ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ : ಟಾಪ್ 10 ತೆರಿಗೆ ವಂಚಕರ ಪಟ್ಟಿ

By Mahesh
|
Google Oneindia Kannada News

ಬೆಂಗಳೂರು, ನ.24: ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಗೆ ಕೋಟ್ಯಂತರ ರು. ತೆರಿಗೆ ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳ ಪಟ್ಟಿಯನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ ಶಿವರಾಜ್ ಅವರು ಬಿಡುಗಡೆ ಮಾಡಿದ್ದಾರೆ.

ಟಾಪ್-10 ವಂಚಕರ ಪಟ್ಟಿಯ ಪ್ರಕಾರ ಬಿಬಿಎಂಪಿಗೆ ಸುಮಾರು 112.25ಕೋಟಿ ರೂ. ತೆರಿಗೆ ಬಾಕಿ ಬರಬೇಕಿದೆ. ಇಲ್ಲಿಯವರೆಗೂ ಹಲವಾರು ಬಾರಿ ನೋಟಿಸ್ ಜಾರಿ ಮಾಡಿದ್ರೂ ತೆರಿಗೆ ಪಾವತಿಸಿಲ್ಲ. ಇದು ಬಡ್ಡಿ ರಹಿತ ಮೊತ್ತ. ಇದಕ್ಕೆ ಮಾಸಿಕ ಶೇ.2ರಷ್ಟು ಬಡ್ಡಿ ಸೇರಿಸಿದರೆ ದುಪ್ಪಟ್ಟು ಆಗಲಿದೆ ಎಂದು ಶಿವರಾಜ್ ಹೇಳಿದ್ದಾರೆ.

* ಯಲಹಂಕ ವಲಯದ ಮಾನ್ಯತಾ ಪ್ರಮೋಟರ್ಸ್ ಪ್ರೈವೆಟ್ ಲಿಮಿಟೆಡ್‌ನಿಂದ 83.45ಕೋಟಿ
* ಮಹದೇವಪುರ ವಲಯದ ಹೂಡಿ ವಿಭಾಗದ ವೈದೇಹಿ ಆಸ್ಪತ್ರೆ-8.51 ಕೋಟಿ,
* ವೈಟ್‌ಫೀಲ್ಡ್ ವೈದೇಹಿ ಆಸ್ಪತ್ರೆ-7.97 ಕೋಟಿ,
* ದಕ್ಷಿಣ ವಲಯದ ಸುಬ್ರಹ್ಮಣ್ಯ ಕನ್‌ಸ್ಟ್ರಕ್ಷನ್-5.34 ಕೋಟಿ,
* ಮಹದೇವಪುರದ ಟೋಟಲ್‌ಮಾಲ್-1.72,
* ಬೊಮ್ಮನಹಳ್ಳಿ ವಲಯದ ಮೆ.ಯೂನೈಟೆಡ್ ಗ್ಲಾಸ್ಸ್ ಬಾಟಲ್ಸ್ ಎಂಎಫ್‌ಜಿ ಕೋ(ಲಿ)-1.37,
* ಮಹದೇವಪುರದ ಸೆಂಟ್ರಲ್ ಮಾಲ್-1.25,
* ಸೌಲ್ಸ್ ಸ್ಪೇಸ್-1.22,
* ಮಾರತಹಳ್ಳಿಯ ಹೋಮ್‌ಟೌನ್-0.91,
* ಪೂರ್ವ ವಲಯದ ಭಗವಾನ್‌ದಾಸ್ ಶರ್ಮಾ ಕಂಪೆನಿ- 0.73,

ಒಟ್ಟು 112.25 ಕೋಟಿ ರೂ. ತೆರಿಗೆಯನ್ನು ವಂಚಿಸಲಾಗಿದೆ.

BBMP unveils Top 10 defaulters

ಇನ್ನಷ್ಟು ವಂಚಕರ ಪಟ್ಟಿ ಬಿಡುಗಡೆ: ಮೊದಲನೇ ಹಂತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ತೆರಿಗೆ ವಂಚಿಸಿರುವ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಎರಡನೇ ಹಂತದಲ್ಲಿ 50ಲಕ್ಷಕ್ಕೂ ಹೆಚ್ಚು ತೆರಿಗೆ ವಂಚಕರ ಪಟ್ಟಿಯನ್ನು ಬಿಡುಗಡೆಯಾಗಲಿದೆ.

ತೆರಿಗೆ ವಂಚಿಸುತ್ತಿರುವವರ ಕಟ್ಟಡಗಳ ಮುಂಭಾಗ ಬೋರ್ಡ್ ಹಾಕುತ್ತೇವೆ. ಅಲ್ಲದೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಯಾರು ಯಾರು ತೆರಿಗೆ ಪಾವತಿಸುವುದಿಲ್ಲವೋ ಅಂಥವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಿಂದೆ-ಮುಂದೆ ನೋಡುವುದಿಲ್ಲ ಎಂದರು.

ಉತ್ತಮ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳಿಗೆ ಸ್ವಾತಂತ್ರ್ಯ ದಿನದಂದು ಸನ್ಮಾನಿಸಲಾಗುವುದು. ಇದುವರೆಗೂ ಒಂದು ವಲಯದಿಂದ 1,505ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇತರೆ ವಲಯಗಳಿಗೆ ಭೇಟಿ ನೀಡಿ ನಿಗದಿತ ಎರಡೂವರೆ ಸಾವಿರ ಕೋಟಿ ರೂ. ತೆರಿಗೆ ವಸೂಲಿಯಾಗುವ ನಿರೀಕ್ಷೆಯಿದೆ ಎಂದರು. ಒಟ್ಟಾರೆ ತೆರಿಗೆ ವಂಚಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಮರ್ಪಕ ತೆರಿಗೆ ವಸೂಲಾತಿಗೆ ಕಾನೂನಾತ್ಮಕ ಕ್ರಮ ಕೈಗೊಂಡು ತೆರಿಗೆ ಸಂಗ್ರಹಿಸಲಾಗುವುದು ಎಂದು ಹೇಳಿದರು.

English summary
After failing to recover property tax dues from the top 10 defaulters, who collectively owe the cash-strapped BBMP Rs. 112.25 crore, the civic agency will now put up flex banners outside their premises. M. Shivaraju, chairperson of BBMP’s Standing Committee for Taxation and Finance, released the list of defaulters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X