ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

7 ಲೈಂಗಿಕ ದೌರ್ಜನ್ಯ ಕೇಸ್, ನರ್ಸರಿ ಶಾಲೆಗೆ ಬೀಗ ಜಡಿದ ಸರ್ಕಾರ

ಇನ್ನೂ ಅಂಬೆಗಾಲಿಡುತ್ತಿದ್ದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ನರ್ಸರಿ ಶಾಲೆಯ ಸಿಬ್ಬಂದಿ ಮಂಜುನಾಥನನ್ನು ಬಂಧಿಸಲಾಗಿತ್ತು. ಈತನ ಮೇಲೆ 7 ಎಫ್ಐಆರ್ ದಾಖಲಾಗುತ್ತಿದ್ದಂತೆ ಸರಕಾರ ಶಾಲೆ ಮುಚ್ಚಲು ಆದೇಶ ಹೊರಡಿಸಿದೆ.

By ಅನುಶಾ ರವಿ
|
Google Oneindia Kannada News

ಬೆಂಗಳೂರು, ಮಾರ್ಚ್ 5: ಇನ್ನೂ ಅಂಬೆಗಾಲಿಡುತ್ತಿದ್ದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ನರ್ಸರಿ ಶಾಲೆಯ ಸಿಬ್ಬಂದಿ ಮಂಜುನಾಥನನ್ನು ಬಂಧಿಸಲಾಗಿತ್ತು. ಈತನ ಮೇಲೆ 7 ಎಫ್ಐಆರ್ ದಾಖಲಾಗುತ್ತಿದ್ದಂತೆ ಸರಕಾರ ಶಾಲೆ ಮುಚ್ಚಲು ಆದೇಶ ಹೊರಡಿಸಿದೆ.

ಶಾಲಾ ಮಕ್ಕಳಿಗೆ ಸುರಕ್ಷತೆ ನೀಡುವಲ್ಲಿ ವಿಫಲವಾದ ಹಾಗೂ ನಿಯಮಾವಳಿಗಳನ್ನು ಪಾಲಿಸದ ಹಿನ್ನಲೆಯಲ್ಲಿ ವಲಯ ಶಿಕ್ಷಣಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಶಾಲೆಯ ಮೇಲೆ ಕೇಸುಗಳು ದಾಖಲಾದ ನಂತರ ಪೊಲೀಸರು ಶಾಲೆಯ ಮುಖ್ಯೋಪಾಧ್ಯಾರನ್ನು ಬಂಧಿಸಿದ್ದರು. ಆದರೆ ನಂತರ ಬೇಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.[ಬೆಂಗಳೂರಿನ ಶಾಲೆಯೊಂದರಲ್ಲಿ ಹಲವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ]

Bengaluru Pre-school horror: Government shuts down school after allegation of sexual assault

ವಲಯ ಶಿಕ್ಷಣಾಧಿಕಾರಿ ಶಾಲೆಗೆ ಬರೆದಿರುವ ಪತ್ರದಲ್ಲಿ, "ಪೋಷಕರು ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ದೂರು ಸಲ್ಲಿಸಿದಾಗಲೂ ಶಾಲೆ ಸ್ಪಂದಿಸಿಲ್ಲ. ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸುವಲ್ಲಿ ಶಾಲೆ ವಿಫಲವಾಗಿದೆ. ಹಾಗಾಗಿ ಶಾಲೆ ತೆರೆಯುವುದು ಸರಿಯಲ್ಲ," ಎಂದು ಪತ್ರದಲ್ಲಿ ತಿಳಿಸಿದ್ದಾರೆ.[ಪ್ರೀತಿ ವಿಚಾರದಲ್ಲಿ ಗಲಾಟೆ, ಎಸ್ಎಸ್ಎಲ್ಸಿ ವಿದ್ಯಾರ್ಥಿಯ ಇರಿದು ಕೊಲೆ]

ಇದೇ ಪತ್ರದಲ್ಲಿ ಪೋಷಕರು ಹತ್ತಿರದ ನಿಯಮಾನುಸಾರ ನಡೆಯುತ್ತಿರುವ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುವಂತೆ ಮನವಿ ಮಾಡಲಾಗಿದೆ. ಘಟನೆ ಬೆಳಕಿಗೆ ಬಂದ ನಂತರ ಶಾಲೆ ತೆರೆಯಬಾರದು ಎಂದು ಪೋಷಕರು ರೊಚ್ಚಿಗೆದ್ದಿದ್ದರು. ಇದೀಗ ಸರಕಾರವೇ ಅಧಿಕೃತವಾಗಿ ಶಾಲೆಗೆ ಬೀಗ ಜಡಿದಿದೆ. (ಒನ್ ಇಂಡಿಯಾ ಸುದ್ದಿ)

English summary
Days after staff of a pre-school in Bengaluru was arrested for sexually assaulting toddlers the government has ordered for the pre-school to shut down. Seven FIRs were filed against Manjunath, a staff in the pre-school for assaulting children after multiple cases came to light.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X