ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಆರ್‌ಟಿಒ ಇನ್ಸ್‌ಪೆಕ್ಟರ್ ಮನೆ ಮೇಲೆ ಲೋಕಾಯುಕ್ತ ದಾಳಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 28 : ಬೆಂಗಳೂರಿನಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಮತ್ತು ಆರ್‌ಟಿಒ ಇನ್ಸ್‌ಪೆಕ್ಟರ್ ಮನೆ ಮೇಲೆ ದಾಳಿ ನಡೆದಿದ್ದು, 1.86 ಕೋಟಿ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ಶೇಷಾದ್ರಿಪುರಂ ಮತ್ತು ಚಿಕ್ಕಲಸಂದ್ರದಲ್ಲಿ ಸೋಮವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಆಸ್ತಿಗಳಿಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿದೆ. [ಡಿಐಜಿಯಾಗಿ ಬಡ್ತಿ ಪಡೆದ ಎಸ್ಪಿ ಸೋನಿಯಾ ನಾರಂಗ್]

lokayukta

ಶೇಷಾದ್ರಿಪುರಂನಲ್ಲಿರುವ ಅಬಕಾರಿ ಇಲಾಖೆಯ ಉಪ ಅಧೀಕ್ಷಕ ವೈ.ಭರತೇಶ್ ನಿವಾಸ ಮತ್ತು ಜಯನಗರದ ಆರ್‌ಟಿಒ ಇನ್ಸ್‌ಪೆಕ್ಟರ್ ಎಂ.ಜಯರಾಂ ಅವರ ಚಿಕ್ಕಲಸಂದ್ರದ ಬಳಿ ಇರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಭರತೇಶ್ ಅವರ ಬಳಿ 86 ಲಕ್ಷ ರೂ. ಮತ್ತು ಜಯರಾಂ ಅವರ ಬಳಿ 1 ಕೋಟಿ ರೂ. ಅಕ್ರಮ ಆಸ್ತಿ ಇರುವುದು ಪತ್ತೆಯಾಗಿದೆ.

ವೈ.ಭರತೇಶ್ : ಅಬಕಾರಿ ಇಲಾಖೆಯ ಉಪ ಅಧೀಕ್ಷಕ ವೈ.ಭರತೇಶ್ ಅವರು 65.99 ಲಕ್ಷ ರೂ. ಸ್ಥಿರಾಸ್ತಿ, 60.57 ಲಕ್ಷ ರೂ ಚರಾಸ್ತಿ ಹೊಂದಿದ್ದಾರೆ. ಖರ್ಚು 40.55 ಲಕ್ಷ ಆದಾಯ 83.69 ಲಕ್ಷ ರೂ., ಅಕ್ರಮ ಆಸ್ತಿ 86 ಲಕ್ಷ ರೂ.ಗಳು.

ಜಯನಗರದ ಆರ್‌ಟಿಒ ಇನ್ಸ್‌ಪೆಕ್ಟರ್ ಎಂ.ಜಯರಾಂ ಅವರ ಒಟ್ಟು ಆಸ್ತಿ 1.5 ಕೋಟಿ. ಒಟ್ಟು ಖರ್ಚು 22 ಲಕ್ಷ, ಆದಾಯ
43 ಲಕ್ಷ ರೂ.ಗಳು. ಇಬ್ಬರು ಅಧಿಕಾರಿಗಳ ಮನೆಯಲ್ಲಿ ಸಿಕ್ಕ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

English summary
Bengaluru Lokayukta police raided the residences of two officers at Chikkalasandra and Seshadripuram on Monday, December 28th morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X