ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ 2015, ಪಕ್ಷಗಳ ಬಲಾಬಲ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 11 : ಬಿಬಿಎಂಪಿ ಚುನಾವಣೆ ಕಾವು ನಿಧಾನವಾಗಿ ಏರ ತೊಡಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಚುನಾವಣೆ ಗೆಲ್ಲುವ ಉತ್ಸಾಹದಲ್ಲಿದೆ. ಗೆಲುವು ಅಂದುಕೊಂಡಷ್ಟು ಸುಲಭವಾಗಿಲ್ಲ ಎಂಬುದು ಪಕ್ಷದ ನಾಯಕರಿಗೂ ಗೊತ್ತು.

ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪ್ರಮುಖ ಪಕ್ಷಗಳು. ಮೂರು ಪಕ್ಷಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಪಾಲಿಕೆಯಲ್ಲಿ ಕಳೆದ ಐದು ವರ್ಷ ಆಡಳಿತ ನಡೆಸಿದ ಬಿಜೆಪಿ ಕಸ ವಿಲೇವಾರಿಯಲ್ಲಿ ವಿಫಲವಾಗಿದೆ ಎಂಬ ಆರೋಪವಿತ್ತು. [ಕಾಂಗ್ರೆಸ್ ಪ್ರಣಾಳಿಕೆ ನೋಡಿ]

ಆದರೆ, ಈಗ ಸ್ವಚ್ಛ ಭಾರತ ಅಭಿಯಾನದ ರಾಜಧಾನಿಗಳ ಪಟ್ಟಿಯಲ್ಲಿ ಬೆಂಗಳೂರು ನಂಬರ್ ಒನ್ ಆಗಿದ್ದು ಬಿಜೆಪಿ ಮೇಲಿನ ಆರೋಪಗಳು ಸುಳ್ಳು ಎಂಬಂತೆ ಮಾಡಿದೆ. ಬಿಬಿಎಂಪಿಯನ್ನು ವಿಭಜನೆ ಮಾಡುವ ಕಾಂಗ್ರೆಸ್ ನಿರ್ಧಾರವನ್ನು ವಿರೋಧಿಸುತ್ತಿರುವ ಬಿಜೆಪಿ ಅದನ್ನೇ ಮುಖ್ಯ ವಿಷಯ ಮಾಡಿಕೊಂಡು ಪ್ರಚಾರಕ್ಕಿಳಿಯಲಿದೆ. [ಬಿಜೆಪಿ ಪ್ರಚಾರಕ್ಕಾಗಿ ಹೊಸ website]

bbmp elections 2015

ಸಿದ್ದರಾಮಯ್ಯ ಪ್ರತಿಷ್ಠೆ ಅಡಗಿದೆ : ಪರ್ಯಾಯ ನಾಯಕತ್ವದ ಬಗ್ಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಗುಸುಗುಸು ಚರ್ಚೆ ನಡೆಯುತ್ತಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದು ಪ್ರತಿಷ್ಠೆಯ ಚುನಾವಣೆ. ಒಂದು ವೇಳೆ ಚುನಾವಣೆ ಸೋತರೆ ನಾಯಕತ್ವ ಬದಲಾವಣೆ ಮಾಡಿ ಎಂಬ ಕೂಗು ಬಲವಾಗುವ ಸಾಧ್ಯತೆ ಇದೆ.

ಐವರು ಸಚಿವರಿಗೆ ಅಗ್ನಿ ಪರೀಕ್ಷೆ : ಬೆಂಗಳೂರನ್ನು ಪ್ರತಿನಿಧಿಸುವ ಐವರು ಸಚಿವರಿಗೆ ಈ ಚುನಾವಣೆ ಮಹತ್ವದ್ದು, ಸಚಿವರಾದ ರಾಮಲಿಂಗಾ ರೆಡ್ಡಿ, ಕೆಜೆ ಜಾರ್ಜ್, ರೋಷನ್ ಬೇಗ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡರಿಗೆ ಚುನಾವಣೆ ಮಹತ್ವದ್ದು, ಗೆಲುವು ಸಾಧಿಸಲು ಅವರು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ.

ಗೆಲುವು ಖಚಿತ ಎನ್ನುತ್ತಿದೆ ಬಿಜೆಪಿ : ನಿಧಾನವಾಗಿ ಪ್ರಚಾರ ಕಾರ್ಯ ಆರಂಭಿಸಿರುವ ಬಿಜೆಪಿ ಬಿಬಿಎಂಪಿ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂಬ ಭರವಸೆ ಹೊಂದಿದೆ. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಬಿಬಿಎಂಪಿ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದಕ್ಕೆ ಪಕ್ಷದಲ್ಲೇ ಕೆಲವು ನಾಯಕರ ವಿರೋಧವಿದೆ ಎಂಬ ಸುದ್ದಿ ಇದೆ. ಎಲ್ಲಾ ಅಸಮಾಧಾನ ಶಮನಗೊಂಡಿದೆ ಎಂದು ಪಕ್ಷ ಹೇಳಿದೆ.

ಪಾಲಿಕೆಯಲ್ಲಿ ಐದು ವರ್ಷಗಳ ಕಾಲ ಆಡಳಿತ ನಡೆಸಿರುವ ಬಿಜೆಪಿ ಪಾಲಿಕೆ ಬೊಕ್ಕಸ ಬರೀದಾಗಿದೆ ಎಂದು ಹೇಳುತ್ತಲೇ ಬಂದಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರನ್ನು ಕಡೆಗಣಿಸಿದ್ದಾರೆ ಎಂದು ಬಿಜೆಪಿ ಪ್ರಚಾರ ಆರಂಭಿಸಲಿದೆ.

ಜೆಡಿಎಸ್‌ ಅಧಿಕಾರಕ್ಕೆ ಬರುತ್ತಾ? : ಜೆಡಿಎಸ್ ಅಭ್ಯರ್ಥಿಗಳ ಸ್ಪರ್ಧೆಯಿಂದ ಮತಗಳು ವಿಭಜನೆಯಾದರೆ ಪಕ್ಷ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ. ಆದರೆ, ಸದ್ಯದ ವರದಿಗಳ ಪ್ರಕಾರ ಬಿಜೆಪಿ ಅಥವ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸಲಿದೆ.

ಈಗಾಗಲೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವ ಆಮ್ ಆದ್ಮಿ ಪಕ್ಷದವರು ನಮಗೆ ಬೆಂಬಲ ನೀಡಲಿ ಎಂದು ದೇವೇಗೌಡರು ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದರು. ಬೆಂಬಲ ಸಿಗಲಿದೆಯೇ ಎಂದು ಕಾದು ನೋಡಬೇಕು.

English summary
A party that rules the state is normally expected to win the civic body elections. However this time around the going does not appear that easy for the Congress which is putting every effort to seize that opportunity from the BJP in the upcoming elections to the Bruhat Bangalore Mahanagara Palike elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X