ಸರ್ಜಾಪುರ ರಸ್ತೆ ಹೀಗೆ ಎಲ್ಲೆಡೆ ಹಿಂಸಾಚಾರ ನಡೆಯುತ್ತಿದ್ದು, ಹೊಸೂರು ರಸ್ತೆ ಸದ್ಯಕ್ಕೆ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಕೇಂದ್ರ ಸರ್ಕಾರದ ಹೊಸ ಪಿಎಫ್ ನೀತಿ ಖಂಡಿಸಿ ಗಾರ್ಮೆಂಟ್ಸ್ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ ಮುಂದುವರಿದೆ. ಗಾರ್ಮೆಂಟ್ ಸೇರಿದಂತೆ ಹಲವು ಫ್ಯಾಕ್ಟರಿಗಳ ಕಾರ್ಮಿಕರು ಬೆಂಗಳೂರಿನ ವಿವಿಧೆಡೆ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.[ಬೆಂಗಳೂರು ಪೊಲೀಸರ ಮೂರ್ಖತನ ಇದೇ ಮೊದಲಲ್ಲ]

ಕಾರ್ಮಿಕರ ಭವಿಷ್ಯ ನಿಧಿ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಕಾರ್ಖಾನೆ ಮಾಲೀಕರು ಹಾಗೂ ಕಾರ್ಮಿಕರು ಮಾಸಿಕ ಕಂತುಗಳಲ್ಲಿ ಪಾವತಿಸಿದ ಪಿಎಫ್ ಹಣವನ್ನು 58 ವರ್ಷಗಳ ನಂತರ (ನಿವೃತ್ತಿ ನಂತರ) ಹಿಂಪಡೆಯಬೇಕು ಎಂದು ಹೇಳಲಾಗಿತ್ತು.[ಗಾರ್ಮೆಂಟ್ಸ್ ನೌಕರರ ಕಥೆ ಬಿಚ್ಚಿಟ್ಟ ಸಾವಿತ್ರಿ]

ಆದರೆ, ತೀವ್ರ ವಿರೋಧದ ನಂತರ ಆರೋಗ್ಯ, ವಸತಿ ವಿಷಯಕ್ಕಾಗಿ ಬೇಕಾದರೆ ಮುಂಚಿತವಾಗಿ ಹಿಂಪಡೆಯುವ ಅವಕಾಶ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ. [ಕಾರ್ಮಿಕರನ್ನು ಕೆರಳಿಸಿದ ಕೇಂದ್ರದ ನೀತಿ ಯಾವುದು?]

ಆದರೆ, ಮೋದಿ ಸರ್ಕಾರಕ್ಕೆ ಕಾರ್ಮಿಕರ ಕಣ್ಣೀರು ಕಾಣಿಸುತ್ತಿಲ್ಲ, ಕಾರ್ಮಿಕರಿಗೆ ಮರಣ ಶಾಸನ ಬರೆಯಲಾಗುತ್ತಿದೆ ಎಂದು ಹೇಳಿ ಪ್ರತಿಭಟನೆ ತೀವ್ರಗೊಳಿಸಲಾಗುತ್ತಿದೆ. ಪ್ರತಿಭಟನೆ ವಿಡಿಯೋ ನೋಡಿ

ಸರ್ಕಾರಕ್ಕೆ ಕಾರ್ಮಿಕರ ಕಣ್ಣೀರು ಕಾಣಿಸುತ್ತಿಲ್ಲ

ಸರ್ಕಾರಕ್ಕೆ ಕಾರ್ಮಿಕರ ಕಣ್ಣೀರು ಕಾಣಿಸುತ್ತಿಲ್ಲ

ಈ ನಡುವೆ ವಿವಿಧ ರಸ್ತೆಗಳಲ್ಲಿನ ಟ್ರಾಫಿಕ್ ಜಾಮ್ ಮಾಹಿತಿ, ಪ್ರತಿಭಟನೆ ಸ್ವರೂಪದ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಲಾಗುತ್ತಿದೆ.

ಹೊಸೂರು ರಸ್ತೆ ಸಂಚಾರ ಸುಗಮಗೊಳಿಸಲಾಗಿದೆ

ಹೊಸೂರು ರಸ್ತೆ ಸಂಚಾರ ಸುಗಮಗೊಳಿಸಲಾಗಿದೆ

ಹೊಸೂರು ರಸ್ತೆ ಸಂಚಾರ ಸುಗಮಗೊಳಿಸಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಮಾಹಿತಿ.

