ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : 4 ನೂತನ ರೈಲುಗಳ ವೇಳಾಪಟ್ಟಿ

|
Google Oneindia Kannada News

ಬೆಂಗಳೂರು, ಜ.30 : ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ನೂತನ ರೈಲುಗಳ ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಬಾಕಿ ಇರುವ ರೈಲು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವಿನಿಂದ ಪೂರ್ಣಗೊಳಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಬೆಂಗಳೂರು ನಗರದ ರೈಲು ನಿಲ್ದಾಣದಲ್ಲಿ ಗುರುವಾರ ಯಶವಂತಪುರ-ಕಾಟ್ರಾ, ಪಟ್ನಾ-ಬೆಂಗಳೂರು, ಕಾಮಾಕ್ಯ-ಬೆಂಗಳೂರು ಮತ್ತು ಟಾಟಾ ನಗರ-ಯಶವಂತಪುರ ರೈಲುಗಳಿಗೆ ರೈಲ್ವೆ ಸಚಿವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ಪಿ.ಸಿ.ಮೋಹನ್ ಮುಂತಾದವರು ಉಪಸ್ಥಿತರಿದ್ದರು.[ವೈಷ್ಣೋದೇವಿ ದರ್ಶನಕ್ಕೆ ಬೆಂಗಳೂರಿನಿಂದ ರೈಲು]

Suresh Prabhu

ರೈಲುಗಳ ವೇಳಾಪಟ್ಟಿ ಇಲ್ಲಿದೆ ನೋಡಿ

ವೈಷ್ಣೋದೇವಿ ದರ್ಶನಕ್ಕೆ ರೈಲಿನಲ್ಲಿ ಹೋಗಿ : ವೈಷ್ಣೋದೇವಿ ದರ್ಶನಕ್ಕೆ ತೆರಳುವವರು ಇನ್ನು ಮುಂದೆ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ. ಯಶವಂತಪುರ -ಕಾಟ್ರಾ ರೈಲು ಸೇವೆಗೆ ಚಾಲನೆ ಸಿಕ್ಕಿದೆ. ಫೆ.7ರಿಂದ ಈ ರೈಲು ವಾರಕ್ಕೊಮ್ಮೆ ಸಂಚರಿಸಲಿದೆ. [ವಿಜಯವಾಡ-ಹುಬ್ಬಳ್ಳಿ ನೂತನ ರೈಲಿನ ವೇಳಾಪಟ್ಟಿ]

ಪ್ರತಿ ಶನಿವಾರ ಬೆಳಗ್ಗೆ 11.30ಕ್ಕೆ ಯಶವಂತಪುರದಿಂದ ಹೊರಡುವ ರೈಲು ಬಳ್ಳಾರಿ, ಸಿಕಂದರಾಬಾದ್, ನಾಗ್ಪುರ, ಝಾನ್ಸಿ ಮತ್ತು ನವದೆಹಲಿ ಮೂಲಕ ಜಮ್ಮು ಮತ್ತು ಕಾಶ್ಮೀರದ ಕಾಟ್ರಾವನ್ನು ಸೋಮವಾರ ಸಂಜೆ 7.45ಕ್ಕೆ ತಲುಪುತ್ತದೆ. ಪ್ರತಿ ಭಾನುವಾರ ಬೆಳಗ್ಗೆ 6.30ಕ್ಕೆ ಕಾಟ್ರಾದಿಂದ ಹೊರಡುವ ರೈಲು ಗುರುವಾರ ಮಧ್ಯಾಹ್ನ 3 ಗಂಟೆಗೆ ಯಶವಂತಪುರಕ್ಕೆ ತಲುಪಲಿದೆ.

ಪಾಟ್ನಾ-ಬೆಂಗಳೂರು ರೈಲು : ಪಾಟ್ನಾ-ಬೆಂಗಳೂರು ರೈಲು ಪ್ರತಿ ಗುರುವಾರ ರಾತ್ರಿ 11.30ಕ್ಕೆ ಪಾಟ್ನಾದಿಂದ ಹೊರಟು ಶನಿವಾರ ಸಂಜೆ 6.55ಕ್ಕೆ ಕಂಟೋನ್ಮೆಂಟ್ ರೈಲು ನಿಲ್ದಾಣ ತಲುಪಲಿದೆ. ಪ್ರತಿ ಭಾನುವಾರ ಮಧ್ಯಾಹ್ನ 3.30ಕ್ಕೆ ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಡುವ ರೈಲು ಮಂಗಳವಾರ ಬೆಳಗ್ಗೆ 9.45ಕ್ಕೆ ಬಿಹಾರದ ಪಾಟ್ನಾ ತಲುಪಲಿದೆ. ಚೆನ್ನೈ, ವಿಜಯವಾಡ, ನಾಗ್ಪುರ, ಜಬಲ್‌ಪುರ ಮಾರ್ಗವಾಗಿ ರೈಲು ಸಂಚರಿಸುತ್ತದೆ.

ಕಾಮಾಕ್ಯ -ಬೆಂಗಳೂರು ರೈಲು : ಪ್ರತಿ ಮಂಗಳವಾರ ರಾತ್ರಿ 8.30ಕ್ಕೆ ಅಸ್ಸಾಂನ ಕಾಮಾಕ್ಯದಿಂದ ಹೊರಡುವ ರೈಲು ಗುರುವಾರ ರಾತ್ರಿ 9.15ಕ್ಕೆ ಕಂಟೋನ್ಮೆಂಟ್ ನಿಲ್ದಾಣ ತಲುಪಲಿದೆ. ಪ್ರತಿ ಶುಕ್ರವಾರ ಬೆಳಗ್ಗೆ 10.15ಕ್ಕೆ ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಡುವ ರೈಲು ಭಾನುವಾರ ಬೆಳಗ್ಗೆ 11.25ಕ್ಕೆ ಕಾಮಾಕ್ಯ ತಲುಪುತ್ತದೆ.

ಟಾಟಾನಗರ-ಯಶವಂತಪುರ ರೈಲು : ಪ್ರತಿ ಗುರುವಾರ ಸಂಜೆ 6.35ಕ್ಕೆ ಜಾರ್ಖಂಡ್‌ನ ಟಾಟಾ ನಗರದಿಂದ ಹೊರಡುವ ರೈಲು ಶನಿವಾರ ಸಂಜೆ 6.30ಕ್ಕೆ ಯಶವಂತಪುರ ನಿಲ್ದಾಣ ತಲುಪುತ್ತದೆ. ಪ್ರತಿ ಭಾನುವಾರ ಬೆಳಗ್ಗೆ 10ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಅರಸೀಕೆರೆ, ರಾಯದುರ್ಗ, ಬಳ್ಳಾರಿ, ರಾಯಚೂರು, ಸಿಕಂದರಾಬಾದ್, ವಿಜಯವಾಡ ಮಾರ್ಗವಾಗಿ ಮಂಗಳವಾರ ಮಧ್ಯಾಹ್ನ 12.35ಕ್ಕೆ ಟಾಟಾನಗರ ತಲುಪಲಿದೆ. [ಪಿಟಿಐ ಚಿತ್ರ]

English summary
Railway Minister Suresh Prabhu flagged off for the Four new trains in Bengaluru city station on Thursday. Here is the schedule of new trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X