ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಕ್ರಾಂತಿ ಬೆಳಗ್ಗೆ ಬೆಂಗಳೂರನ್ನು ಬೆಚ್ಚಿಸಿದ ಬಾಂಬ್ ವದಂತಿ!

|
Google Oneindia Kannada News

ಬೆಂಗಳೂರು, ಜನವರಿ, 15: ಬೆಂಗಳೂರಿನ ಏರ್ ಪೋರ್ಟ್ ರಸ್ತೆಯ ಕಾವೇರಿ ಜಂಕ್ಷನ್‌ ಬಳಿ ಶುಕ್ರವಾರ ಬೆಳಗ್ಗೆ ನಿಗೂಢ ಬಾಕ್ಸ್‌ವೊಂದು ಪತ್ತೆಯಾಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಬಾಂಬ್ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಇದರಲ್ಲಿ ಯಾವ ಬಗೆಯ ಸ್ಫೊಟಕವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಏರ್‌ಪೋರ್ಟ್‌ ರಸ್ತೆಯಲ್ಲಿರುವ ಕಾವೇರಿ ಜಂಕ್ಷನ್‌ ಬಳಿ ಈ ಬಾಕ್ಸ್‌ ಪತ್ತೆಯಾಗಿದ್ದು ಬಾಕ್ಸ್‌ನಲ್ಲಿ ಅರೇಬಿಕ್‌ ಭಾಷೆಯ ಬರಹಗಳು ಪತ್ತೆಯಾಗಿರುವುದು ಆತಂಕ ಹೆಚ್ಚಿಸಿತ್ತು. ವಿಷಯ ತಿಳಿದ ಕೂಡಲೇ ವೈಯಾಲಿ ಕಾವಲ್‌ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದರು.[ಆಟಂ ಬಾಂಬಿಗಿಂತ ಹೈಡ್ರೋಜನ್ ಬಾಂಬ್ ಭಯಂಕರ ಏಕೆ?]

Bengaluru on alert after suspicious object found near theatre

ಸ್ಥಳೀಯರ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ್ದೇವೆ. ಇದರಲ್ಲಿ ಇರುವುದು ಲಿಕ್ವಿಡ್ ಮಾತ್ರ,. ಬಾಂಬ್ ಇಲ್ಲ. ನಗರದ ಜನ ಆತಂಕ ಪಡಬೇಕಾಗಿಲ್ಲ ಎಂದು ಪೊಲೀಸ್ ಆಯುಕ್ತ ಮೇಘರಿಕ್ ತಿಳಿಸಿದ್ದಾರೆ.

ಸುರಕ್ಷತೆಯ ದೃಷ್ಟಿಯಿಂದ ಸುತ್ತಮುತ್ತಲು ಸಂಚಾರ ಬಂದ್ ಮಾಡಲಾಗಿತ್ತು. ಪೊಲೀಸರು ತಕ್ಷಣ ಮರಳು ಮೂಟೆಗಳನ್ನು ತಂದು ಮುಂಜಾಗೃತಾ ಕ್ರಮ ತೆಗೆದುಕೊಂಡಿದ್ದರು.

English summary
The bomb squad has found detonaters in the tiffin box at Sankey tank bengaluru. Sources say that the device was not connected. After the public alerted the police the bonb squad was rushed to the spot. The bomb squad found wires and a detonator in a tiffin box but the same had not been connected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X