ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು ಕೆರೆಯ ನೊರೆ ಸಮಸ್ಯೆಗೆ ಪರಿಹಾರ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿಸೆಂಬರ್ 24 : 'ಬೆಳ್ಳಂದೂರು ಕೆರೆಯ ನೊರೆ ಸಮಸ್ಯೆಯನ್ನು ಹಂತ-ಹಂತವಾಗಿ ಪರಿಹರಿಸಲಾಗುವುದು. ಕೊಳಚೆ ನೀರು ಕೆರೆಗೆ ಹರಿದುಬರದಂತೆ ತಡೆಗಟ್ಟಲಾಗುವುದು' ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಭರವಸೆ ನೀಡಿದ್ದಾರೆ.

ಬುಧವಾರ ಬೆಳ್ಳಂದೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಲಕ್ಷ್ಮಣ್ ಅವರು, 'ಕೆರೆಗೆ ಕೈಗಾರಿಕೆ ಮತ್ತು ಜನವಸತಿ ಪ್ರದೇಶದ ತ್ಯಾಜ್ಯಗಳು ಬಂದು ಸೇರುತ್ತಿವೆ. ಕೆರೆಯಲ್ಲಿ ಸುಮಾರು ಮೂರು ಮೀಟರ್‌ನಷ್ಟು ಹೂಳು ತುಂಬಿದೆ' ಎಂದು ಹೇಳಿದರು. [ಬೆಳ್ಳಂದೂರು ಕೆರೆ ಸ್ವಚ್ಛ ಮಾಡಲು ಎಷ್ಟು ವರ್ಷ ಬೇಕು?]

lake

'ಕೆರೆಗೆ ಕೊಳಚೆ ನೀರು ಹರಿದುಬರದಂತೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತೆ. ಹಂತ-ಹಂತವಾಗಿ ಈ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ನೀರು ಎತ್ತರಿಂದ ಬೀಳುತ್ತಿದೆ ಆದ್ದರಿಂದ ನೊರೆ ಉಂಟಾಗುತ್ತಿದೆ. ನೀರು ಬೀಳುವ ಜಾಗದಲ್ಲಿ ಇಳಿಜಾರು ನಿರ್ಮಿಸಲಾಗುತ್ತದೆ' ಎಂದರು. [ಗೂಗಲ್ ಮ್ಯಾಪ್ ನಲ್ಲಿ 'ಬೆಳ್ಳಂದೂರು ಲೇಕ್' ಹುಡುಕಬೇಡಿ!]

'2016ರ ಜೂನ್‌ನಲ್ಲಿ ಇಳಿಜಾರು ನಿರ್ಮಾಣ ಕಾರ್ಯಪೂರ್ಣಗೊಳ್ಳಲಿದೆ. ಚಲ್ಲಘಟ್ಟ ಬಳಿ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪನೆ ಮಾಡಲಾಗುತ್ತಿದ್ದು, ಇದರಿಂದ ಕೆರೆಗೆ ಕೊಳಚೆ ನೀರು ಹರಿದುಬರುವುದು ತಪ್ಪಲಿದೆ' ಎಂದು ಲಕ್ಷಣ್ ತಿಳಿಸಿದರು. [ಬೆಳ್ಳಂದೂರು ಕೆರೆ ನೊರೆ ಸಮಸ್ಯೆ ಬಗೆಹರಿಸಿ : ಸಿದ್ದರಾಮಯ್ಯ]

ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಲಕ್ಷಣ್ ಅವರು ಕೆರೆಯ ನೊರೆಯಿಂದ ಆಗುತ್ತಿರುವ ತೊಂದರೆಗಳ ಕುರಿತು ಸ್ಥಳೀಯ ಜನರೊಂದಿಗೆ ಚರ್ಚೆ ನಡೆಸಿದರು.

English summary
Will this promise too go up in foam? This is a question that the residents around the Bellandur lake have to ask. The newly appointed chairman of the Karnataka State Pollution Control Board, Lakshman visited the Bengaluru Bellandur lake area where there is formation of foam as a result of pollution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X