ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹಬ್ಬದ ವಾತಾವರಣ

By Mahesh
|
Google Oneindia Kannada News

ಬೆಂಗಳೂರು, ಫೆ.21: ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಚಿಣ್ಣರು ರಸ್ತೆಯಲ್ಲಿ ಕುಳಿತ ಬಣ್ಣ ಬಳಿಯುತ್ತಿದ್ದರು, ಕೆಲವರು ಸ್ಕೇಟಿಂಗ್ ಮಾಡುತ್ತಿದ್ದರು, ವಾಹನ ಸಂಚಾರದಿಂದ ಸಂಪೂರ್ಣ ಮುಕ್ತಗೊಂಡ ಎಂಜಿ ರಸ್ತೆ ಮಾಲಿನ್ಯಮುಕ್ತವಾಗಿ ಉಲ್ಲಾಸದಿಂದ ನಳನಳಿಸುತ್ತಿತ್ತು. ಇದೆಲ್ಲವೂ ಭಾನುವಾರ (ಫೆಬ್ರವತರಿ 21) ರಂದು 'ಓಪನ್ ಸ್ಟ್ರೀಟ್' ಕಾರ್ಯಕ್ರಮದಿಂದ ಸಾಧ್ಯವಾಗಿದೆ.[ಓಪನ್ ಸ್ಟ್ರೀಟ್ ಆದ ಎಂಜಿರಸ್ತೆ]

ಬಿಎಂಟಿಸಿ, ಬಿಎಂಆರ್‌ಸಿಎಲ್, ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ನಗರ ಪೊಲೀಸರ ಜಂಟಿ ಸಹಭಾಗ್ವಿತ್ವದಲ್ಲಿ ಓಪನ್ ಸ್ಟ್ರೀಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. [ಕಮರ್ಷಿಯಲ್ ಸ್ಟ್ರೀಟ್ 'ಹ್ಯಾಪಿ ಸ್ಟ್ರೀಟ್' ಆಗಿ ಬದಲಾದ ಚಿತ್ರಗಳು]

ಮೇಟ್ರೊ ರಂಗೋಲಿ ಕಲಾ ಕೇಂದ್ರ, ಟೈಮ್ಸ್ ಸಮೂಹ, ರೇಡಿಯೋ ಸಿಟಿ ಸೇರಿದಂತೆ ಇನ್ನೂ ಅನೇಕ ಸಂಸ್ಥೆಗಳು ಕಾರ್ಯಕ್ರಮದ ಆಯೋಜನೆ, ನಿರ್ವಹಣೆಯಲ್ಲಿ ಕೈ ಜೋಡಿಸಿವೆ. ಫೆ.21ರ ಭಾನುವಾರ ಅನಿಲ್ ಕುಂಬ್ಳೆ ವೃತ್ತದಿಂದ ಬ್ರಿಗೇಡ್ ರಸ್ತೆ (ಕಾವೇರಿ ಎಂಪೋರಿಯಂ) ವರೆಗೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆ ತನಕ ವಾಹನ ಸಂಚಾರ ಮುಕ್ತವಾಗಿರುತ್ತದೆ.

130ಕ್ಕೂ ಹೆಚ್ಚು ಕರಕುಶಲ ಸಾಮಗ್ರಿ ಮಾರಾಟ ಮಳಿಗೆ, 10 ಆಹಾರ ಮಳಿಗೆ, 15 ಗೃಹ ಆಧಾರಿತ ಖಾದ್ಯ ಮಳಿಗೆ ತೆರೆಯಲಾಗಿದ್ದು, ಓಪನ್ ಸ್ಟ್ರೀಟ್ ಗೆ ಬೆಳಗ್ಗೆ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಅವರು ಚಾಲನೆ ನೀಡಿದರು.

