ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ ಫ್ಲ್ಯಾಟ್‌ಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

|
Google Oneindia Kannada News

ಬೆಂಗಳೂರು, ಮಾರ್ಚ್ 14 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 3,280 ಮನೆಗಳ ಹಂಚಿಕೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಣೆ ಮಾಡಿದೆ. 2016ರ ಏಪ್ರಿಲ್ 16ರ ತನಕ ಗಡುವನ್ನು ವಿಸ್ತರಣೆ ಮಾಡಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 3,280 ಮನೆಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಿದ್ದು, ಜನವರಿ 13 ರಿಂದ ಬ್ಯಾಂಕ್‌ಗಳಲ್ಲಿ ಅರ್ಜಿಗಳು ದೊರೆಯುತ್ತಿವೆ. ಆರಂಭಿಕ ಠೇವಣಿಯೊಂದಿಗೆ ಅರ್ಜಿ ಸಲ್ಲಿಸಲು ಮಾರ್ಚ್ 17 ಕೊನೆಯ ದಿನಾಂಕವಾಗಿತ್ತು.[ಬಿಡಿಎ ಮನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?]

bda

ಗಡುವು ವಿಸ್ತರಣೆ ಮಾಡುವಂತೆ ಜನರು ಮಾಡಿದ ಮನವಿಗೆ ಸ್ಪಂದಿಸಿದ ಬಿಡಿಎ, ಏಪ್ರಿಲ್ 16ರ ತನಕ ಗಡುವನ್ನು ವಿಸ್ತರಣೆ ಮಾಡಿದೆ. ಕೇಂದ್ರ ಬಜೆಟ್‌ನಲ್ಲಿ ವಸತಿ ಯೋಜನೆಗಳಿಗೆ ಹಲವು ರಿಯಾಯಿತಿ ಘೋಷಣೆ ಮಾಡಿರುವುದರಿಂದಲೂ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ಬಿಡಿಎ ಹೇಳಿದೆ. [30 ಲಕ್ಷದ ಆಸ್ತಿ ಖರೀದಿಗೆ ಮುನ್ನ ಇದನ್ನು ಓದಿ]

ಎಲ್ಲೆಲ್ಲಿ ಮನೆಗಳ ಹಂಚಿಕೆ : ಆಲೂರು 1ನೇ ಹಂತ, ಮಾಳಗಾಲ, ಹಲಗೆವಡೇರಹಳ್ಳಿ, ದೊಡ್ಡಬನಹಳ್ಳಿ 2ನೇ ಹಂತ, ವಲಗೇರಹಳ್ಳಿ, ಕೊಮ್ಮಘಟ್ಟ 1ನೇ ಹಂತ, ಕಣಿಮಿಣಿಕೆ 2ನೇ ಹಂತ, ವಲಗೇರಹಳ್ಳಿ 5ನೇ ಹಂತದಲ್ಲಿನ ಮನೆಗಳನ್ನು ಹಂಚಿಕೆ ಮಾಡಲು ಬಿಡಿಎ ಅರ್ಜಿಗಳನ್ನು ಆಹ್ವಾನಿಸಿದೆ. [ಬಿಡಿಎಯಲ್ಲಿ 2,200 ಕೋಟಿ ಹಗರಣ, ಮೂವರ ಬಂಧನ]

ಮನೆಗಳ ವಿವರ : 1 ಬಿಎಚ್‌ಕೆಯ 1,510, 2 ಬಿಎಚ್‌ಕೆಯ 1,386 ಮತ್ತು 3 ಬಿಎಚ್‌ಕೆಯ 384 ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಲು ಜನವರಿ 7ರಂದು ಬಿಡಿಎ ಅಧಿಸೂಚನೆ ಹೊರಡಿಸಿದೆ. 1 ಬಿಎಚ್‌ಕೆಯ 1,510 ಮನೆಗಳಲ್ಲಿ 568 ಮನೆಗಳನ್ನು ಆದಾಯ ಮಿತಿ 1 ಲಕ್ಷದೊಳಗಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಿಡಲಾಗಿದೆ. [ಬಿಡಿಎ ವೆಬ್ ಸೈಟ್]

ದರಗಳು : ಆರ್ಥಿಕ ಮಿತಿ ಅನ್ವಯವಾಗದ ವರ್ಗಗಳಿಗೆ 1 ಬಿಎಚ್‌ಕೆ ಫ್ಲ್ಯಾಟ್‌ ದರವನ್ನು 11 ಲಕ್ಷದಿಂದ 13 ಲಕ್ಷ ದವರೆಗೆ ನಿಗದಿಪಡಿಸಲಾಗಿದೆ. 2 ಬಿಎಚ್‌ಕೆ ಫ್ಲ್ಯಾಟ್‌ಗಳಿಗೆ 25 ಲಕ್ಷ ಮತ್ತು 3 ಬಿಎಚ್‌ಕೆ ಫ್ಲ್ಯಾಟ್‌ಗೆ 45 ಲಕ್ಷ ದರವಿದೆ.

English summary
The Bangalore Development Authority (BDA) has extended the last date for submitting applications along with the initial deposit, for allotment of 3,280 flats in the outskirts of the Bengaluru city, till April 16, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X