ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು ಕೆರೆ ಸ್ವಚ್ಛವಾಗೋದು 2020 ಕ್ಕೆ!

ಒಂದು ತಿಂಗಳೊಳಗೆ ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸುವಂತೆ ಎನ್ ಜಿಟಿ ನೀಡಿದ್ದ ಡೆಡ್ ಲೈನ್ ಅನ್ನು ತಲುಪುವುದಕ್ಕೆ ಸಾಧ್ಯವೇ ಇಲ್ಲ ಎಂದಿರುವ ಕರ್ನಾಟಕ ಸರ್ಕಾರ 2020ರ ಹೊತ್ತಿಗೆ ಬೆಳ್ಳಂದೂರು ಕೆರೆಯನ್ನು ಸಂಪೂರ್ಣ ಸ್ವಚ್ಛಗೊಳಿಸಬಹುದು ಎಂದಿ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 10: ಬೆಂಗಳೂರಿನ ಬೆಳ್ಳಂದೂರು ಕೆರೆ ಸ್ವಚ್ಛತೆಗೆ ಕನಿಷ್ಠವೆಂದರೂ ಎರಡೂವರೆ ವರ್ಷವಾದರೂ ಬೇಕಂತೆ!

ಹೌದು, ಒಂದು ತಿಂಗಳೊಳಗೆ ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸುವಂತೆ ಎನ್ ಜಿಟಿ ನೀಡಿದ್ದ ಡೆಡ್ ಲೈನ್ ಅನ್ನು ತಲುಪುವುದಕ್ಕೆ ಸಾಧ್ಯವೇ ಇಲ್ಲ ಎಂದಿರುವ ಕರ್ನಾಟಕ ಸರ್ಕಾರ 2020ರ ಹೊತ್ತಿಗೆ ಬೆಳ್ಳಂದೂರು ಕೆರೆಯನ್ನು ಸಂಪೂರ್ಣ ಸ್ವಚ್ಛಗೊಳಿಸಬಹುದು ಎಂದಿದೆ! ಬೆಳ್ಳಂದೂರು ಕೆರೆಯ ಸ್ವಚ್ಛತಾ ಕಾರ್ಯ ಆರಂಭವಾಗಿ ಮೂರು ವಾರ ಕಳೆಯುವ ಹೊತ್ತಿಗೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎದುಸಿರುಬಿಡುವುದಕ್ಕೆ ಶುರುಮಾಡಿದಂತಿದೆ![ಬೆಳ್ಳಂದೂರು ಕೆರೆಯಲ್ಲಿ ಶುರು ಬಿರುಸಿನ ಸ್ವಚ್ಛತಾ ಕಾರ್ಯ]

Bellandur lake will be pollution free by 2020!

ನಿನ್ನೆ (ಮೇ 9) ಬೆಳ್ಳಂದೂರು ಕೆರೆಗೆ ಭೇಟಿ ನೀಡಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, '910 ಎಕರೆ ಜಾಗದಲ್ಲಿರುವ ಕೆರೆ ಸ್ವಚ್ಛತೆಗೆ ಒಂದು ತಿಂಗಳ ಕಾಲಾವಕಾಶ ತೀರಾ ಕಡಿಮೆ. ಮೇ. 18 ರಂದು ಎನ್ ಜಿಟಿ ಮತ್ತೊಮ್ಮೆ ಬೆಳ್ಳಂದೂರು ಕೆರೆ ಕುರಿತು ವಿಚಾರಣೆ ನಡೆಸಲಿದ್ದು, ಆ ಸಮಯದಲ್ಲಿ ವಸ್ತುಸ್ಥಿತಿಯನ್ನು ಅರ್ಥಮಾಡಿಸಿ, ನಂತರ ಸಮಯಾವಕಾಶ ಕೇಳುವುದಾಗಿ ಹೇಳಿದ್ದಾರೆ.[ಮತ್ತೆ ಬೆಳ್ಳಂದೂರು ಕೆರೆಯಲ್ಲಿ ಬೆಂಕಿಯ ನರ್ತನ]

ಎನ್ ಜಿಟಿ ಆದೇಶದನ್ವಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ) ಬೆಳಂದೂರು ಕೆರೆಯ ಸುತ್ತಣ 488 ಕೈಗಾರಿಕೆಗಳನ್ನು ಮುಚ್ಚಲು ಆದೇಶ ನೀಡಿತ್ತು. ಏನೇ ಮಾಡಿದರೂ ಎರಡು ವರ್ಷದೊಳಗೆ ಕೆರೆಯನ್ನು ಸ್ವಚ್ಛಗೊಳಿಸಲು ಬ್ರಹ್ಮಬಂದರು ಸಾಧ್ಯವಿಲ್ಲ ಎಂಬಂತಾಗಿದ್ದು, ಕೆರೆಯ ಮಾಲಿನ್ಯದ ಪ್ರಮಾಣ ಎಷ್ಟು ಮಿತಿಮೀರಿರಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

English summary
Bellandur lakes cleaning process has alreday started. but according to additional chief secretary of BDA Mahendra Jain, "1 month is too short time to clean the lake. By 2010 only the lake will be pollution free."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X