ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಸಾಧ್ಯ! ಬೆಂಗಳೂರಿನಿಂದ ಚೆನ್ನೈಗೆ 30 ನಿಮಿಷ ಪ್ರಯಾಣ

ಬೆಂಗಳೂರಿನಿಂದ ಚೆನ್ನೈಗೆ 30 ನಿಮಿಷ ಪ್ರಯಾಣ ಸಾಧ್ಯ ಎಂದು ಯು.ಎಸ್ ಮೂಲದ ಸಂಸ್ಥೆಯೊಂದು ಪ್ರಸ್ತಾವನೆ ಹೊತ್ತು ತಂದಿದೆ. ಬುಲೆಟ್ ರೈಲಿಗಿಂತಲೂ ವೇಗವಾಗಿ, ಅತ್ಯಂತ ಕಡಿಮೆ ವೆಚ್ಚದ ಯೋಜನೆ ಇದಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 17: ಬೆಂಗಳೂರಿನಿಂದ ಚೆನ್ನೈಗೆ 30 ನಿಮಿಷ ಪ್ರಯಾಣ ಸಾಧ್ಯ ಎಂದು ಯು ಎಸ್ ಮೂಲದ ಸಂಸ್ಥೆಯೊಂದು ಪ್ರಸ್ತಾವನೆ ಹೊತ್ತು ತಂದಿದೆ. ಬುಲೆಟ್ ರೈಲಿಗಿಂತಲೂ ವೇಗವಾಗಿ, ಅತ್ಯಂತ ಕಡಿಮೆ ವೆಚ್ಚದ ಯೋಜನೆ ಇದಾಗಿದ್ದು, ಯೋಜನೆ ಕುರಿತು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ.

ಭಾರತದಲ್ಲಿ ಬಹುಕೋಟಿ ರೂ. ಮೊತ್ತದ ಬುಲೆಟ್ ರೈಲು ಯೋಜನೆ ಬಗ್ಗೆ ಅಪಸ್ವರ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಹೊಸ ಯೋಜನೆಗೆ ಮೋದಿ ಸರ್ಕಾರ ಮಣೆ ಹಾಕಿದರೂ ಅಚ್ಚರಿಪಡಬೇಕಾಗಿಲ್ಲ.

Bengaluru to Chennai in just 30 minutes via Hyperloop One

ಹೈಪರ್​ಲೋಪ್ ಟ್ರಾನ್ಸ್​ಪೋರ್ಟ್ ಸಿಸ್ಟಮ್ (ಎಚ್​ಟಿಎಸ್) ಸಂಸ್ಥೆ ಈ ರೈಲನ್ನು ಅಭಿವೃದ್ಧಿ ಪಡಿಸುತ್ತಿದೆ. ಇದು ಗಂಟೆಗೆ 1,216 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಉದಾಹರಣೆಗೆ ಬೆಂಗಳೂರು ಹಾಗೂ ಚೆನ್ನೈ ನಡುವಿನ 345 ಕಿ.ಮೀ. ದೂರವನ್ನು ಈ ರೈಲು 30 ನಿಮಿಷದಲ್ಲಿ ಕ್ರಮಿಸಲಿದೆ ಎಂದು ಈ ಸೂಪರ್ ಸಾನಿಕ್ ರೈಲಿನ ನಿರ್ಮಾಣಗಾರ ಎಲಾನ್ ಹೇಳಿದ್ದಾರೆ.

ಇಂಧನ ರಹಿತ ರೈಲು: ಸೂಪರ್ ಸಾನಿಕ್ ರೈಲು ಹಳಿಗಳ ಮೇಲೆ ಚಲಿಸುವುದಿಲ್ಲ. ಕಾಂಕ್ರಿಟ್ ಪಿಲ್ಲರ್ ನಿರ್ಮಿಸಿ, ಅದರ ಮೇಲೆ ಕೊಳವೆಯ ಮಾದರಿಯಲ್ಲಿ ಮಾರ್ಗ ನಿರ್ವಿುಸಲಾಗುತ್ತದೆ. ಇದು ಅರೆನಿರ್ವಾತ ಪ್ರದೇಶವಾಗಿರಲಿದ್ದು, ಒತ್ತಡದ ಬಲದಿಂದ ರೈಲು ಸೂಪರ್ ಸಾನಿಕ್ ವೇಗ ಪಡೆಯಲಿದೆ.

ಟ್ಯೂಬ್ ರೈಲು: ಕೊಳವೆ ರೀತಿಯ ಮಾರ್ಗಗಳ ಮೇಲೆ ಸೋಲಾರ್ ಪ್ಯಾನಲ್​ಗಳನ್ನು ಅಳವಡಿಸಿ, ಇದರಿಂದ ಉತ್ಪಾದಿಸಲಾದ ವಿದ್ಯುತ್​ನಿಂದ ರೈಲು ಓಡುತ್ತದೆ. ರೈಲಿನ ತುದಿಯಲ್ಲಿ ಲೈನರ್ ಮೋಟಾರ್ ಅಳವಡಿಸಲಾಗುತ್ತಿದ್ದು, ಇದು ಇಂಜಿನ್ ರೀತಿಯಲ್ಲಿ ಕೆಲಸ ಮಾಡಲಿದೆ. ಈ ರೈಲಿಗೆ ಇಂಧನ ಅಗತ್ಯವಿಲ್ಲ, ಹೀಗಾಗಿ ಇಂಧನ ಉಳಿತಾಯ ಸಾಧ್ಯ.

English summary
Bengaluru to Chennai in just 30 minutes is possible sayd A US-based company Hyperloop One brainchild of Elon Musk. Using Hyperloop pod or train can be able to travel at a speed of 1,200 kmph as it floats in a vacuum inside the tunnel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X