ಬೆಂಗಳೂರಲ್ಲಿ ಮನೆಗೊಂದೇ ಸಾಕು ನಾಯಿ ನಿಯಮ ಜಾರಿಗೆ!

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 13 : ಬೆಂಗಳೂರು ನಗರದಲ್ಲಿ ನಾಯಿಗಳ ಸಂಖ್ಯೆಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ 'ಮನೆಗೊಂದು ನಾಯಿ' ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ.

ಫ್ಲ್ಯಾಟ್‌ಗಳಲ್ಲಿ ಒಂದೇ ನಾಯಿಯನ್ನು ಸಾಕಬಹುದು. ಸೈಟ್‌ನಲ್ಲಿ ನಿಮ್ಮದೊಂದೇ ಮನೆಯಿದ್ದರೆ ಮೂರು ನಾಯಿಗಳಿಂತ ಹೆಚ್ಚು ಸಾಕುವಂತಿಲ್ಲ ಎಂಬುದು ಬಿಬಿಎಂಪಿ ಜಾರಿಗೆ ತರಲು ಹೊರಟಿರುವ ನಿಯಮ. ಪಾಲಿಕೆ ಜಾರಿಗೆ ತರಲು ಹೊರಟಿರುವ ಈ ನಿಯಮ ಪ್ರಾಣಿ ಪ್ರಿಯರ ಅಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ. [ಹನುಮಂತಪ್ಪರನ್ನು ಪತ್ತೆಹಚ್ಚಿದ ಶ್ವಾನಗಳಿಗೆ ಸೆಲ್ಯೂಟ್]

dog

ಆರು ವರ್ಷಗಳ ಹಿಂದೆ ಬಿಬಿಎಂಪಿ ಇಂತಹ ನಿಯಮ ಜಾರಿಗೆ ತರಲು ಹೊರಟಿತ್ತು. ಆದರೆ, ಕೆಲವು ಕಾರಣಗಳಿಂದಾಗಿ ಪ್ರಸ್ತಾವನೆ ಮೂಲೆಗುಂಪಾಗಿತ್ತು. ಸದ್ಯ, ಈ ಪ್ರಸ್ತಾವನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ, ಅದನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆ ಮಾಡಲಾಗಿದೆ. [ಗಣರಾಜ್ಯೋತ್ಸವದಲ್ಲಿ ಹೆಜ್ಜೆ ಹಾಕಿದ ಶ್ವಾನಗಳು]

ನಗರದಲ್ಲಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಣ ಮಾಡಲು ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಪ್ರತಿ ಮನೆಯ ಮಾಲೀಕರು ನಾಯಿಗಳನ್ನು ಸಾಕಲು ಅನುಮತಿ ಪಡೆಯಬೇಕು. 250 ರೂ. ನೀಡಿ ಪ್ರತಿವರ್ಷ ಅನುಮತಿಯನ್ನು ನವೀಕರಿಸಬೇಕಾಗಿದೆ. ['ಅಮ್ಮಾ' ಎಂದು ಬೊಗಳುವ ನಾಯಿಯನ್ನು ಬಲ್ಲಿರಾ?]

ಬೆಂಗಳೂರು ನಗರದಲ್ಲಿ 2 ಲಕ್ಷಕ್ಕೂ ಅಧಿಕ ಸಾಕುನಾಯಿಗಳಿರಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಪಾಲಿಕೆ ಜಾರಿಗೆ ತರುತ್ತಿರುವ ನಿಯಮದ ಪ್ರಕಾರ, ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಯಲ್ಲಿ ಎಷ್ಟು ನಾಯಿಗಳಿವೆ ಎಂದು ಪರಿಶೀಲನೆಯನ್ನು ನಡೆಸಬಹುದಾಗಿದೆ.

English summary
Bruhat Bengaluru Mahanagara Palike (BBMP) has proposed a one dog per flat restriction in the city. A draft notification has been sent to the urban development department.
Please Wait while comments are loading...