ಸ್ವಾತಂತ್ರ್ಯ ಭಾರತದಲ್ಲಿ ಇಂಥದ್ದೆಲ್ಲ ನಡೆಯುತ್ತಿದೆ

ಸ್ವಾತಂತ್ರ್ಯ ಭಾರತದಲ್ಲಿ ಇಂಥದ್ದೆಲ್ಲ ನಡೆಯುತ್ತಿದೆ, 5 ಬಸ್ ಗಳಿಗೆ ಬೆಂಕಿ, ಕಾರ್ಮಿಕರಿಗೆ ಅನ್ಯಾಯ, ಈ ನಡುವೆ ಹೊಸೂರು ರಸ್ತೆ ಸಂಚಾರ ಸುಗಮ ಎಂದು ಮಾಹಿತಿ.

ಪೊಲೀಸ್ ಠಾಣೆಗೆ ನುಗ್ಗಿದ್ದ ಪ್ರತಿಭಟನೆಗಾರರು

ಹೊಸೂರು ರಸ್ತೆಯ ಹೆಬ್ಬಗೋಡಿ ಪೊಲೀಸ್ ಠಾಣೆಗೆ ನುಗ್ಗಿದ್ದ ಪ್ರತಿಭಟನೆಗಾರರು

ಬೊಮ್ಮಸಂದ್ರದಿಂದ ನಗರಕ್ಕೆ ಹೋಗಲು ಆಗುತ್ತಿಲ್ಲ

ಬೊಮ್ಮಸಂದ್ರದಿಂದ ನಗರಕ್ಕೆ ಹೋಗಲು ಆಗುತ್ತಿಲ್ಲ, ಯಾವುದೋ ರಸ್ತೆ ಹಿಡಿದು ಹೆಬ್ಬಗೋಡಿ ತನಕ ಬಂದೆ, ಗೂಗಲ್ ಮ್ಯಾಪ್ ಬಳಸಿ, ಸ್ಮಶಾನ, ನಿರ್ಜನ ಪ್ರದೇಶಗಳಲ್ಲಿ ಸಂಚರಿಸಿದೆ ಎಂದು ಟ್ವೀಟ್ ಮಾಡಿದ ಸಾರ್ವಜನಿಕರು.

ಬರೀ ಹೊಸೂರು ರಸ್ತೆಯಲ್ಲ ಬೇರೆ ಕಡೆ ಕೂಡಾ ಪ್ರತಿಭಟನೆ

ಬರೀ ಹೊಸೂರು ರಸ್ತೆಯಲ್ಲ, ತುಮಕೂರು, ಮಾಗಡಿ, ಮೈಸೂರು, ಸರ್ಜಾಪುರ ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಎಲ್ಲೆಡೆ 10 ಕಿ.ಮೀಗೂ ಉದ್ದದ ಟ್ರಾಫಿಕ್ ಜಾಮ್ ಇದೆ.

ಟ್ರಾಫಿಕ್ ಅಲರ್ಟ್ ಸಂದೇಶ ಕಳಿಸಿದ ಪೊಲೀಸರು

ಟ್ರಾಫಿಕ್ ಅಲರ್ಟ್ ಸಂದೇಶ ಕಳಿಸಿದ ಪೊಲೀಸರು

ನಿತಿನ್ ಗಡ್ಕರಿಗೆ ಪ್ರಶ್ನೆ ಎಸೆದ ಸಾರ್ವಜನಿಕರು

ನಿತಿನ್ ಗಡ್ಕರಿಗೆ ಪ್ರಶ್ನೆ ಎಸೆದ ಸಾರ್ವಜನಿಕರು, ರಾಷ್ಟ್ರೀಯ ಹೆದ್ದಾರಿ ನಿಭಾಯಿಸಲು ಆಗುತ್ತಿಲ್ಲವೇ? ಎಂದಿದ್ದಾರೆ.

ಪ್ರತಿಭಟನೆ ವಿಡಿಯೋ ನೋಡಿ

ಕಾರ್ಮಿಕ, ಪ್ರತಿಭಟನೆ ಆಕ್ರೋಶ, ದಾಳಿ ವಿಡಿಯೋದಲ್ಲಿ ನೋಡಿ

English summary
Nearly 10,000 garment workers came out to the streets to protest against the amendment to the Employees Provident Funds and Miscellaneous Provisions Act, 1952. Hosur Road, Jalahalli Cross, Mysore road are blocked by garment workers, Buses Burnt, many injured now Hosur Road is trending on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X