ಓಪನ್ ಸ್ಟ್ರೀಟ್ ಗಾಗಿ ಬದಲಾದ ಎಂಜಿ ರಸ್ತೆಗೆ ಆಗಮಿಸುವ ಸಾರ್ವಜನಿಕರಿಗಾಗಿ ಎಂ.ಜಿ. ರಸ್ತೆಗೆ 11 ಮಾರ್ಗಗಳಿಂದ 50 ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರಿಗೆ ವಿವಿಧ ರೀತಿಯಲ್ಲಿ ಮನರಂಜನೆ

ಸಾರ್ವಜನಿಕರಿಗೆ ವಿವಿಧ ರೀತಿಯಲ್ಲಿ ಮನರಂಜನೆ

ವಿವಿಧ ಆಟೋಟಗಳು, ಸಂಗೀತ, ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು, ಬುಗರಿ, ಲಗೋರಿ ಸೇರಿ ವಿವಿಧ ಗ್ರಾಮೀಣ ಕ್ರೀಡೆಗಳು ಕಂಡು ಬಂದವು.

ಸಚಿವ ಆರ್ ವಿ ದೇಶಪಾಂಡೆ ಅವರಿಂದ ಚಾಲನೆ

ಸಚಿವ ಆರ್ ವಿ ದೇಶಪಾಂಡೆ ಅವರಿಂದ ಚಾಲನೆ

130ಕ್ಕೂ ಹೆಚ್ಚು ಕರಕುಶಲ ಸಾಮಗ್ರಿ ಮಾರಾಟ ಮಳಿಗೆ, 10 ಆಹಾರ ಮಳಿಗೆ, 15 ಗೃಹ ಆಧಾರಿತ ಖಾದ್ಯ ಮಳಿಗೆ ತೆರೆಯಲಾಗಿದ್ದು, ಓಪನ್ ಸ್ಟ್ರೀಟ್ ಗೆ ಬೆಳಗ್ಗೆ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಅವರು ಚಾಲನೆ ನೀಡಿದರು.

ಎಂಜಿ ರಸ್ತೆಯಲ್ಲಿ ಗಮನ ಸೆಳೆದ ಮಳಿಗೆಗಳು

ಎಂಜಿ ರಸ್ತೆಯಲ್ಲಿ ಗಮನ ಸೆಳೆದ ಮಳಿಗೆಗಳು

'ಆಸಕ್ತರಿಗೆ ಕನ್ನಡ ಕಲಿಸಲು ಅರ್ಧ ಗಂಟೆಯಂತೆ ಆಯ್ದ ಸ್ಥಳಗಳಲ್ಲಿ 10ಕ್ಕೂ ಹೆಚ್ಚು ತರಗತಿ ನಡೆಸಲಾಗುವುದು' ಎಂಬ ಅನೂಪ್ ಮಯ್ಯ ಅವರ ತಂಡ ಗಮನ ಸೆಳೆಯಿತು. ಬಾಬಾ ರಾಮದೇವ್ ರಂತೆ ಧಾನ್ಯ ಭಂಗಿಯಲ್ಲಿ ಕುಳಿತ ವ್ಯಕ್ತಿಯೊಬ್ಬ ಪತಂಜಲಿ ಮಳಿಗೆಯಲ್ಲಿ ಕುಳಿತ್ತಿದ್ದು ಕಂಡು ಬಂದಿತು.

ಅಂಧರ ಮ್ಯೂಸಿಕ್ ಬ್ಯಾಂಡ್

ಅಂಧರ ಮ್ಯೂಸಿಕ್ ಬ್ಯಾಂಡ್

ಓಪನ್ ಸ್ಟ್ರೀಟ್ ಆಗಿ ಬದಲಾದ ಎಂಜಿ ರಸ್ತೆಯಲ್ಲಿ ಸುಶ್ರಾವ್ಯ ಸಂಗೀತ ನುಡಿಸುತ್ತಾ ಸಾಗಿದ ಅಂಧರ ಮ್ಯಾಸಿಕ್ ಬ್ಯಾಂಡ್.

