ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ ಮನೆ ಕೊಳ್ಳುವ ನಿಮ್ಮ ಕನಸು ಸದ್ಯದಲ್ಲೇ ನನಸು!

|
Google Oneindia Kannada News

ಬೆಂಗಳೂರು, ಜನವರಿ 05 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಗರದ ಸುತ್ತ-ಮುತ್ತ ನಿರ್ಮಿಸಿರುವ ಮನೆಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಲು ಸಿದ್ಧತೆ ನಡೆಸುತ್ತಿದೆ. 4,100 ಮನೆಗಳ ಹಂಚಿಕೆಗೆ ಜನವರಿ 10ರೊಳಗೆ ಅಧಿಸೂಚನೆ ಹೊರಡಿಸಲು ಬಿಡಿಎ ನಿರ್ಧರಿಸಿದೆ.

ದೊಡ್ಡಬನಹಳ್ಳಿ, ವಲಗೇರಹಳ್ಳಿ, ಆಲೂರು, ಕೊಮ್ಮಘಟ್ಟ ಮುಂತಾದ ಕಡೆ ಬಿಡಿಎ ನಿರ್ಮಿಸುತ್ತಿದ್ದ ಬಡಾವಣೆಗಳು ಪೂರ್ಣಗೊಂಡಿದ್ದು, ಮನೆಗಳು ಹಂಚಿಕೆಗೆ ಸಿದ್ಧವಾಗಿವೆ. ಡಿಸೆಂಬರ್ 30ರಂದು ನಡೆದ ಬಿಡಿಎ ಅಧಿಕಾರಿಗಳ ಸಭೆಯಲ್ಲಿ ಜನವರಿ 10ರೊಳಗೆ ಅಧಿಸೂಚನೆ ಹೊರಡಿಸಲು ತೀರ್ಮಾನಿಸಲಾಗಿದೆ. [ಬೆಂಗಳೂರಲ್ಲಿ 25 ಸ್ಕೈವಾಕ್ ನಿರ್ಮಾಣ, ಎಲ್ಲೆಲ್ಲಿ?]

bda

ಈ ಮನೆಗಳ ನಿರ್ಮಾಣ ಕಾರ್ಯ ಎರಡು ತಿಂಗಳ ಹಿಂದೆಯೇ ಪೂರ್ಣಗೊಂಡಿತ್ತು. ಆದರೆ, ವಿಧಾನಪರಿಷತ್ ಚುನಾವಣಾ ನೀತಿ ಸಂಹಿತೆ ಎದುರಾದ ಕಾರಣ ಅಧಿಸೂಚನೆ ದಿನಾಂಕವನ್ನು ಮುಂದೂಡಲಾಗಿತ್ತು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.[30 ಲಕ್ಷದ ಆಸ್ತಿ ಖರೀದಿಗೆ ಮುನ್ನ ಇದನ್ನು ಓದಿ]

4,100 ಮನೆಗಳ ಹಂಚಿಕೆ : ಬಿಡಿಎ ಒಟ್ಟು 4,100 ಮನೆಗಳ ಹಂಚಿಕೆಗೆ ಅಧಿಸೂಚನೆಯನ್ನು ಹೊರಡಿಸಲಿದೆ. ಇವುಗಳಲ್ಲಿ 2,200 ಸಿಂಗಲ್ ಬೆಡ್‌ ರೂಂ, 1,500 ಡಬಲ್ ಬೆಡ್‌ ರೂಂ, 400 ಮೂರು ಬೆಡ್‌ ರೂಂ ಮನೆಗಳು ಸೇರಿವೆ. ಒಂದು ಮತ್ತು ಎರಡು ಬೆಡ್‌ ರೂಂ ಮನೆಗಳು ಎಲ್ಲಾ ಬಡಾವಣೆಗಳಲ್ಲಿ ಲಭ್ಯವಿದೆ. ಆದರೆ, 3 ಬಿಹೆಚ್‌ಕೆ ಮನೆಗಳು ಮಾತ್ರ ವಲಗೇರಹಳ್ಳಿ, ಆಲೂರಿನಲ್ಲಿ ಮಾತ್ರ ಲಭ್ಯವಿದೆ. [BDA ವೆಬ್ ಸೈಟ್ ನೋಡಿ]

ಮನೆಗಳ ದರವೆಷ್ಟು? : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧಿಸೂಚನೆ ಹೊರಡಿಸುವಾಗ 1 ಬಿಹೆಚ್‌ಕೆ ಮನೆಗೆ 12.5 ಲಕ್ಷ, 2 ಬಿಹೆಚ್‌ಕೆ ಮನೆಗೆ 26 ಲಕ್ಷ ಮತ್ತು 3 ಬಿಹೆಚ್‌ಕೆ ಮನೆಗೆ 45 ಲಕ್ಷ ದರ ನಿಗದಿಪಡಿಸಬಹುದು ಎಂದು ಅಂದಾಜಿಸಲಾಗಿದೆ.

English summary
Bangalore Development Authority (BDA) all set to issue public notification for the sale of 4,100 flats in the outskirts of the Bengaluru city. Flats available in Doddabanahalli, Valagerahalli, Alur, Komaghatta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X