ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕಾರಲ್ಲಿ ಓಡಾಡೋದೂ ಅಪಾಯ!

ಕಾರಿನಲ್ಲಿ ಕುಳಿತಿದ್ದ ಹುಡುಗಿಯೊಂದಿಗೆ ಇಬ್ಬರು ದುಷ್ಕರ್ಮಿಗಳು ಅಸಭ್ಯವಾಗಿ ಮಾತನಾಡಿದ್ದಲ್ಲದೆ ಆಕೆ ಕಾರಿನಿಂದ ಇಳಿಯುತ್ತಿದ್ದಂತೆಯೇ ಆಕೆಯ ಬಟ್ಟೆಯನ್ನು ಹರಿದು ದೌರ್ಜನ್ಯ ನಡೆಸಿದ ಘಟನೆ ಬೆಂಗಳೂರಿನಲ್ಲಿ ಹಾಡುಹಗಲಲ್ಲೇ ನಡೆದಿದೆ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮಾರ್ಚ್ 23: ಬೆಂಗಳೂರಿನ ಚಿಕ್ಕಜಾಲ ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರವಾಹನವನ್ನು ತಡೆದು ನಿಲ್ಲಿಸಿ ಯುವತಿಯ ಮೇಲೆ ದೌರ್ಜನ್ಯ ನಡೆಸಿದ ಘಟನೆ ಮಾಸುವ ಮೊದಲೇ ಇಲ್ಲಿನ ಕುಮಾರಸ್ವಾಮಿ ಲೇ ಔಟ್ ನಲ್ಲಿ ಇಂಥದೇ ಇನ್ನೊಂದು ಘಟನೆ ನಡೆದಿದೆ.

ಕಾರಿನಲ್ಲಿ ಕುಳಿತಿದ್ದ ಹುಡುಗಿಯೊಂದಿಗೆ ಇಬ್ಬರು ದುಷ್ಕರ್ಮಿಗಳು ಅಸಭ್ಯವಾಗಿ ಮಾತನಾಡಿದ್ದಲ್ಲದೆ ಆಕೆ ಕಾರಿನಿಂದ ಇಳಿಯುತ್ತಿದ್ದಂತೆಯೇ ಆಕೆಯ ಬಟ್ಟೆಯನ್ನು ಹರಿದು ದೌರ್ಜನ್ಯ ನಡೆಸಿದ ಘಟನೆ ಹಾಡುಹಗಲಲ್ಲೇ ನಡೆದಿದೆ. ಮಾರ್ಚ್ 19 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.[ಮತ್ತೆ ಬೆಂಗಳೂರಲ್ಲಿ ಯುವತಿಗೆ ಲೈಂಗಿಕ ಕಿರುಕುಳ?!]

Bengaluru is unsafe again!

ಕಾರಿನಿಂದ ಇಳಿದ ಯುವತಿಯ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ, ಆಕೆಯ ಕಾರಿನ ಗಾಜುಗಳನ್ನು ಪುಡಿ ಮಾಡಿ, ಆಕೆಯ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.[ಲೈಂಗಿಕ ಕಿರುಕುಳ, ಬೆಂಗ್ಳೂರು ಮಹಾರಾಣಿ ಕಾಲೇಜ್ ಪ್ರಾಧ್ಯಾಪಕ ಅಮಾನತು]

ರಸ್ತೆಯಲ್ಲಿ ನಡೆದು ಹೋಗುವ ಮಹಿಳೆಯರಷ್ಟೇ ಅಲ್ಲ, ಬೆಂಗಳೂರಿನಲ್ಲಿ ದ್ವಿಚಕ್ರವಾಹನ, ಕಾರಿನಲ್ಲಿ ಓಡಾಡುವ ಯುವತಿಯರೂ ಸೇಫ್ ಅಲ್ಲ ಅನ್ನೋದು ಇದರಿಂದ ದೃಢವಾಗಿದೆ.[ವಿದ್ಯಾರ್ಥಿನಿಯರ ಒಳ ಉಡುಪು ಕದಿಯುವ ಯಾರು ಈ ವಿಕೃತ ಕಾಮಿ?]

English summary
Two men misbehaved with a lady in Kumaraswamy Layout, Bengaluru. They tore her clothes and escaped with her mobile. Also damaged her car. Case has been registerd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X