ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬುರ್ಖಾ ಧರಿಸಿ ಬಂದವಳು ಗಂಡು ಮಗು ಹೊತ್ತೊಯ್ದಳು!

|
Google Oneindia Kannada News

ಬೆಂಗಳೂರು, ಅಕ್ಟೋಬರ್. 05: ಮಕ್ಕಳ ಕಳ್ಳರು ಪ್ರತಿ ದಿನ ಹೊಸ ಹೊಸ ತಂತ್ರ ಸಂಶೋಧನೆ ಮಾಡುತ್ತಿದ್ದಾರೆ. ಆಸ್ಪತ್ರೆಗೆ ತೆರಳಿ ಪರಿಚಯಸ್ಥರಂತೆ ವರ್ತಿಸಿ ಸಮಯ ಸಿಕ್ಕಾಗ ಮಗುವಿನೊಂದಿಗೆ ನಾಪತ್ತೆಯೂ ಆಗುತ್ತಾರೆ.

ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಎರಡು ದಿನದ ನವಜಾತ ಗಂಡು ಮಗುವನ್ನು ಬೌರಿಂಗ್ ಆಸ್ಪತ್ರೆಯಿಂದ ಹೊತ್ತೊಯ್ದಿದ್ದಾಳೆ. ಮಹಿಳೆ ಮಗುವನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಹೊರ ಹೋಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.[ಕಳ್ಳತನ ಬಯಲು ಮಾಡಿದ ಕಳ್ಳಿಯ ಸೆಲ್ಫಿ ಹುಚ್ಚು]

Bengaluru: baby boy stolen: search on for burqa-clad woman

ಬೌರಿಂಗ್ ಆಸ್ಪತ್ರೆಯಲ್ಲಿ ನಡೆದ ಪ್ರಕರಣ ಭಾನುವಾರ ಬೆಳಕಿಗೆ ಬಂದಿದೆ. ಸೈಯದ್ ಹಬೀಬ್ ಮತ್ತು ಫರೀದಾ ದಂಪತಿಗಳ ಮಗುವನ್ನು ಮಹಿಳೆ ಹೊತ್ತೊಯ್ದಿದ್ದಾಳೆ. ಅಕ್ಟೋಬರ್ 2 ರಂದು ಫರೀದಾ ಅವರಿಗೆ ಹೆರಿಗೆಯಾಗಿತ್ತು.

ಮಗು ಅಪಹರಣವಾಗಿದ್ದು ಹೇಗೆ?
ನವಜಾತ ಶಿಶುವನ್ನು ತುರ್ತು ಘಟಕದಲ್ಲಿಯೇ ಇರಿಸಲಾಗಿತ್ತು. ಎದೆ ಹಾಲು ನೀಡಲು ಎರಡು ಗಂಟೆಗೊಮ್ಮೆ ಮಗುವನ್ನು ಕರೆದುಕೊಂಡು ತಾಯಿಯ ಬಳಿ ಬರಲಾಗುತ್ತಿತ್ತು.[ಬುರ್ಖಾ ಹೇಳಿಕೆ ನೀಡಿ ಟ್ವಿಟ್ಟರ್ ನಲ್ಲಿ ಡಿಗ್ಗಿ ಬೆತ್ತಲು!]

ಭಾನುವಾರ ಅದರಂತೆ ಮಗು ತಾಯಿಯ ಬಳಿಯೇ ಇತ್ತು. ಈ ವೇಳೆ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಆಗಮಿಸಿದ್ದಾಳೆ. ತನ್ನ ಸಂಬಂಧಿಕರೊಬ್ಬರನ್ನು ನೋಡಲು ಆಸ್ಪತ್ರೆಗೆ ಬಂದಿದ್ದೇನೆ ಎಂದು ಹೇಳಿ ಫರೀದಾ ಬಳಿ ಮಾತನಾಡುತ್ತ ಕುಳಿತಿದ್ದಾಳೆ.

ಬುರ್ಖಾ ಧರಿಸಿದ್ದ ಮಹಿಳೆಗೆ ನೀಡಿದ ತಾಯಿ ಶೌಚಾಲಯಕ್ಕೆ ತೆರಳಿದ್ದಾಳೆ. ಆದರೆ ಶೌಚಾಲಯದಿಂದ ಹಿಂದಿರುಗಿದಾಗ ಮಹಿಳೆ ಮಗುವಿನೊಂದಿಗೆ ನಾಪತ್ತೆಯಾಗಿದ್ದಾಳೆ.

ಇದಾದ ನಂತರ ತಾಯಿ ತಕ್ಷಣ ಆಸ್ಪತ್ರೆ ಸಿಬ್ಬಂದಿಗೆ ಮಗು ಅಪಹರಣವಾಗಿರುವ ಬಗ್ಗೆ ತಿಳಿಸಿದ್ದಾಳೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಬುರ್ಖಾ ಧರಿಸಿದ್ದ ಮಹಿಳೆ ಪತ್ತೆಗೆ ಜಾಲ ಬೀಸಲಾಗಿದೆ.

English summary
A 2-day-old baby boy has been stolen from a hospital in Bengaluru. The incident took place on Sunday, Oct 4. CCTV camera installed in the hospital caught the accused woman's movement inside the hospital. She was seen leaving the hospital while holding the baby.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X