ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗರ್ಭಿಣಿ ಮಹಿಳೆಗೆ ಮಿಡಿದ ಪೊಲೀಸ್ ಹೃದಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ

ಗರ್ಭಿಣಿ ಮಹಿಳೆಯ ಗಾಡಿ ಹಾಳಾಗಿದ್ದನ್ನು ರಾತ್ರಿ ಪಾಳಿಯಲ್ಲಿದ್ದ ಅರಸಯ್ಯ ನೋಡಿದ್ದಾರೆ. ನೋಡಿದವರೇ ತಮ್ಮ ವಾಹನದಲ್ಲಿ ಮಹಿಳೆ ಮತ್ತು ಮಹಿಳೆಯ ಪತಿಯನ್ನು ಕೂರಿಸಿಕೊಂಡು ರಾಜಾಜಿನಗರದ ಅವರ ಮನೆ ಬಳಿ ಬಿಟ್ಟು ಬಂದಿದ್ದಾರೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 8: ಆಕೆ ಹೆಸರು ಭುವನ ಕೆ. ಡಿ; ಗರ್ಭಿಣಿ. ಕೆಲವು ದಿನದ ಹಿಂದೆ ಆಕೆ ರಾತ್ರಿ ತನ್ನ ಗಂಡನ ಜತೆ ರಾಜಾಜಿನಗರ ಮನೆ ಕಡೆ ಹೊರಟಿದ್ದರು. ಟ್ರಿನಿಟಿ ವೃತ್ತದ ಬಳಿ ಆಕೆಯ ಕಾರು ಕೈಕೊಟ್ಟಿತು. ಇದರಿಂದ ಟ್ರಾಫಿಕ್ ಜಾಮ್ ಕೂಡಾ ಉಂಟಾಯಿತು. ಆ ಸಂದರ್ಭ ಆಕೆಯ ಸಹಾಯಕ್ಕೆ ಬಂದಿದ್ದು ಹಲಸೂರು ಟ್ರಾಫಿಕ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಅರಸಯ್ಯ.

ಗರ್ಭಿಣಿ ಮಹಿಳೆಯ ಕಾರು ಹಾಳಾಗಿದ್ದನ್ನು ರಾತ್ರಿ ಪಾಳಿಯಲ್ಲಿದ್ದ ಅರಸಯ್ಯ ನೋಡಿದ್ದಾರೆ. ನೋಡಿದವರೇ ಆಕೆಯ ಕಾರನ್ನು ಟ್ರಾಫಿಕ್ ಮಧ್ಯದಿಂದ ತೆಗೆಸಿದ್ದಾರೆ. ನಂತರ ತಮ್ಮ ವಾಹನದಲ್ಲಿ ಮಹಿಳೆ ಮತ್ತು ಮಹಿಳೆಯ ಪತಿಯನ್ನು ಕೂರಿಸಿಕೊಂಡು ರಾಜಾಜಿನಗರದ ಅವರ ಮನೆ ಬಳಿ ಬಿಟ್ಟು ಬಂದಿದ್ದಾರೆ. ಈ ಮೂಲಕ ಮಹಿಳೆಗೆ ರಾತ್ರಿ ಹೊತ್ತು ನೆರವಾಗಿದ್ದಾರೆ.[ಬಸ್ಸು ಕೆಟ್ಟು ನಿಂತಾಗ ಆಪದ್ಬಾಂಧವನಾದ ಟ್ರಾಫಿಕ್ ಪೊಲೀಸ್!]

Bengaluru: DGP Apreciated the work of ASI, who helped a pregnant woman

ಪೊಲೀಸ್ ಇನ್ಸ್ ಪೆಕ್ಟರ್ ಸಹಾಯವನ್ನು ಕೊಂಡಾಡಿರುವ ಮಹಿಳೆ "ಬೆಂಗಳೂರು ಮಹಿಳೆಯರಿಗೆ ಸುರಕ್ಷಿತ ನಗರ ಮತ್ತು ಪೊಲೀಸರು ಜನರ ಜತೆ ಸ್ನೇಹದಿಂದ ಇದ್ದಾರೆ," ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.[ಶೂಟೌಟ್ ಕೇಸ್ : 'ಅಗ್ನಿ' ಶ್ರೀಧರ್ ಆರೋಪಿ ನಂ. 8]

Bengaluru: DGP Apreciated the work of ASI, who helped a pregnant woman

ಮಹಿಳೆಗೆ ರಾತ್ರಿ ಹೊತ್ತು ಸಹಾಯ ಮಾಡಿ ಮಾನವೀಯತೆ ಮೆರೆದ ಎಎಸ್ಐ ಅರಸಯ್ಯರಿಗೆ ಈಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಅರಸಯ್ಯ ಅವರ ಕೆಲಸವನ್ನು ಮೆಚ್ಚಿಕೊಂಡಿರುವ ಡಿಜಿಪಿ ರೂಪಕ್ ಕುಮಾರ್ ದತ್ತಾ ಪ್ರಶಂಸಾ ಪತ್ರ ನೀಡಿದ್ದಾರೆ. ನಿಮ್ಮ ಒಳ್ಳೆಯ ಕೆಲಸವನ್ನು ನಾನು ಮೆಚ್ಚಿಕೊಂಡಿದ್ದೇನೆ. ಎಎಸ್ಐ ಅವರ ಕೆಲಸ ಪೊಲೀಸ್ ಪಡೆಗಳಿಗೆ ಹೆಚ್ಚಿನ ಉತ್ಸಾಹ ನೀಡಿದೆ ಎಂದು ಗುಣಗಾನ ಮಾಡಿದ್ದಾರೆ.

ಮಹಿಳೆ ಪೊಲೀಸ್ ಅಧಿಕಾರಿಗೆ ಫೇಸ್ ಬುಕ್ ನಲ್ಲಿ ಧನ್ಯವಾದ ಹೇಳಿದ್ದು ಅದರ ಪುರ್ಣ ಪಾಠ ಇಲ್ಲಿದೆ..

English summary
Director General and Inspector General of Police Rupak Kumar Dutta has sent an appreciation letter to Arasaiah, Assistant Sub Inspector of Halasoor police station, Bengaluru, who helped a pregnant woman and her husband, who stranded on road at odd hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X