ಓಪನ್ ಸ್ಟ್ರೀಟ್ ಬಗ್ಗೆ ಪೊಲೀಸ್ ಅಧಿಕಾರಿಯಿಂದ ಟ್ವೀಟ್

ಎಂಜಿ ರಸ್ತೆಯ ಓಪನ್ ಸ್ಟ್ರೀಟ್ ಬಗ್ಗೆ ಪೊಲೀಸ್ ಅಧಿಕಾರಿ ಅಭಿಶೇಕ್ ಗೋಯಲ್ ರಿಂದ ಟ್ವೀಟ್

ಪ್ರತಿ ನಗರದ ಎಂಜಿ ರಸ್ತೆಯೂ ಓಪನ್ಸ್ಟ್ರೀಟ್ ಆಗಲಿ

ಪ್ರತಿ ನಗರದ ಎಂಜಿ ರಸ್ತೆಯೂ ವಾರಾಂತ್ಯದಲ್ಲಿ ಓಪನ್ಸ್ಟ್ರೀಟ್ ಆಗಲಿ. ಪುಣೆಯಲ್ಲಿ ಈ ಹಿಂದೆ ಈ ರೀತಿ ಪ್ರಯತ್ನ ಮಾಡಲಾಗಿತ್ತು.

ರೇಡಿಯೋ ಸಿಟಿ ಆರ್ ಜೆ ಪ್ರದೀಪರಿಂದ ಟ್ವೀಟ್

ರೇಡಿಯೋ ಸಿಟಿ ಆರ್ ಜೆ ಪ್ರದೀಪರಿಂದ ಟ್ವೀಟ್, ಸೆಲ್ಫಿ ವಿತ್ ಓಪನ್ ಸ್ಟ್ರೀಟ್

ಖುಷಿಯಿಂದ ಚಿತ್ರಗಳನ್ನು ಹಂಚಿಕೊಂಡ ನಾಗರೀಕರು

ಸಂಚಾರಮುಕ್ತ ಎಂಜಿ ರಸ್ತೆಯನ್ನು ಕಂಡು ಖುಷಿಯಿಂದ ಟ್ವೀಟ್ ಮಾಡಿ ಚಿತ್ರಗಳನ್ನು ಹಂಚಿಕೊಂಡ ನಾಗರೀಕರು.

ಮಕ್ಕಳ ಚಿತ್ತಾರದಿಂದ ತುಂಬಿಕೊಂಡ ಎಂಜಿ ರಸ್ತೆ

ಮಕ್ಕಳ ಚಿತ್ತಾರದಿಂದ ತುಂಬಿಕೊಂಡ ಎಂಜಿ ರಸ್ತೆ

ಮಕ್ಕಳ ಚಿತ್ತಾರದಿಂದ ತುಂಬಿಕೊಂಡ ಎಂಜಿ ರಸ್ತೆ, ಆಟದ ಮೈದಾನವಾಗಿ ಮಾರ್ಪಾಟಾಗಿತ್ತು.

