ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಿಚ್‍ಮ೦ಡ್ ಮೇಲ್ಸೇತುವೆ ಡಾಂಬರೀಕರಣಕ್ಕೆ ಟಾರ್ ಶೀಟ್‌

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೇ ಮೊದಲ ಬಾರಿಗೆ ಮೇಲ್ಸೇತುವೆ ದುರಸ್ತಿಗೆ ಟಾರ್ ಶೀಟ್ ಬಳಸುತ್ತಿದೆ. ರಿಚ್‍ಮ೦ಡ್ ಮೇಲ್ಸೇತುವೆ ಡಾಂಬರೀಕರಣದ ನಂತರ ನಗರದ 7 ಮೇಲ್ಸೇತುವೆಗಳಲ್ಲಿ ಟಾರ್ ಶೀಟ್ ಬಳಸಲು ನಿರ್ಧರಿಸಲಾಗಿದೆ.

ಬಿಬಿಎಂಪಿ ಈಗಾಗಲೇ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ರಿಚ್‍ಮ೦ಡ್ ಮೇಲ್ಸೇತುವೆ ಕಾಮಗಾರಿಯನ್ನು ಕೈಗೊಂಡಿದೆ. ಟಾರ್ ಶೀಟ್ ಬಳಸಿ ಮೇಲ್ಸೇತುವೆ ಡಾಂಬಕರೀಕಣ ಮಾಡಲಾಗುತ್ತದೆ. ಇದರಿಂದ ರಸ್ತೆಗಳು ದೀರ್ಘ ಅವಧಿಯ ತನಕ ಬಾಳಿಕೆ ಬರುತ್ತದೆ ಎನ್ನುತ್ತಾರೆ ಬಿಬಿಎಂಪಿ ಇಂಜಿನಿಯರ್‌ಗಳು.[ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ಹೈಕೋರ್ಟ್ ಸೂಚನೆ]

BBMP using Tar sheets for Richmond Circle flyover renovation

ಟಿಕಿ ಟಾರ್‌ ಎಂಬ ಕಂಪೆನಿಯ ಟಾರ್ ಶೀಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಶೀಟ್‌ಗಳು ಜಲನಿರೋಧಕವಾಗಿವೆ. ಕಂದು ಬಣ್ಣದ ಈ ಶೀಟ್‌ಗಳನ್ನು ರಸ್ತೆಗೆ ಹಾಕಿದ ಆರು ಗಂಟೆಗಳ ಬಳಿಕ ಕಪ್ಪು ಬಣ್ಣಕ್ಕೆ ಬದಲಾಗಲಿದೆ.[ಯು ಟರ್ನ್ ಸಿನಿಮಾದ ಫ್ಲೈಓವರ್ ಗೆ ದುರಸ್ತಿ ಭಾಗ್ಯ]

ಈ ಶೀಟ್‌ಗಳನ್ನು ಡ್ರಮ್‌ನಲ್ಲಿ ಪ್ಯಾಕ್‌ ಮಾಡಿ ತರಲಾಗುತ್ತದೆ. ಪ್ರತಿ ಡ್ರಮ್‌ನಲ್ಲಿ 20 ಟಾರ್ ಶೀಟ್‌ಗಳು ಇರಲಿದ್ದು, ಅವುಗಳನ್ನು 120 ಚದರ ಮೀಟರ್‌ ತನಕ ಹಾಕಬಹುದಾಗಿದೆ. ಈ ಶೀಟ್‌ಗಳ ಮೇಲೆ ಡಾಂಬರ್ ಹಾಕಲಾಗುತ್ತದೆ. ಶೀಟ್‌ ಹಾಕಿದ ರಸ್ತೆಗಳು ಇತರ ರಸ್ತೆಗಳಿಗಿಂತ ಹೆಚ್ಚು ಬಾಳಿಕೆ ಬರುತ್ತದೆ.

ರಿಚ್‍ಮ೦ಡ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡ ಬಳಿಕ ನಗರದ 7 ಮೇಲ್ಸೇತುವೆಗಳಲ್ಲಿ ಟಾರ್ ಶೀಟ್ ಬಳಸಲು ಬಿಬಿಎಂಪಿ ನಿರ್ಧರಿಸಿದೆ. ಏಳು ಮೇಲ್ಸೇತುವೆಗಳ ದುರಸ್ತಿ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

English summary
Bruhat Bengaluru Mahanagara Palike will use tar sheets on the Richmond Circle flyover. Sheets manufactured by Tiki Tar, is weatherproof and would last long. For the first time BBMP using tar sheets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X