ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಡುಗಿಯೊಂದಿಗಿನ ಸೆಲ್ಫಿ ಫೇಸ್‌ಬುಕ್‌ಗೆ, ಹುಡುಗರು ಪೊಲೀಸ್ ಠಾಣೆಗೆ

By Madhusoodhan
|
Google Oneindia Kannada News

ಬೆಂಗಳೂರು, ಆಗಸ್ಟ್, 17: ಹುಡುಗಿಯೊಬ್ಬಳ ಸ್ನೇಹಕ್ಕಾಗಿ ಇಬ್ಬರು ಯುವಕರು ಬೆಂಗಳೂರಿನಲ್ಲಿ ಹೊಡೆದಾಡಿಕೊಂಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಫೇಸ್ ಬುಕ್ ಸೆಲ್ಫಿ ಎಂದರೆ ನಂಬಲೇಬೇಕು.

ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿಗಳಾದ ಅಜಿತ್ ಕುಮಾರ್ ಮತ್ತು ಶಿವ ಪ್ರಸಾದ್ ಎಂಬುವರನ್ನು ಘಟನೆ ಸಂಬಂಧ ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.[ಫೇಸ್ಬುಕ್ ನಲ್ಲಿ ಬೇಕಾಬಿಟ್ಟಿ ಸ್ಟೇಟಸ್ ಹಾಕಿದವನಿಗೆ ಭಯಂಕರ ದಂಡ]

facebook

ಯುವತಿಯೊಬ್ಬಳ ಸ್ನೇಹಕ್ಕಾಗಿ ಇಬ್ಬರು ಯುವಕರು ಪೈಪೋಟಿ ನಡೆಸುತ್ತಿದ್ದರು. ಯುವತಿ ಜತೆ ಸೆಲ್ಫಿ ತೆಗೆಸಿಕೊಂಡ ಫೋಟೋವನ್ನು ಒಬ್ಬಾತ ಫೇಸ್ ಬುಕ್ ಗೆ ಹಾಕಿದ್ದೇ ಬಡಿದಾಟಕ್ಕೆ ಕಾರಣವಾಗಿದೆ. ಪೊಲೀಸರು ಇಬ್ಬರ ಮೇಲೂ ಕೊಲೆ ಆರೋಪದಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ,

ಶಾಪಿಂಗ್ ಮಾಲ್ ವೊಂದರಲ್ಲಿ ಹುಡುಗಿಯೊಂದಿಗೆ ತೆಗೆಸಿಕೊಂಡ ಸೆಲ್ಫಿಯನ್ನು ಅಜಿತ್ ಕುಮಾರ್ ಫೇಸ್ ಬುಕ್ ಗೆ ಹಾಕಿದ್ದ. ಇದನ್ನು ಕಂಡ ಶಿವಪ್ರಸಾದ್ ಫೋಟೋ ಡಿಲೀಟ್ ಮಾಡುವಂತೆ ಫೇಸ್ ಬುಕ್ ನಲ್ಲೇ ಆಗ್ರಹಿಸಿದ್ದ. [ಫೇಸ್ ಬುಕ್ ನಿಂದ ವಿಡಿಯೋ ಡೌನ್ ಲೋಡ್ ಮಾಡುವುದು ಹೇಗೆ?]

ಚಾಟ್ ಮಾಡುತ್ತಲೇ ಪರಸ್ಪರ ಫೋನ್ ನಂಬರ್ ಪಡೆದುಕೊಂಡ ಇಬ್ಬರು ಬಸವೇಶ್ವರ ನಗರದ ಶಂಕರ ಮಠದ ಬಳಿ ಎದುರಾಗಿ ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದರು. ಹುಡುಗಿ ಮಾತ್ರ ಇಬ್ಬರೂ ನನಗೆ ಸ್ನೇಹಿತರು ಮಾತ್ರ ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದಾಳೆ.

English summary
Two men stabbed each other over a girl after one of them posted a photograph with her on Facebook. Bengaluru police have booked both under attempt-to-murder charges. The accused, Ajit Kumar and Shiva Prasad, are residents of Rajajinagar and Basavashwaranagar respectively. Shiva called Ajit for fight near Shankar Mutt on August 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X