ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಸತಿ ಪ್ರದೇಶ ವಾಣಿಜ್ಯೀಕರಣ, ಎಚ್ಎಎಲ್ ನಿವಾಸಿಗಳಿಂದ ಮತ್ತೆ ಪ್ರತಿಭಟನೆ

ವಾಣಿಜ್ಯೀಕರಣದಿಂದ ವಸತಿ ಪ್ರದೇಶಗಳ ಪರಿಸರ ಹಾಳಾಗುತ್ತಿರುವುದನ್ನು ವಿರೋಧಿಸಿ ಬೆಂಗಳೂರಿನ ಇಂದಿರಾನಗರದಲ್ಲಿರುವ ಎಚ್ಎಎಲ್ 2ನೇ ಹಂತದ ನಿವಾಸಿಗಳು ಮತ್ತೆ ಪ್ರತಿಭಟನೆ ನಡೆಸಲಿದ್ದಾರೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಪ್ರತಿಭಟನೆ ನಿಗದಿಯಾಗಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 18: ವಾಣಿಜ್ಯೀಕರಣದಿಂದ ವಸತಿ ಪ್ರದೇಶಗಳ ಪರಿಸರ ಹಾಳಾಗುತ್ತಿರುವುದನ್ನು ವಿರೋಧಿಸಿ ಬೆಂಗಳೂರಿನ ಇಂದಿರಾನಗರದಲ್ಲಿರುವ ಎಚ್ಎಎಲ್ 2ನೇ ಹಂತದ ನಿವಾಸಿಗಳು ಇದೀಗ ಮೂರನೇ ಬಾರಿಗೆ ಶನಿವಾರ ಪ್ರತಿಭಟನೆ ನಡೆಸಲಿದ್ದಾರೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಪ್ರತಿಭಟನೆ ನಿಗದಿಯಾಗಿದೆ.

Bengaluru: Once again Indiranagar residents set to take out protest march over deteriorating neighbourhood

ಒಂದು ಕಾಲದಲ್ಲಿ ವಸತಿ ಪ್ರದೇಶಗಳು ಹಸಿರು ಮತ್ತು ಪ್ರಶಾಂತವಾಗಿತ್ತು. ಆದರೆ ವಾಣಿಜ್ಯೀಕರಣ ಕಾಲಿಡುತ್ತಿದ್ದಂತೆ ಇಡೀ ಪ್ರದೇಶವೇ ಅಶಾಂತಿ ಮತ್ತು ಅಸುರಕ್ಷಿತ ವಲಯವಾಗಿ ಮಾರ್ಪಟ್ಟಿದೆ. ಪಾಲಿಕೆಯ ಅಸಮರ್ಪಕ ಕಸ ವಿಲೇವಾರಿ, ಚರಂಡಿ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯೂ ಜನರ ನೆಮ್ಮದಿ ಹಾಳುಗೆಡವಿದೆ. ಹಳೇ ಕಾಲದ ಮೋರಿಗಳಿಂದ ನೀರು ರಸ್ತೆಗೆ ಹರಿಯುತ್ತಿರುತ್ತದೆ. ಶುಚಿತ್ವ ಎನ್ನುವುದೇ ಮರೆಯಾಗಿ ಹೋಗಿದೆ ಎಂದು ಹೇಳಿ ಮಾರ್ಚ್ 4ರಂದು ಮೊದಲ ಬಾರಿಗೆ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು.

ಆದರೆ ಪ್ರತಿಭಟನೆ ನಡೆಸಿಯೂ ಸಮಸ್ಯೆ ಮಾತ್ರ ಬಗೆ ಹರಿದಿಲ್ಲ. ಹೀಗಾಗಿ ಕಳೆದ ಶನಿವಾರವೂ ಮತ್ತೆ ಪ್ರತಿಭಟನೆ ನಡೆಸಿದ್ದರು. ಎಷ್ಟೇ ಪ್ರತಿಭಟನೆ ನಡೆಸಿದರೂ ಬಿಬಿಎಂಪಿ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಈ ಶನಿವಾರವೂ ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂದಿರಾನಗರದ ಎರಡನೇ ಹಂತದ ನಾಗರೀಕರು ಮಾರ್ಚ್ 18 ರಂದು ಎಚ್ಎಎಲ್ ಎರಡನೇ ಹಂತದ 9ನೇ ಮುಖ್ಯರಸ್ತೆಯ 100 ಅಡಿ ರಸ್ತೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಪ್ರತಿಭಟನೆ ನಡೆಸಲಿದ್ದಾರೆ. [ವಸತಿ ಪ್ರದೇಶಗಳ ವಾಣಿಜ್ಯೀಕರಣದ ವಿರುದ್ಧ ಇಂದಿರಾನಗರ ನಿವಾಸಿಗಳಿಂದ ಪ್ರತಿಭಟನೆ]

English summary
The residents of HAL 2nd stage in Bengaluru's Indiranagar are set to take out a protest march on Saturday against deteriorating condition of the neighborhood due to commercialization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X