ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಖ್ಯಾತ ಕಾರು ಕಳ್ಳರು, ದರೋಡೆಕೋರರ ಬಂಧನ

|
Google Oneindia Kannada News

ಬೆಂಗಳೂರು. ಜೂ. 10: ಕದ್ದ ಕಾರಿಗೆ ಬೇರೆ ನಂಬರ್ ಪ್ಲೇಟ್ ಅಳವಡಿಸಿ ಜನರಿಗೆ ಮಾರಿ ಕೈ ತೊಳೆದುಕೊಳ್ಳುತ್ತಿದ್ದ ಆರೋಪಿಗಳನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಕಾರು ಮಾರಾಟ ಮಾಡಲು ಇವರು ಆಯ್ದುಕೊಂಡ ಸ್ಥಳ ಯಾವುದೇ ಗ್ಯಾರೇಜ್ ಅಲ್ಲ. ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಪ್ರತಿಷ್ಠಿತ ಹೋಟೆಲ್ ವೊಂದರ ಮುಂಭಾಗವೇ ಇವರ ಕಳ್ಳ ವ್ಯಾಪಾರದ ಅಡ್ಡೆ!

ಕಾರು ಕಳ್ಳತನ ಮಾಡಿ ನಕಲೆ ದಾಖಲೆ ಸೃಷ್ಟಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಶಿವಾಜಿನಗರದ ಮೋಹಿನ್ (32), ಮೈಸೂರಿನ ಬನ್ನಿಮಂಟಪದ ಸುಹೇಲ್ ಷರೀಪ್ ಎಂಬುವರನ್ನು ಬಂಧಿಸಲಾಗಿದೆ. ಶಿವಾಜಿನಗರದಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದ ಮೋಹಿನ್ ಕದ್ದ ಕಾರುಗಳಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಕೆ ಮಾಡುತ್ತಿದ್ದ. ಈತನಿಗೆ ಮೈಸೂರಿನಿಂದ ಕದ್ದ ಕಾರುಗಳು ದೊರೆಯುತ್ತಿದ್ದವು.[ನಾಯಿ ಚರ್ಮಕ್ಕೆ ಬಣ್ಣ ಬಳಿದು ಹುಲಿ ಚರ್ಮ ಅಂದ್ರು!]

police

ಪ್ರಕರಣದ ಸಂಬಂಧ ಥಣಿಸಂದ್ರದ ನದೀಮ್ ಅಹ್ಮದ್ ಎಂಬುವನನ್ನು ದಸ್ತಗಿರಿ ಮಾಡಿ 2 ಟಾಟಾ ಸಫಾರಿ, 1 ಮಹೀಂದ್ರ ಜೈಲೋ, 3 ಮಾರುತಿ ಸ್ವಿಫ್ಟ್, 1 ಹೊಂಡಾ ಸಿಟಿ, 2 ಟಾಟಾ ಇಂಡಿಗೋ, 1 ಹುಂಡೈ ಸ್ಯಾಂಟ್ರೋ ಕಂಪನಿಯ ಸೇರಿದಂತೆ ಒಟ್ಟು 10 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ನಗರ, ಕೇಂದ್ರ ವಿಭಾಗದ ಮಾನ್ಯ ಉಪ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್, ಹಲಸೂರುಗೇಟ್ ಉಪ-ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಅಮರನಾಥ್ ರೆಡ್ಡಿ ಮಾರ್ಗದರ್ಶನದಲ್ಲಿ ಅಶೋಕನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಂಗಪ್ಪ, ಹಜರೇಶ್, ಕಿಲ್ಲೇದಾರ್ , ನವಾಜ್ ಖಾನ್ ರಾಘವೇಂದ್ರ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.[ಸಾಮಾಜಿಕ ತಾಣದಲ್ಲಿ ಅಶ್ಲೀಲ ಬರಹ ಶೇರ್ ಮಾಡಿ ಸಿಕ್ಕಿಬಿದ್ದ]

police

ಕುಖ್ಯಾತ ದರೋಡೆಕೋರರ ಬಂಧನ:
ಬೆಂಗಳೂರು ಪಶ್ವಿಮ ವ್ಯಾಪ್ತಿಯ ಬ್ಯಾಟರಾಯನಪುರ ಪೊಲೀಸರು ಭರ್ಜರಿ ಬೇಟೆ ನಡೆಸಿದ್ದು ಕುಖ್ಯಾತ ದರೋಡೆಕೋರರನ್ನು ಬಂಧಿಸಿದ್ದಾರೆ.

