ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಲಿ ಪೆಟ್ಟಿನಿಂದ ಕ್ವೀನ್ಸ್ ರಸ್ತೆಯ ಮರಗಳು ಬಚಾವ್!

ಪಶು ಸಂಗೋಪನೆ ಇಲಾಖೆಯಿಂದ ಕ್ವೀನ್ಸ್ ರಸ್ತೆಯಲ್ಲಿ ಆಗಬಹುದಿದ್ದ ಮರಗಳ ಕಟಾವಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಿನ್ನೆಲೆಯಲ್ಲಿ ಮರಗಳನ್ನು ಕತ್ತರಿಸಲು ತಾವು ನೀಡಿದ್ದ ಅನುಮತಿಯನ್ನು ಬಿಬಿಎಂಪಿಯ ಅರಣ್ಯ

|
Google Oneindia Kannada News

ಬೆಂಗಳೂರು, ಜೂನ್ 17: ಪಶು ಸಂಗೋಪನೆ ಮತ್ತು ಪಶುವೈದ್ಯ ಸೇವೆಗಳ ಇಲಾಖೆಯ ಯೋಜನೆಯೊಂದರ ಹಿನ್ನೆಲೆಯಲ್ಲಿ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಮರಗಳಿಗೆ ಬೀಳಲಿದ್ದ ಕೊಡಲಿ ಪೆಟ್ಟು ಸದ್ಯದ ಮಟ್ಟಿಗೆ ದೂರವಾಗಿದೆ.

ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ಇಲಾಖೆ ಅಧಿಕಾರಿಗಳು ಈ ಹಿಂದೆ ಪಶು ಸಂಗೋಪನಾ ಇಲಾಖೆಗೆ ನೀಡಿದ್ದ ಮರಗಳ ಕಟಾವು ಅನುಮತಿಯನ್ನು ಹಿಂಪಡೆದಿದ್ದಾರೆ.

BBMP REVOKES PERMISSION TO CUT TREES AT GOVERNMENT VET HOSPITAL

ಈ ಬಗ್ಗೆ ವಿವರಣೆ ನೀಡಿದ ಅರಣ್ಯ ಸಂರಕ್ಷಕ ಎನ್. ಶಾಂತ ಕುಮಾರ್, ''ಪಶು ಸಂಗೋಪನಾ ಇಲಾಖೆಯು ಕ್ವೀನ್ಸ್ ರಸ್ತೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಟ್ಟುವ ಉದ್ದೇಶದಿಂದ ಮರಗಳಿಗೆ ಕೊಡಲಿ ಹಾಕುವ ಬಗ್ಗೆ ಅನುಮತಿ ಕೇಳಿತ್ತು. ಈ ಬಗ್ಗೆ ಅನುಮತಿಯೂ ನೀಡಲಾಗಿತ್ತು'' ಎಂದರು.

'ಈಗಾಗಲೇ ಇಲಾಖೆಯು ಆಸ್ಪತ್ರೆಯನ್ನು ಕಟ್ಟಲು ಮುಂದಾಗಿದೆ. ಇತ್ತೀಚೆಗೆ ಸ್ಥಳ ಪರಿಶೀಲನೆಗೆ ಹೋಗಿದ್ದ ತಮಗೆ (ಶಾಂತ ಕುಮಾರ್) ಇಲಾಖೆಯ ಉಪ ನಿರ್ದೇಶಕರಾದ ಜಿ. ನಾಗೇಂದ್ರ ಅವರು ಮರಗಳ ಕಟಾವಿನ ಬಗ್ಗೆ ಜನರೊಂದಿಗೆ ಮಾತನಾಡಿಲ್ಲ ಎಂದು ತಿಳಿದುಬಂತು. ಹಾಗಾಗಿ, ಮರಗಳ ಕಟಾವು ಅನುಮತಿ ಆದೇಶವನ್ನು ಹಿಂಪಡೆಯಲಾಗಿದೆ'' ಎಂದರು.

English summary
Activists campaigning to save four trees at the government veterinary hospital on Queens Road from being axed finally breathed a sigh of relief as Bruhat Bengaluru Mahanagara Palike (BBMP) forest officials on Friday cancelled the permission given to the department of animal husbandry and veterinary services to cut down the century-old trees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X