ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿನ್ ಫ್ಯಾಕ್ಟರಿ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ರುಜು ಮಾಡಿ

|
Google Oneindia Kannada News

ಬೆಂಗಳೂರು, ಜು. 08: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅದರಲ್ಲೂ ಟಿನ್ ಫ್ಯಾಕ್ಟರಿ ಮತ್ತು ಸಿಲ್ಕ್ ಬೋರ್ಡ್ ಯಾತನೆ ಅನುಭವಿಸುತ್ತಿರುವವರಿಗೆ ಸಮಸ್ಯೆಯ ಆಳ ಅಗಲ ಮತ್ತಷ್ಟು ಚೆನ್ನಾಗಿ ತಿಳಿದಿರುತ್ತದೆ.

ಟಿನ್ ಫ್ಯಾಕ್ಟರಿಯ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕಾಣಿಸಲು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಯೊಂದನ್ನು ಆನ್ ಲೈನ್ ಮೂಲಕ ಸಲ್ಲಿಕೆ ಮಾಡಲು ತೀರ್ಮಾನ ಮಾಡಲಾಗಿದೆ. ಅಲ್ಲದೇ ಪ್ರತಿಗಳನ್ನು ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಮತ್ತು ರಾಜ್ಯದ ಸಚಿವರಿಗೂ ಕಳುಹಿಸಿಕೊಡಲು ನಿರ್ಧಾರ ಮಾಡಲಾಗಿದೆ.[ಬೆಂಗಳೂರು ಪೊಲೀಸ್ ಸಕಲ ಸಾರ್ವಜನಿಕ ಮಾಹಿತಿ]

bengaluru

ಬೆಂಗಳೂರಿನ ಐಟಿ ಕೇಂದ್ರ ವೈಟ್ ಫೀಲ್ಡ್ ಕಡೆ ಸಂಚರಿಸುವವರು ಅನಿವಾರ್ಯವಾಗಿ ಟಿನ್ ಫ್ಯಾಕ್ಟರಿ ಮೂಲಕ ಹಾದು ಹೋಗಬೇಕಾಗುತ್ತದೆ. ಚೆನ್ನೈ, ಕೋಲಾರ, ಚಿಂತಾಮಣಿ, ಹೊಸಕೋಟೆ, ಚಿತ್ತೂರು, ತಿರುಪತಿ, ಕಡಪ, ಮುಳುಬಾಗಿಲು, ಕೆಜಿಎಫ್ ಮತ್ತಿತರ ಭಾಗಗಳಿಗೆ ಸಂಚರಿಸುವವರು ಇದೇ ಮಾರ್ಗವನ್ನು ಬಳಸಬೇಕು.

ಕಳೆದ ಒಂದು ದಶಕದಿಂದ ಟ್ರಾಫಿಕ್ ಸಮಸ್ಯೆ ಉಲ್ಬಣವಾಗುತ್ತಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ಎರಡು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕು ಎಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ. ಮನವಿಗೆ ನೀವು ರುಜು ಮಾಡಬಹುದಾಗಿದ್ದು, ಸಹಿ ಹಾಕಿ ಸರ್ಕಾರವನ್ನು ಆಗ್ರಹಿಸಿಲು ಇಲ್ಲಿ ಕ್ಲಿಕ್ ಮಾಡಿ.

English summary
Tin Factory junction in Bengaluru is a major junction for traffic moving towards IT hubs Whitefield, Electronic City and many major towns and cities like Chennai, Kolar, Chintamani, Hoskote, Tirupati, Chittur, Kadapa, Malur, Mulbagal, KGF, Srinivaspur etc. Every day thousands of people struggle passing this junction in all directions. A online petition is ready to submit CM Siddaramah amd Central Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X