ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೊಮ್ಮನಹಳ್ಳಿ: ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಏಪ್ರಿಲ್, 18: ಕೇಂದ್ರ ಸರ್ಕಾರದ ಹೊಸ ಪಿಎಫ್ ನೀತಿ ಖಂಡಿಸಿ ಗಾರ್ಮೆಂಟ್ಸ್ ಕಾರ್ಮಿಕರು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಲಾಠಿ ಚಾರ್ಜ್ ಮಾಡಲಾಗಿದೆ.

ಘರ್ಷಣೆ ವೇಳೆ ಅನೇಕ ಪೊಲೀಸರಿಗೂ ಗಂಭೀರ ಗಾಯಗಳಾಗಿದೆ. ಇಬ್ಬರು ಪೊಲೀಸರ ಸ್ಥಿತಿ ಗಂಭಿರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗದೆ.['ಗಾರ್ಮೆಂಟ್ ಫ್ಯಾಕ್ಟರಿ ಮಹಿಳೆಯರಿಗೆ ರಿಯಾಯಿತಿ ಬಸ್ ಪಾಸ್']

bengaluru

ಶಶಿ ಎಕ್ಸಪೋರ್ಟ್, ಕೆ. ಮೋಹನ್ ಆಂಡ್ ಕೋ,ಜಾಕಿ ಘಟಕ ಮತ್ತು ಇತರೆ ಚಿಕ್ಕ ಪುಟ್ಟ ಘಟಕದ ನೌಕರರು ಪ್ರತಿಭಟನೆ ಆರಂಭಿಸಿದ್ದರು.

ಮೊದಲು ಶಾಂತರೀತಿಯಿಂದ ನಡೆಯುತ್ತಿದ್ದ ಪ್ರತಿಭಟನೆ ಏಕಾಏಕಿ ಹಿಂಸಾರೂಪ ಪಡೆದುಕೊಂಡಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ.

ಸದಾ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದ ಜಾಗದಲ್ಲಿ ಇಂದು ಪ್ರತಿಭಟನೆಯ ಪರಿಣಾಮ ಮತ್ತಷ್ಟು ಸಂಕಷ್ಟ ಎದುರಿಸುವಂತಾಯಿತು. ಸುಮಾರು 20 ಕಿಲೋ ಮೀಟರ್ ದೂರ ಟ್ರಾಫಿಕ್ ಜಾಮ್ ಆಗಿದೆ. ಸದ್ಯ ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಣಕ್ಕೆ ತಂದಿದ್ದು ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಪ್ರಯತ್ನ ಪಡಲಾಗುತ್ತಿದೆ.[ಜಯನಗರದಲ್ಲಿದೆ ಶಿವನ ಪಾದ ಸೇರಲು ಶಾರ್ಟ್‌ಕಟ್!]

ಈ ವೇಳೆ ಕೆಲವು ದುಷ್ಕರ್ಮಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಪೊಲೀಸರು ಸೇರಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಘರ್ಷಣೆಯಲ್ಲಿ 5 ಪೊಲೀಸ್ ವಾಹನ ಸೇರಿದಂತೆ ಹಲವು ವಾಹನಗಳು ಜಖಂಗೊಂಡಿವೆ.

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರು, ಸದ್ಯ ಬೊಮ್ಮನಹಳ್ಳಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಯಾಕಾಗಿ ಪ್ರತಿಭಟನೆ?
ಕೇಂದ್ರ ಸರ್ಕಾರ ಎಂಪ್ಲಾಯ್ ಪ್ರಾವಿಡೆಂಟ್ ಫಂಡ್ ನೀತಿಯಲ್ಲಿ ಮಹತ್ತರ ಬದಲಾವಣೆ ಮಾಡಿದೆ. 1952 ರ ಪಿಎಫ್ ಶಾಸನಕ್ಕೆ ತಿದ್ದುಪಡಿ ಮಾಡಲಾಗಿದೆ.

ಒಂದು ವೇಳೆ ಕಾರ್ಮಿಕರೊಬ್ಬರು ತಮ್ಮ ಪಿಎಫ್ ಹಣವನ್ನು ವಿತ್ ಡ್ರಾ ಮಾಡಲು ಮುಂದಾದರೆ ಅವರ ಖಾತೆಯಿಂದ ಮುರಿದುಕೊಂಡ ಹಣ ಮಾತ್ರ ಪಡೆದುಕೊಳ್ಳಲು ಸಾಧ್ಯ. ಕಂಪನಿಯ ಕಾಂಟ್ರಿಬ್ಯುಶನ್ ಅನ್ನು ಪಡೆದುಕೊಳ್ಳಲು ವ್ಯಕ್ತಿ 58 ವರ್ಷಗಳವರೆಗೆ ಕಾಯಬೇಕು. ಇದನ್ನೇ ವಿರೋಧಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

English summary
Nearly 10,000 garment workers came out to the streets on Monday at Bommanahalli and Maddur to protest against the amendment to the Employees Provident Funds and Miscellaneous Provisions Act, 1952. While the Hosur Road was blocked by garment workers of five factories, including Shahi Exports Pvt. Ltd., K. Mohan and Co Exports Pvt. Ltd. and Jockey, in Bommnaahalli, workers of Shahi Exports Pvt. Ltd. in Jajjalagere Industrial Area, Maddur taluk, blocked the busy Bengaluru-Mysuru Highway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X