ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಬಿವಿಪಿ ವಿರುದ್ಧ ಅಪ್ರಾಪ್ತರ ಅಪಹರಣ ಪ್ರಕರಣ ದಾಖಲು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 20: ಗಲಭೆಗಾಗಿ ಅಪ್ರಾಪ್ತರ ಅಪಹರಣ ಸೇರಿದಂತೆ ಹಲವು ಪ್ರಕರಣಗಳನ್ನು ಎಬಿವಿಪಿ ವಿರುದ್ಧ ಬೆಂಗಳೂರು ಪೊಲೀಸರು ದಾಖಲಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರೊಬ್ಬರು ಎಬಿವಿಪಿ ವಿರುದ್ಧ ದೂರು ನೀಡಿದ್ದಾರೆ.

ರಾಜದ್ರೋಹದ ಪ್ರಕರಣ ದಾಖಲಾಗಿರುವ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಎಬಿವಿಪಿ ಒತ್ತಾಯಿಸಿತ್ತು. ಕಳೆದ ವಾರ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು. ಆ ನಂತರ ಸಂಸ್ಥೆ ವಿರುದ್ಧ ರಾಜದ್ರೋಹದ ಪ್ರಕರಣ ದಾಖಲಾಗಿತ್ತು.[ಕನ್ನಡ ಮಾತನಾಡದ ಟೆಕ್ಕಿ ಮೇಲೆ ಬೆಂಗಳೂರು ಪೊಲೀಸರ ಹಲ್ಲೆ?]

amnesti

ಬೆಂಗಳೂರು ಪೊಲೀಸರು ಎಬಿವಿಪಿ ವಿರುದ್ಧ ಗಲಭೆ, ಅಪಹರಣದ ಪ್ರಕರಣಗಳನ್ನು ದಾಖಲಿಸಿದ್ದಾರೆ. ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆಗೆ ಬಲವಂತವಾಗಿ ಅಪ್ರಾಪ್ತರನ್ನು ಕರೆದೊಯ್ದರು ಎಂದು ಕಾಲೇಜು ಪ್ರಾಂಶುಪಾಲರು ದೂರು ನೀಡಿರುವುದರಿಂದ ಐಪಿಸಿ 363ರ ಅಡಿ ಅಪಹರಣ ಪ್ರಕರಣ ದಾಖಲಾಗಿದೆ.

ರಾಜಾಜಿ ನಗರದಲ್ಲಿರುವ ಕಾಲೇಜಿಗೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು, ಪಿಯು ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಬಲವಂತವಾಗಿ ಕರೆದೊಯ್ದರು ಎಂದು ಆರೋಪಿಸಲಾಗಿದೆ. ಆ ವಿದ್ಯಾರ್ಥಿಗಳು ಅಪ್ರಾಪ್ತರು, ಅವರನ್ನು ಕರೆದೊಯ್ಯಬೇಡಿ ಎಂದು ಕೇಳಿಕೊಂಡರೂ ಯಾರೂ ಮಾತು ಕೇಳಿಸಿಕೊಳ್ಳಲಿಲ್ಲ ಎಂದು ಆರೋಪಿಸಿ ಪ್ರಾಂಶುಪಾಲರು ಹೇಳಿಕೆ ನೀಡಿದ್ದಾರೆ.[ರಾಜದ್ರೋಹದ ಆರೋಪ : ಸಿದ್ದರಾಮಯ್ಯಗೆ ವರದಿ ಸಲ್ಲಿಕೆ]

ಇದರ ಜೊತೆಗೆ ಬೆಂಗಳೂರಿನ ಜೆ.ಸಿ.ನಗರ ಪೊಲೀಸರು 22 ಮಂದಿ ವಿರುದ್ಧ ಗಲಭೆ ಪ್ರಕರಣ ದಾಖಲಿಸಿದ್ದಾರೆ. ಶುಕ್ರವಾರ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕಚೇರಿ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಪ್ರತಿಭಟನೆ ಹಿಂಸಾ ಸ್ವರೂಪ ಪಡೆದಿದ್ದರಿಂದ ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರವೂ ಎಬಿವಿಪಿ ಪ್ರತಿಭಟನೆ ಮುಂದುವರಿದಿದೆ.

English summary
Bengaluru police filed a series of cases against the ABVP ranging from kidnapping minors to rioting. The ABVP has been seeking the arrest of Amnesty International activists against whom sedition charges have been filed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X