ಮಾರಕಾಸ್ತ್ರಗಳನ್ನು ಹಿಡಿದು ಜನರ ಮೇಲೆ ದಾಳಿ ಮಾಡಿ ದರೋಡೆಗೆ ಮುಂದಾಗಿದ್ದ ಕೆಂಗೇರಿಯ ಲೋಕೇಶ (32), ಕುಮಾರಸ್ವಾಮಿಮ ಲೇಜೌಟ್ ನ ಅರುಣ್ ಕುಮಾರ್ (30) , ಕೆಂಗೇರಿಯ ನರಸಿಂಹಮೂರ್ತಿ (28), ಕಿರಣ್ ಕುಮಾರ್ (30), ನಾಗದೇವನಹಳ್ಳಿಯ ರಾಜ (36), ಉತ್ತರಹಳ್ಳಿಯ ಬಸವರಾಜ(24) ಎಂಬುವರನ್ನು ಬಂಧಿಸಲಾಗಿದೆ. ರವಿ, ಕೃಷ್ಣ. ವಿನಯ್ ಎಂಬುವರು ತಪ್ಪಿಸಿಕೊಂಡಿದ್ದಾರೆ.

ಆವಲಹಳ್ಳಿ ಮುಖ್ಯರಸ್ತೆಯ ಶ್ರೀರಂಗನಗರ ಸಮೀಪ 10-11 ಜನರ ಗುಂಪು ಒಂದು ಕಾರು ಮತ್ತು ಮೋಟಾರ್ ಬೈಕ್ ನಿಲ್ಲಿಸಿಕೊಂಡು ಮಾರಕಾಸ್ತ್ರಗಳನ್ನು ಹಿಡಿದು ದೆರೋಡೆಗೆ ಹೊಂಚು ಹಾಕುತ್ತಿತ್ತು ಎಂಬ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಪಿಎಸ್ ಐ ಎಸ್. ಕೃಷ್ಣಮೂರ್ತಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.[ರಸೀದಿ ಕೇಳಿದ ಮಹಿಳೆಗೆ ಇಟ್ಟಿಗೆ ಪೆಟ್ಟು ನೀಡಿದ ಪೇದೆ]

ಆರೋಪಿಗಳ ಬಂಧನದ ನಂತರ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಭಟ್ ರವರ ಎಸ್ಟೇಟ್ ಮನೆಯಲ್ಲಿ ಕಳ್ಳತನಕ್ಕೆ ಯತ್ನ. ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಗಪ್ರಸಾದ್ ಎಂಬುರ ಮನೆ ದರೋಡೆಗೆ ಪ್ರಯತ್ನಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ.

ಪಶ್ವಿಮ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ , ಕೆಂಗೇರಿಗೇಟ್ ಉಪವಿಭಾಗದ ಎಸಿಪಿ ಸತ್ಯನಾರಾಯಣ ಎನ್ ಕುದೂರು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬ್ಯಾಟರಾಯನಪುರ ಇನ್ಸ್ ಪೆಕ್ಟರ್ ಕೆ.ಪಿ. ಸತ್ಯನಾರಾಯಣ, ಪಿಎಸ್ ಐ ಲಕ್ಷ್ಮಣ್, ಕೃಷ್ಣಮೂರ್ತಿ, ವೆಂಕಟರಮಣಪ್ಪ, ಶಿವರಾಜ್, ರಮೇಶ್, ಪ್ರಕಾಶ್, ನವೀನ್ ಕುಮಾರ್, ರಾಜೇಶ್ ಮತ್ತಿತರರು ಭಾಗವಹಿಸಿದ್ದರು.

English summary
Bengaluru: Bengaluru central, Ashoka Nagara Police arrested 3 car thefts and seized worth of 60 lakhs property, 10 stolen cars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X