ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಉತ್ತರ-ದಕ್ಷಿಣ: ನಮ್ಮ ಮೆಟ್ರೋ 45 ನಿಮಿಷದ ಪ್ರಯಾಣ

|
Google Oneindia Kannada News

ಬೆಂಗಳೂರು, ಜೂನ್ 6: ಬೆಂಗಳೂರಿಗರ ಬಹುನಿರೀಕ್ಷಿತ ಉತ್ತರ ದಕ್ಷಿಣ ನಮ್ಮ ಮೆಟ್ರೊ ಗ್ರೀನ್ ಲೈನ್ ಸಂಚಾರಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇನ್ನೆರಡು ವಾರದಲ್ಲಿ ಈ ಹಾದಿ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂದು ಬಿಎಂಆರ್ ಸಿ ಎಲ್ (ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಶನ್ ಲಿಮಿಟೆಡ್) ಹೇಳಿದೆ. ಬೆಂಗಳೂರಿನ ಟ್ರಾಫಿಕ್ ನಿಂದ ಬೇಸತ್ತ ಜನರು ಈ ಮೆಟ್ರೊ ಆರಂಭವಾಗುವುದನ್ನೇ ಕಾಯುತ್ತಿದ್ದಾರೆ. 3-5 ಲಕ್ಷ ಜನ ಈ ಗ್ರೀನ್ ಲೈನ್ ಉಪಯೋಗ ಪಡೆಯಲಿದ್ದಾರೆಂದು ಅಂದಾಜಿಸಲಾಗಿದೆ.

ಇನ್ನೇನು ಸಂಚಾರಕ್ಕೆ ಮುಕ್ತವಾಗಲಿರುವ ನಾಗಸಂದ್ರದಿಂದ ಕನಕಪುರ ರಸ್ತೆಯ ಯಲಚೇನಹಳ್ಳಿ ವರೆಗಿನ 24.22 ಕಿ.ಮೀ. ಮಾರ್ಗವನ್ನು ಕೇವಲ 45 ನಿಮಿಷಗಳಲ್ಲಿ ತಲುಪಬಹುದಾಗಿದೆ. ಈ ಮಾರ್ಗದಲ್ಲಿ 24 ಮೆಟ್ರೋ ನಿಲ್ದಾಣಗಳಿದ್ದರೂ ಇಷ್ಟು ಕಡಿಮೆ ಅವಧಿಯಲ್ಲಿ ತಲುಪಬಹುದು ಎಂಬುದು ನಮ್ಮ ಮೆಟ್ರೋ ಹೆಗ್ಗಳಿಕೆ.[ನಮ್ಮ ಮೆಟ್ರೋ ಗ್ರೀನ್ ಲೈನ್ ಸಂಚಾರ ಮತ್ತೆರಡು ವಾರ ವಿಳಂಬ!]

Bengaluru namma metro will reach Nagasandra to Yelachenahalli , the 24.22 kms in 45 minutes

ನಮ್ಮ ಮೆಟ್ರೊವನ್ನು ಗಂಟೆಗೆ ಗರಿಷ್ಠ 80 ಕಿ.ಮೀ. ವೇಗದಲ್ಲಿ ಓಡಿಸಬಹುದಾದರೂ, ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಕನಿಷ್ಠ ಒಂದು ಕಿ.ಮೀ. ಅಂತರವಿದ್ದರೆ ಮಾತ್ರ ಈ ವೇಗದಲ್ಲಿ ಮೆಟ್ರೋ ಟ್ರೇನ್ ಅನ್ನು ಓಡಿಸಬಹುದಾಗಿದೆ ಎಂದು ಬಿಎಂಆರ್ ಸಿಎಲ್ ವಿವರಿಸಿದೆ.

English summary
The Yet to be luanched Bengaluru Green line metro will reach Nagasandra to Yelachenahalli , the 24.22 kms distance in 45 minutes, The Bengaluru Metro Rail Corporation Limited(BMRCL) officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X