ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

6 ಗ್ರೀನ್ ಲೈನ್ ಮೆಟ್ರೋ ಸ್ಟೇಶನ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ

ಗ್ರೀನ್ ಲೈನ್ ನ ಮೆಟ್ರೋ ಸ್ಟೇಶನ್ ನ 11 ರಲ್ಲಿ 6 ಸ್ಟೇಶನ್ ಗಳು ಇನ್ಮುಂದೆ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಿವೆ. ಪಾರ್ಕಿಂಗ್ ಲಾಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಡ್ ಪ್ರಕ್ರಿಯೆ ಆರಂಭವಾಗಿದ್ದು, ಮೂರು ತಿಂಗಳಿನ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 09: ಬೆಂಗಳೂರಿನ ಹೆಮ್ಮೆಯ ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತ ಇದೇ ತಿಂಗಳ ಕೊನೆಯಲ್ಲಿ ಸಂಪೂರ್ಣ ಮುಕ್ತಾಯ ಕಂಡು ಕಾರ್ಯಾರಂಭಗೊಳ್ಳಲಿದೆ. ಟ್ರಾಫಿಕ್ ನಂತರ ಬೆಂಗಳೂರಿಗರ ಪ್ರಮುಖ ಸಮಸ್ಯೆ ಅಂದ್ರೆ ಟ್ರಾಫಿಕ್. ಇದನ್ನು ಮನಗಂಡ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ (BMRCL) ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ.

ಗ್ರೀನ್ ಲೈನ್ ನ ಮೆಟ್ರೋ ಸ್ಟೇಶನ್ ನ 11 ರಲ್ಲಿ 6 ಸ್ಟೇಶನ್ ಗಳು ಇನ್ಮುಂದೆ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಿವೆ. ಮೆಟ್ರೋ ಸ್ಟೇಶನ್ ನಿಂದ ಮೂರ್ನಾಲ್ಕು ಕಿ.ಮೀ.ದೂರದಲ್ಲಿ ಮನೆ ಇರುವವರು ಮೆಟ್ರೋ ಸ್ಟೇಶನ್ ವರೆಗೂ ತಮ್ಮ ಗಾಡಿಯಲ್ಲಿ ಬಂದು ದ್ವಿಚಕ್ರ ವಾಹನವನ್ನು ನಿಶ್ಚಿಂತೆಯಿಂದ ಪಾರ್ಕ್ ಮಾಡಿ ತೆರಳಬಹುದು![ನಮ್ಮ ಮೆಟ್ರೋ 2 ನೇ ಹಂತ 2020 ರ ಹೊತ್ತಿಗೆ ಸಂಪೂರ್ಣ]

Bengaluru: 6 green line metro stations will have parking facility soon

ಜಯನಗರ ನ್ಯಾಶನಲ್ ಕಾಲೇಜ್ ಮತ್ತು ಯಲಚೇನಹಳ್ಳಿ ಮೆಟ್ರೋ ಸ್ಟೇಶನ್ ಗಳಲ್ಲಿ ಮಾತ್ರ ನಾಲ್ಕು ಚಕ್ರದ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಉಳಿದಂತೆ ಜಯನಗರ, ಆರ್.ವಿ.ರೋಡ್, ಬನಶಂಕರಿ, ಜೆ.ಪಿ.ನಗರ ಮೆಟ್ರೋ ಸ್ಟೇಶನ್ ಗಳಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು BMRCL ಹೇಳಿದೆ.

ಪಾರ್ಕಿಂಗ್ ಲಾಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಡ್ ಪ್ರಕ್ರಿಯೆ ಆರಂಭವಾಗಿದ್ದು, ಮೂರು ತಿಂಗಳಿನಲ್ಲಿ ಗ್ರೀನ್ ಲೈನ್ ಮೆಟ್ರೋ ಪಾರ್ಕಿಂಗ್ ವ್ಯವಸ್ಥೆ ಕಾರ್ಯರೂಪಕ್ಕೆ ಬರಲಿದೆ.

English summary
Six green line metro stations will have two wheeler parking facility soon, Bengaluru Metro Rail Corporation Ltd (BMRCL) officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X