ಎಂ.ಜಿ. ರಸ್ತೆಗೆ 11 ಮಾರ್ಗಗಳಿಂದ 50 ಬಸ್‌ಗಳ ವ್ಯವಸ್ಥೆ

ಎಂ.ಜಿ. ರಸ್ತೆಗೆ 11 ಮಾರ್ಗಗಳಿಂದ 50 ಬಸ್‌ಗಳ ವ್ಯವಸ್ಥೆ

ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗಾಗಿ ಎಂ.ಜಿ. ರಸ್ತೆಗೆ 11 ಮಾರ್ಗಗಳಿಂದ 50 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.ಬಿ.ಆರ್.ವಿ ಮೈದಾನ, ಶಿವಾಜಿನಗರ ಬಸ್ ನಿಲ್ದಾಣ ಸಂಕೀರ್ಣದ 2ನೇ ಮಹಡಿಯ ಪಾರ್ಕಿಂಗ್ ಸ್ಥಳ, ಕಾಮರಾಜ ರಸ್ತೆಯಲ್ಲಿರುವ ಆರ್ಮಿ ಪಬ್ಲಿಕ್ ಶಾಲೆ ಬಳಿ, ಸಫೀನಾ ಪ್ಲಾಜಾ ಮುಂಭಾಗ, ಆರ್.ಬಿ.ಎನ್.ಎಂ.ಎಸ್ ಶಾಲಾ ಆಟದ ಮೈದಾನ ಬಳಿ ವಾಹನ ನಿಲುಗಡೆಗೆ ಅವಕಾಶ

ಬಿಎಂಟಿಸಿ ಮಾಡಿರುವ ವಿಶೇಷ ಬಸ್ ವ್ಯವಸ್ಥೆ

ಓಪನ್ ಸ್ಟ್ರೀಟ್ ದಿನದಂದು ಸಾರ್ವಜನಿಕರಿಗೆ ಬಿಎಂಟಿಸಿ ಮಾಡಿರುವ ವಿಶೇಷ ಬಸ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವ ಟ್ವೀಟ್

ನಗರದ ವಿವಿಧೆಡೆಗಳಿಂದ ಹರಿದು ಬಂದ ಜನಸಾಗರ

ನಗರದ ವಿವಿಧೆಡೆಗಳಿಂದ ಹರಿದು ಬಂದ ಜನಸಾಗರ

ಎಂಜಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಸೈಕ್ಲಿಂಗ್, ಕ್ರೀಡಾ ಚಟುವಟಿಕೆಗೆ ಅವಕಾಶ ಮಾಡಿಕೊಡಲು ಓಪನ್ ಸ್ಟ್ರೀಟ್ ಕಾರ್ಯಕ್ರಮವನ್ನು ನಗರ ರಸ್ತೆ ಸಾರಿಗೆ ನಿರ್ದೇಶನಾಲಯ ಆಯೋಜಿಸುತ್ತಿದೆ. ನಗರದ ವಿವಿಧೆಡೆಗಳಿಂದ ಹರಿದು ಬಂದ ಜನಸಾಗರ ಹರಿದು ಬಂದಿದೆ ಎಂದು ರಂಗೋಲಿ ಕಲಾ ಕೇಂದ್ರ ಮುಖ್ಯಸ್ಥ ವಸಂತ್‌ ರಾವ್‌ ಹೇಳಿದರು

ಬೆಂಗಳೂರಿನಲ್ಲಿ ಇದು 2ನೇ ಓಪನ್ ಸ್ಟ್ರೀಟ್ ಕಾರ್ಯಕ್ರಮ

ಬೆಂಗಳೂರಿನಲ್ಲಿ ಇದು 2ನೇ ಓಪನ್ ಸ್ಟ್ರೀಟ್ ಕಾರ್ಯಕ್ರಮ

ಬೆಂಗಳೂರಿನಲ್ಲಿ ಇದು 2ನೇ ಓಪನ್ ಸ್ಟ್ರೀಟ್ ಕಾರ್ಯಕ್ರಮವಾಪಿದೆ. ಸೆಪ್ಟೆಂಬರ್‌ನಲ್ಲಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಓಪನ್ ಸ್ಟ್ರೀಟ್ ಕಾರ್ಯಕ್ರಮ ನಡೆದಿತ್ತು. ಫೆ.21ರಂದು ಎರಡನೇ ಹಂತದ ಕಾರ್ಯಕ್ರಮ ನಡೆಸಲಾಗುತ್ತಿದೆ.

English summary
After Commercial Street observed 'Happy Street' day, now MG road On Sunday, Feb 21 is observing 12 hour vehicle free day from 9 am to 9 pm. Vehicles are banned to enter the stretch from Anil Kumble Circle till Cavery Emporium Junction in Mahathma Gandhi Road in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X